ಬೆಳಗಾವಿ: ಡಿಕೆಶಿ ಈ ದಂಡೆಯಿಂದ ಆ ದಂಡೆಗೆ ಹೋಗುವ ಗಿರಾಕಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಕೋವಿಡ್ ಬಗ್ಗೆ ಭ್ರಷ್ಟಾಚಾರ ನಡೆದಿದೆ ಎಂದು ಈಗ ಡಿಕೆಶಿ ಮಾತನಾಡುತ್ತಿದ್ದಾರೆ. ಅದೇ ಡಿಕೆ ಶಿವಕುಮಾರ್ ಹಳೆ ಬಿಲ್ಲು ನೀಡಲು 10% ಹಣ ಹೊಡೆಯುತ್ತಿದ್ದಾರೆ.
ಬಿಬಿಎಂಪಿಯಲ್ಲಂತೂ ಚದರ ಅಡಿಗಾಗಿ ಭ್ರಷ್ಟಾಚಾರ ಮಾಡುತ್ತಿದ್ದಾರೆ. ಮೇಕೆದಾಟು ಹೋರಾಟ ಹಾರಾಟ ಎಂದೆಲ್ಲಾ ಮಾತನಾಡುತ್ತಿದ್ದ ಡಿಕೆಶಿ ಈ ದಂಡೆಯಿಂದ ಆ ದಂಡೆಗೆ ಹೋಗುವ ಗಿರಾಕಿ ಎಂದು ಕಿಡಿಕಾರಿದರು.40 ಸಾವಿರ ಕೋಟಿ ಕೊಡುತ್ತೇವೆ. ಭಾರೀ ಅನುದಾನ ನೀಡುತ್ತೇವೆ ಎಂದು ಉತ್ತರ ಕರ್ನಾಕಟದ ಬಗ್ಗೆ ಕೇವಲ ಡೈಲಾಗ್ ಹೊಡೆಯುತ್ತಾರೆ ಬಿಟ್ಟರೆ ನಿಜವಾದ ಕಾಳಜಿ ಇವರಿಗೆ ಇಲ್ಲ. ಉತ್ತರ ಕರ್ನಾಟಕದವರು ನೀರಾವರಿ ಮಂತ್ರಿಯಾಗುವುದಿಲ್ಲ.
60 ವರ್ಷಗಳಿಂದ ಕೃಷ್ಣ ಮೇಲ್ದಂಡೆ ಯೋಜನೆ ಪೂರ್ಣಗೊಂಡಿಲ್ಲ.ಈ ಯೋಜನೆ ಪೂರ್ಣಗೊಳ್ಳದೇ ಇರಲು ಎಲ್ಲಾ ಸರ್ಕಾರಗಳು ಕಾರಣ. ಬೊಮ್ಮಾಯಿ, ಕಾರಜೋಳ, ಹೆಚ್‌ಕೆ ಪಾಟೀಲ್, ಎಂಬಿ ಪಾಟೀಲ್ ಇದ್ದಾಗ ಸ್ವಲ್ಪ ಸ್ವಲ್ಪ ಕೆಲಸ ಮಾಡಿದ್ದಾರೆ. ಸರ್ಕಾರ ಬಜೆಟ್‌ನಲ್ಲಿ ಹಣ ಇಡದೇ ಇದ್ದರೆ ಪಾಪ ಅವರು ಏನು ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.