ಗದಗ:- ರಾಜ್ಯದಲ್ಲಿ ಸಿಎಂ-ಡಿಸಿಎಂ ಪವರ್ ಶೇರಿಂಗ್ ಕಾದಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ.. ಪವರ್ ಶೇರಿಂಗ್ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ನಡುವಿನ ಮುಸುಕಿನ ಗುದ್ದಾಟ ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಈ ಹೊತ್ತಲ್ಲೇ ಗದಗ ಜೋಗತಿ ಅಮ್ಮನ ಭವಿಷ್ಯ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸುವಂತೆ ಮಾಡಿದೆ. ಎಸ್, ಗದಗದ ರಾಚೋಟೇಶ್ವರ ನಗರದ ನಿವಾಸಿ ಆಗಿರುವ ಭೈಲಮ್ಮ ಅವರು, ಗದ್ದುಗೆ ಹಾಕಿ ದೇವಿ ಕೊಡ ಎತ್ತುವ ಮೂಲಕ ಡಿಕೆ ಶಿವಕುಮಾರ್ ಮುಂದಿನ ಸಿಎಂ ಆಗ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.
ಹುಲಿಗೆಮ್ಮ ದೇವಿ ನೀಡಿರುವ ಭವಿಷ್ಯ ಸುಳ್ಳು ಆಗೋದಿಲ್ಲ. ಇನ್ನೂ ಒಂದುವರೆ ಎರಡು ತಿಂಗಳ ಒಳಗಾಗಿ ಡಿಕೆ ಶಿವಕುಮಾರ್ ಅವರು ಸಿಎಂ ಆಗ್ತಾರೆ. ಚಿಂತೆ ಮಾಡಬೇಡಿ. ಹುಲಿಗೆಮ್ಮ ದೇವಿ ನೆನಪಿಸಿಕೊಂಡು ಮುಂದಿನ ಹೆಜ್ಜೆ ಇಡಬೇಕು. ಎರಡುವರೆ ವರ್ಷ ರಾಜಕೀಯವಾಗಿ ರಾಜ್ಯವನ್ನು ಶಿವಕುಮಾರ್ ಆಳುತ್ತಾರೆ. ಅಲ್ಲದೇ ಖುಷಿ ಖುಷಿಯಿಂದ ಸಿದ್ದರಾಮಯ್ಯ ಸಿಎಂ ಸ್ಥಾನ ಬಿಟ್ಟು ಕೊಡುತ್ತಾರೆ ಎಂದು ಜೋಗತಿ ಅಜ್ಜಿ ಭವಿಷ್ಯ ನುಡಿದಿದ್ದಾರೆ.
ಇನ್ನೂ ಈ ಭವಿಷ್ಯ ಹೊರಬಿದ್ದ ತಕ್ಷಣ ರಾಜಕೀಯ ವಲಯದಲ್ಲಿ ಹೊಸ ಚರ್ಚೆ, ಊಹಾಪೋಹಗಳು ಶುರುವಾಗಿದೆ. ಗದಗ ಜೋಗತಿ ಅಮ್ಮನ ಈ ಭವಿಷ್ಯ ಪ್ರಸ್ತುತ ರಾಜಕೀಯ ಸ್ಥಿತಿಯಲ್ಲಿ ಮತ್ತಷ್ಟು ಕುತೂಹಲ ಮೂಡಿಸಿದೆ.



