ಯಾದಗಿರಿ: ಶ್ರೀಮಠದ ಆಶೀರ್ವಾದದಿಂದ ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ ಎಂದು ನೊಣವಿನಕೆರೆ ಸೋಮ್ಮೆಕಟ್ಟೆಶ್ರೀ ಸ್ಪೋಟಕ ಭವಿಷ್ಯ ನುಡಿದಿದ್ದಾರೆ. ಯಾದಗಿರಿಯ ಅಬ್ಬೆತುಮಕೂರಿನಲ್ಲಿ ಮಾತನಾಡಿದ ಅವರು, ನಾವು ರಾಜಕಾರಣಿಗಳಲ್ಲ, ಎಂಎಲ್ಎ ಅಲ್ಲ, ಎಂಪಿ ಅಲ್ಲ,
ಧರ್ಮದ ದೃಷ್ಟಿಯಿಂದ ಯಾರು ಮಠಕ್ಕೆ ಭಕ್ತರು ಬರ್ತಾರೋ ಅವರಿಗೆ ಆಶೀರ್ವಾದ ಮಾಡ್ತೇವೆ. ಇವತ್ತು ಕೂಡ ರಾಜ್ಯ ರಾಜಕೀಯದಲ್ಲಿ ಒಳ್ಳೆ ಮುತ್ಸದಿಯಾಗಿರುವ, ಒಳ್ಳೆ ರಾಜಕೀಯ ವ್ಯಕ್ತಿಗೆ ಸಮಾಜ ಗುರುತಿಸಲಿ ಎಂದರು.
ಇದೇ ವೇಳೆ ಶ್ರೀಮಠದ ಆಶೀರ್ವಾದದಿಂದ ಡಿಕೆಶಿ ಸಿಎಂ ಆಗ್ತಾರೆ. ರೈತರ, ವರ್ತಕರ ಹಾಗೂ ಮಠದ ಭಕ್ತರ ಆಸೆ ಅವರು ಸಿಎಂ ಆಗಲಿ ಎಂಬುದೇ ಆಗಿದೆ. ಎಲ್ಲಾ ಜನರ ಸಂಕಲ್ಪದಿಂದ ಒಂದು ದಿನ ಸಿಎಂ ಆಗ್ತಾರೆ. ಯಾವ ದಿನ ಸಿಎಂ ಆಗ್ತಾರೆ ಎಂದು ಹೇಳೋಕೆ ಆಗಲ್ಲ ಎಂದಿದ್ದಾರೆ.
ಅಬ್ಬೆತುಮಕೂರು ವಿಶ್ವಾರಾಧ್ಯರ ಗದ್ದುಗೆಗೂ ಬಂದಿದ್ದೇನೆ. ಅವರ ಆಶೀರ್ವಾದವೂ ಡಿಕೆಶಿಗೆ ಸಿಗಲಿ. ಶ್ರೀ ಶೈಲ ಜಗದ್ಗುರುಗಳು ಬಂದಿದ್ದಾರೆ. ಆ ಪರಮಾತ್ಮನ ಆಶೀರ್ವಾದವೂ ಅವರಿಗೆ ಸಿಗಲಿ ಎಂದು ಸ್ವಾಮೀಜಿ ಹೇಳಿದ್ದಾರೆ.