ಚೆನ್ನೈ: ರಾಜ್ಯ ಕಾಂಗ್ರೆಸ್ ನ ಬಣ ಬಡಿದಾಟದ ಕಾವು ದಿನದಿಂದ ದಿನಕ್ಕೆ ಜೋರಾಗ್ತಿದೆ, ಕಳೆದ ವಾರ ಸಚಿವ ಸತೀಶ್ ಜಾರಕಿಹೊಳಿ ಮನೆಯಲ್ಲಿ ಡಿನ್ನರ್ ಪಾಲಿಟಿಕ್ಸ್ ನಡೆದ್ರೆ, ಗೃಹ ಸಚಿವ ಪರಮೇಶ್ವರ್ ಕರೆದ ಡಿನ್ನರ್ ಮೀಟಿಂಗ್ ಗೆ ಹೈಕಮಾಂಡ್ ಬ್ರೇಕ್ ಹಾಕಿದೆ.
ಇದರ ಬೆನ್ನಲ್ಲೇ ಡಿಸಿಎಂ ಡಿಕೆ ಶಿವಕುಮಾರ್ ಕುಟುಂಬ ಸಮೇತ ತಮಿಳುನಾಡಿನ ಕುಂಭಕೋಣಂ ಜಿಲ್ಲೆಯ ಅಯ್ಯಾವುಡಿಯಲ್ಲಿರುವ ಪ್ರಾಚೀನ ಪ್ರತ್ಯಂಗಿರಾ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ಉಗ್ರ ಸ್ವರೂಪಿಣಿ ಪ್ರತ್ಯಂಗಿರಾ ದೇವಿಯ ದರ್ಶನ ಪಡೆದರು.
ಕುಂಬಕೋಣಂನಲ್ಲಿ ಪ್ರತ್ಯಂಗಿರ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಕಾಂಚಿಪುರಂನ ವರದರಾಜುಪೆರುಮಾಳ್ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ತಮಿಳುನಾಡಿಗೆ ಇಂದು ಹೆಲಿಕಾಪ್ಟರ್ ನಲ್ಲಿ ಬಂದಿಳಿದ ಡಿಸಿಎಂ ಡಿ ಕೆ ಶಿವಕುಮಾರ್ ಅವರನ್ನು ಸ್ಥಳೀಯ ಮೇಯರ್ ಶರವಣನ್, ತಂಜಾವೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲೋಕನಾಥನ್, ಕಾಂಗ್ರೆಸ್ ಮುಖಂಡರಾದ ಕೃಷ್ಣಸ್ವಾಮಿ, ವೆಂಕಟೇಶ್ ಮತ್ತಿತರರು ಬರಮಾಡಿಕೊಂಡರು.