ವಿಜಯಪುರ: ಡಿಕೆಶಿ ಶಿವರಾತ್ರಿ ಆಚರಣೆಯಲ್ಲಿ ಭಾಗಿ ವಿಚಾರಕ್ಕೆ ಸಂಬಂಧಿಸಿದಂತೆ ಒಂದಕ್ಕೊಂದು ಮಿಕ್ಸ್ ಮಾಡುವ ಅವಶ್ಯಕತೆ ಇಲ್ಲ ಎಂದು ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು,
ಅದು ಅವರ ವೈಯಕ್ತಿಕ ವಿಚಾರ. ನನ್ನ ವೈಯಕ್ತಿಕ ವಿಚಾರ ಪಕ್ಷದಲ್ಲ. ಪಕ್ಷದ ವಿಚಾರ ನನ್ನ ವೈಯಕ್ತಿಕ ಅಲ್ಲ. ನನ್ನ ವೈಯಕ್ತಿಕ ಅಸ್ಮಿತೆ, ನನ್ನ ವೈಯಕ್ತಿಕ ಆಚರಣೆ ಅದು ಬೇರೆ ಎಂದು ಸಮರ್ಥಿಸಿಕೊಂಡರು. ಹೀಗಾಗಿ ಒಂದಕ್ಕೊಂದು ಮಿಕ್ಸ್ ಮಾಡುವ ಅವಶ್ಯಕತೆ ಇಲ್ಲ.
ಪಕ್ಷದ ಸಿದ್ದಾಂತ ಇರುತ್ತದೆ. ಡಿಕೆಶಿ ಅವರು ಹಿಂದೂ ಅಲ್ವಾ. ಶಿವರಾತ್ರಿಗೆ ಹೋದ್ರೆ ಏನಾಗುತ್ತೆ, ಪಕ್ಷದ ವಿರುದ್ಧ ಆಗುತ್ತಾ. ನಾನು ಶಿವರಾತ್ರಿಗೆ ಲಿಂಗದ ಗುಡಿಗೆ ಹೋಗಿದ್ದೆ. ಶಿವಗಿರಿಗೆ ಹೋಗಿದ್ದೆ. ಅಮಿತ್ ಶಾ ಅವರ ಜೊತೆಯಲ್ಲಿ ಡಿಕೆಶಿ ಅವರು ಶಿವರಾತ್ರಿ ಕಾರ್ಯಕ್ರಮದಲ್ಲಿ ಭಾಗಿ ಆದರೆ ಏನು ತಪ್ಪಿದೆ. ಅನೇಕ ಕಾರ್ಯಕ್ರಮಗಳಲ್ಲಿ ನಮ್ಮನ್ನೂ ಕರೆದಿರುತ್ತಾರೆ, ಅವರನ್ನೂ ಕರೆದಿರುತ್ತಾರೆ ಎಂದು ಹೇಳಿದರು.