ಚಿಕ್ಕೋಡಿ: ಗುರುಗಳ ದಯೆಯಿಂದ ಡಿಕೆಶಿ ಸಿಎಂ ಆಗ್ತಾರೆ ಅನ್ನೋದು ನನ್ನ ನಂಬಿಕೆ ಎಂದು ಚಿಕ್ಕಮಗಳೂರಿನ ಗೌರಿಗದ್ದೆ ಆಶ್ರಮದ ವಿನಯ್ ಗುರೂಜಿ ಹೇಳಿದ್ದಾರೆ. ಚಿಕ್ಕೋಡಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ವಿನಯ್ ಗುರೂಜಿ,
Advertisement
ಸಿದ್ದರಾಮಯ್ಯ ಅವರ ನಂತರ ಅವಕಾಶ ಸಿಕ್ಕರೆ ಕಾಂಗ್ರೆಸ್ ಪಕ್ಷದಲ್ಲಿ ಎಲ್ಲಾ ನಾಯಕರು ಕೆಲಸ ಮಾಡಿದ್ದಾರೆ. ಆದ್ರೆ ಡಿಕೆ ಶಿವಕುಮಾರ್ ಅವರು ಅಧ್ಯಕ್ಷ ಸ್ಥಾನದಲ್ಲಿದ್ದು,
ಪಕ್ಷವನ್ನು ಒಂದುಗೂಡಿಸಿ, ಪಾದಯಾತ್ರೆ ಕಾರ್ಯ, ಗುರು ನಿಷ್ಠೆ, ಪಕ್ಷನಿಷ್ಠೆ, ಹಿರಿಯರ ಮೇಲಿನ ಭಕ್ತಿ, ನಾಟಕೀಯವಿಲ್ಲದ ಮಾತು ಇವೆಲ್ಲವನ್ನೂ ನೋಡುವಾಗ ಅವರನ್ನು ಸಿಎಂ ಆಗಿ ಸೇವೆ ಮಾಡುವ ಅವಕಾಶ ಆ ಭಗವಂತ ನೀಡ್ಬೇಕು. ಅವರ ಗುರುಗಳ ದಯೆಯಿಂದಲೂ ಅವರು ಸಿಎಂ ಆಗ್ತಾರೆ ಅನ್ನೋದು ನನ್ನ ನಂಬಿಕೆ ಎಂದು ಗುರೂಜಿ ಹೇಳಿದ್ದಾರೆ.