ಸಾಲ ನೀಡುವಲ್ಲಿ ವಿಳಂಬ ಬೇಡ : ಜಿ.ಪಂ ಸಿಇಒ ಭರತ್ ಎಸ್

0
DLRC Meeting of Lead Bank
Spread the love

ವಿಜಯಸಾಕ್ಷಿ ಸುದ್ದಿ, ಗದಗ : ವಿವಿಧ ಇಲಾಖೆಯಿಂದ ಸಬ್ಸಿಡಿ ಸಹಿತ ಸಾಲ ನೀಡುವಾಗ ಬ್ಯಾಂಕ್ ಅಧಿಕಾರಿಗಳು ನಿರ್ಲಕ್ಷ್ಯ ವಹಿಸದೇ ಕಾರ್ಯನಿರ್ವಹಿಸಬೇಕು ಎಂದು ಜಿ.ಪಂ ಸಿಇಒ ಭರತ್ ಎಸ್ ಹೇಳಿದರು.

Advertisement

ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಲೀಡ್ ಬ್ಯಾಂಕ್‌ನ ಡಿಎಲ್‌ಆರ್‌ಸಿ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಇಖೆಯ ನೆಟ್‌ವರ್ಕ್, ಠೇವಣಿಗಳು, ಮುಂಗಡಗಳು ಮತ್ತು ಬ್ಯಾಂಕ್‌ಗಳ ಸಾಲ ಠೇವಣಿ (ಸಿಡಿ) ಅನುಪಾತದ ವರದಿಯನ್ನು ಪಡೆದು ಮಾತನಾಡಿ, ಬ್ಯಾಂಕ್ ಮ್ಯಾನೇಜರ್‌ಗಳು ರೈತರು ಮತ್ತು ಸಾರ್ವಜನಿಕರಿಗೆ ಒದಗಿಸಬೇಕಾದ ಸೌಲಭ್ಯಗಳನ್ನು ವಿಳಂಬ ಮಾಡದೇ ಸಮಯಕ್ಕೆ ಸರಿಯಾಗಿ ನೀಡಬೇಕು ಎಂದು ಸೂಚಿಸಿದರು.

ಲೀಡ್ ಬ್ಯಾಂಕ್‌ನ ಮ್ಯಾನೇಜರ್ ಜಬ್ಬಾರ್, ಎಸಿಪಿ ಮತ್ತು ಆದ್ಯತಾ ವಲಯದ ಸಾಲದ ಅಡಿಯ ಸಾಧನೆ, ಪಿಎಂಎಸ್ ನಿಧಿ ಅಡಿಯ ಸಾಧನೆ, ಸರ್ಕಾರಿ ಪ್ರಾಯೋಜಿತ ಯೋಜನೆ ಸಾಲಗಳ ಅಡಿಯಲ್ಲಿ ಸಾಧನೆ ಮತ್ತು ಸಾಮಾಜಿಕ ಭದ್ರತಾ ಯೋಜನೆಗಳ ಸಾಧನೆ ಕುರಿತು ವರದಿಯನ್ನು ನೀಡಿ, ಆರ್‌ಬಿಐ ಹೊರಡಿಸಿದ ಇತ್ತೀಚಿನ ಮಾರ್ಗಸೂಚಿಗಳ ಕುರಿತು ಮಾಹಿತಿ ನೀಡಿದರು. ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಗಳು ಹೆಚ್ಚಾಗುತ್ತಿದ್ದು, ಎಲ್ಲಾ ಬ್ಯಾಂಕಿಗಳಲ್ಲಿ ಸೈಬರ್ ಕ್ರೈಂ ಸಹಾಯವಾಣಿ ಸಂಖ್ಯೆ 1930 ಲಗತ್ತಿಸಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಎಲ್ಲಾ ಪ್ರಾದೇಶಿಕ ಬ್ಯಾಂಕ್ ಮ್ಯಾನೇಜರ್, ಜಿಲ್ಲಾ ಸಂಯೋಜಕರು, ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.


Spread the love

LEAVE A REPLY

Please enter your comment!
Please enter your name here