ತಮಿಳುನಾಡು: ತಮಿಳುನಾಡಿನ ಮೈಲಾಡುತುರೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಫೆಡ್ಲೈಟ್ ಕಂಬ ಕುಸಿದುಬಿದ್ದಿದ್ದು, ವೇದಿಕೆ ಮೇಲೆ ಮಾತನಾಡುತ್ತಿದ್ದ ಡಿಎಂಕೆ ಸಂಸದ ಎ ರಾಜಾ ಅವರು ಅಪಾಯದಿಂದ ಪಾರಾಗಿದ್ದಾರೆ.
Advertisement
ಬಲವಾದ ಗಾಳಿಯಿಂದಾಗಿ ವೇದಿಕೆಯ ಬಳಿ ಓವರ್‌ಹೆಡ್ ಫೋಕಸ್ ದೀಪಗಳು ಕುಸಿದು ಬಿದ್ದು ಡಯಾಜ್ ಮೇಲೆ ಬಿದ್ದಿದೆ. ಫೋಕಸ್ ದೀಪಗಳು ಬೀಳುವುದನ್ನು ನೋಡಿದ್ದ ರಾಜಾ ಅವರು ತಮ್ಮ ಎಡಗಡೆ ಸರಿದ ಪರಿಣಾಮ ಅಪಾಯದಿಂದ ಪಾರಾಗಿದ್ದಾರೆ.
ಒಂದು ವೇಳೆ ಅವರು ಭಾಷಣ ಮಾಡುತ್ತಲೇ ಇರುತ್ತಿದ್ದರೆ ಗಾಯಗೊಳ್ಳುವ ಸಾಧ್ಯತೆ ಇತ್ತು. ಓವರ್‌ಹೆಡ್ ಫೋಕಸ್ ದೀಪಗಳು ಕುಸಿದು ಡಯಾಜ್ ಮೇಲೆ ಬೀಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಜನ್ಮದಿನ ಮತ್ತು ರಾಜ್ಯಪಾಲರ ವಿಷಯದಲ್ಲಿ ಪಕ್ಷದ ಕಾನೂನು ವಿಜಯವನ್ನು ಆಚರಿಸಲು ಡಿಎಂಕೆ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.