ದಾವಣಗೆರೆ: ತೆವಲು ತೀರಿಸಿಕೊಳ್ಳಲು ಹೇಳಿಕೆ ಕೊಟ್ಟರೆ ನಾನು ಉತ್ತರ ಕೊಡಬೇಕಾ? ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಜಿಲ್ಲೆಯಲ್ಲಿ ಮಾತನಾಡಿದ ಅವರು, ನಾನು ಸಿಎಂ ಆಗಿದ್ದಾಗ ವೆಸ್ಟೆಂಡ್ ಹೊಟೇಲ್ನಲ್ಲಿ ಇದ್ದಿದ್ದು ನಿಜ. ಇದೇ ಬಾಲಕೃಷ್ಣ ಬಗ್ಗೆ ಸಿದ್ದರಾಮಯ್ಯ ಹಾಗೂ ಮಹಾದೇವಪ್ಪ ಆರು ನೂರು ಕೋಟಿ ಹಣ ರೂ. ಕಾಮಗಾರಿ ಮಾಡದೇ ಬಿಲ್ ಮಾಡಿಕೊಂಡಿದ್ದಾರೆ ಎಂದು ವಿಧಾನ ಸಭೆಯಲ್ಲಿ ಆರೋಪ ಮಾಡಿದ್ದರು.
Advertisement
ಅಂತವರನ್ನೆ ಸಿಎಂ ಜೊತೆಗಿಟ್ಟು ಕೊಂಡಿದ್ದಾರೆ. ಇವರು ನಾನು ಸಿಎಂ ಆಗಿದ್ದಾಗಲೂ ನನ್ನ ಜೊತೆಗೆ ಇದ್ದಾರೆ. ಆಗ ಚೂರಿ ಹಾಕಿ ಬಿಟ್ಟು ಹೋಗಿದ್ದರು. ತೆವಲು ತೀರಿಸಿಕೊಳ್ಳಲು ಹೇಳಿಕೆ ಕೊಟ್ಟರೆ ನಾನು ಉತ್ತರ ಕೊಡಬೇಕಾ? ಚನ್ನಪಟ್ಟಣದಲ್ಲಿ ನಾನೇ ಅಭ್ಯರ್ಥಿ. ಏನೇ ಆಗಲಿ ಎನ್ಡಿಎ ಅಭ್ಯರ್ಥಿ ನಾನೇ ಎಂದು ಕಿಡಿಕಾರಿದ್ದಾರೆ.