ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ : ಇಲ್ಲಿಯ ಗೋಪನಕೊಪ್ಪದ ಶಾಂತವೀರ ಬಡಾವಣೆಯ ಬಸವರಾಜ ಶೆಟ್ಟರ್ ಅವರ ಮನೆಯ ಕಾಂಪೌಂಡ್ ಒಳಭಾಗದಲ್ಲಿನ ಹೂವಿನ ಕುಂಡದಲ್ಲಿ ನಾಗರ ಹಾವೊಂದು ನುಸುಳಿತ್ತು. ಈ ಸುದ್ದಿ ತಿಳಿದ ಸ್ನೇಕ್ ಗಣೇಶ ತಕ್ಷಣ ಸ್ಥಳಕ್ಕೆ ಬಂದು ಆ ಹಾವನ್ನು ಒಂದು ಪ್ಲಾಸ್ಟಿಕ್ ಡಬ್ಬದಲ್ಲಿ ಹಿಡಿಯುವ ಕಾರ್ಯಾಚರಣೆಯಲ್ಲಿ ಯಶಸ್ವಿಯಾದರು.
ಆ ಹಾವನ್ನು ಸಮೀಪದ ದಾಂಡೇಲಿ ಅರಣ್ಯ ಪ್ರದೇಶದಲ್ಲಿ ಬಿಡಲಾಗುವುದೆಂದು ತಿಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸ್ನೇಕ್ ಗಣೇಶ, ಹಾವು ಬಂತೆಂದು ತಕ್ಷಣ ಯಾರು ಕೂಡ ಯಾವುದೇ ಕಾರಣಕ್ಕೂ ಭಯಭೀತರಾಗಿ ಅದನ್ನು ಹೊಡೆಯುವ ಸಾಹಸ ಮಾಡಬೇಡಿ. ಪರಿಸರದ ಸುಸ್ಥಿತಿಗೆ ಎಲ್ಲ ಪ್ರಾಣಿಗಳು ಮಹತ್ವವಾಗಿವೆ ಎಂದು ತಿಳಿಸಿದರು.
ಹುಬ್ಬಳ್ಳಿಯ ಯಾವುದೇ ಭಾಗದಲ್ಲಾದರೂ ಹಾವುಗಳು ಕಾಣಿಸಿಕೊಂಡಾಗ ತಕ್ಷಣ ನನ್ನ ಮೊಬೈಲ್ ನಂಬರ್-7676277673 ಕರೆ ಮಾಡಿದರೆ ಸ್ಥಳಕ್ಕೆ ಬಂದು ಹಾವುಗಳನ್ನು ಹಿಡಿದುಕೊಂಡು ಹೋಗುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಬಸವರಾಜ್ ಶೆಟ್ಟರ್, ಮೃತ್ಯುಂಜಯ್ ಶೆಟ್ಟರ್, ಗುಡ್ಡಪ್ಪ ಭೂಶೆಟ್ಟಿ, ಯುವರಾಜ್, ಹರ್ಷಿತ್ ಭೂಶೆಟ್ಟಿ ಮುಂತಾದವರು ಇದ್ದರು.