ಮಳೆಗಾಲದಲ್ಲಿ ಜನತೆ ಸಾಕಷ್ಟು ಎಚ್ಚರ ವಹಿಸೋದು ಅವಶ್ಯಕ. ಆರೋಗ್ಯ ಸಮಸ್ಯೆಗಳು ಎದುರಾಗುವ ಜೊತೆಗೆ ಗುಡುಗು ಸಿಡಿಲು ಜೀವಕ್ಕೆ ಹಾನಿ ಮಾಡಬಹುದು. ಇದರೊಂದಿಗೆ ಹಾವು, ಚೇಳಿನಂತಹ ಪ್ರಾಣಿಗಳು ನೀರಿನಲ್ಲಿ ಹರಿದು ಬರಬಹುದು.
ಮಾತ್ರವಲ್ಲ ಇವು ಮನೆಯ ಸುತ್ತಮತ್ತ ಹರಿದಾಡುವ ಮೂಲಕ ಹಾಗೂ ನಮಗೆ ತಿಳಿಯದಂತೆ ಮನೆಯ ಒಳಗೆ ಕೂಡ ಬಂದು ಸೇರಿಕೊಳ್ಳಬಹುದು. ಹಾಗಾಗಿ ಹಾವುಗಳು ಮನೆಯ ಬಳಿ ಸುಳಿಯದಂತೆ ಮಾಡಲು ಕೆಲವು ಕ್ರಮಗಳನ್ನು ತಪ್ಪದೇ ಅನುಸರಿಸಬೇಕು.
ಇನ್ನೂ ಹಾವುಗಳು ಅಂದ್ರೆ ಸಾಮಾನ್ಯವಾಗಿ ಎಲ್ಲರಿಗೂ ಭಯ. ಒಂದು ವೇಳೆ ಹಾವು ಮನೆಯೊಳಗೆ ಪ್ರವೇಶ ಮಾಡಿದ್ರೆ ಏನು ಮಾಡಬೇಕು ಎಂಬುವುದನ್ನು ಈ ಸುದ್ದಿಯಲ್ಲಿ ತಿಳಿಯೋಣ ಬನ್ನಿ.
ಹಾವು ಮನೆಯ ಯಾವುದೇ ಮೂಲೆಯಲ್ಲಿ ಅಡಗಿ ಕುಳಿತಿದ್ರೂ ನೀವು ಟೆನ್ಷನ್ ಮಾಡಿಕೊಳ್ಳದೇ ನಿಮ್ಮ ಮನೆಯಲ್ಲಿರುವ ಒಂದು ವಸ್ತುವನ್ನು ಅದ್ರ ಸುತ್ತ ಮುತ್ತ ಹಾಕಿದ್ರೆ ಸಾಕು. ಹಾವು ಸದ್ದಿಲ್ಲದೆ ನಿಮ್ಮ ಮನೆ ಬಿಡುತ್ತದೆ. ನಾವಿಂದು ಹಾವು ಓಡಿಸಲು ನೀವು ಯಾವ ವಸ್ತುವನ್ನು ಬಳಸಬೇಕು ಎಂಬುದನ್ನು ಹೇಳ್ತೇವೆ ಕೇಳಿ.
ಎಸ್, ಹಾವು ಶತ್ರುವಲ್ಲ. ಅದಕ್ಕೆ ಹಾನಿ ಮಾಡದೆ ಅದು ನಿಮಗೆ ಹಾನಿ ಮಾಡುವುದಿಲ್ಲ. ಹಾವು ಮನೆಯಲ್ಲಿದ್ದರೆ ನೀವು ಭಯಪಡುವ ಬದಲು ಮನೆಯಲ್ಲಿರುವ ವಸ್ತುವನ್ನು ಬಳಸಿ. ಹಾವುಗಳು ತೀವ್ರವಾದ ವಾಸನೆಗೆ ಹೆದರುತ್ತದೆ. ಅದರಿಂದ ವಿಚಲಿತವಾಗಿ ಅಲ್ಲಿಂದ ದೂರ ಓಡುತ್ತದೆ. ಹಾವು ಅಡಗಿ ಕುಳಿತಿರುವ ಜಾಗದಲ್ಲಿ ನೀವು ಹೇರ್ ಆಯಿಲ್ ಸ್ಪ್ರೇ ಮಾಡಬಹುದು.
ಇಲ್ಲವೆ ಫಿನೈಲ್, ಬೇಕಿಂಗ್ ಪೌಡರ್, ಸೀಮೆ ಎಣ್ಣೆಯನ್ನು ಸಿಂಪಡಿಸಬಹುದು. ನೀವು ಯಾವುದೇ ಕಾರಣಕ್ಕೂ ಹಾವಿನ ಮೈಮೇಲೆ ಈ ವಸ್ತುಗಳನ್ನು ಹಾಕಬೇಡಿ. ಅದ್ರಲ್ಲೂ ಫಿನೈಲ್ ಹಾಕಬೇಡಿ. ಇದು ಹಾವಿಗೆ ಹಾನಿಯುಂಟು ಮಾಡುತ್ತದೆ. ಹಾವು ಅಡಗಿರುವ ಜಾಗದ ಸುತ್ತ ಇದನ್ನು ಹಾಕಿದರೆ ಸಾಕು.
ಬಹುತೇಕರ ಮನೆಯಲ್ಲಿ ಜಿರಲೆ ಹಾಗೂ ಸೊಳ್ಳೆ ಓಡಿಸಲು ಹಿಟ್ ನಂತಹ ಕೀಟನಾಶಕ ಬಳಕೆ ಮಾಡ್ತಾರೆ. ನಿಮ್ಮ ಮನೆಯಲ್ಲೂ ಇದಿದ್ದಲ್ಲಿ ನೀವು ಹಾವಿನ ಸುತ್ತ ಇದನ್ನು ಸ್ಪ್ರೇ ಮಾಡಿ. ಕೀಟನಾಶಕದ ಬಲವಾದ ವಾಸನೆಯನ್ನು ಹಾವು ಸಹಿಸುವುದಿಲ್ಲ. ಈ ರೀತಿ ಮಾಡುವ ಮೂಲಕ ಹಾವುಗಳನ್ನು ಸುಲಭವಾಗಿ ಓಡಿಸಬಹುದು.