ನೀವು ಕೂಡ ಹೀಗೆ ಮಾಡ್ತೀರಾ? ಮನೆಯೊಳಗೆ ಒದ್ದೆ ಬಟ್ಟೆ ಒಣಗಿಸುವ ಅಭ್ಯಾಸ ಇರುವವರು ನೋಡಲೇಬೇಕಾದ ಸ್ಟೋರಿ!

0
Spread the love

ಬಟ್ಟೆ ಒಗೆದ ನಂತರ ಅದನ್ನು ಒಣಹಾಕಲು ಹೊರಗೆ ಬಿಸಿಲಿಗೆ ಹಾಕುತ್ತೇವೆ. ಆದರೆ ಮಳೆಗಾಲದಲ್ಲಿ ಹೊರಗೆ ಒಣಹಾಕಲು ಸಾಧ್ಯವಾಗೋದಿಲ್ಲ, ಅಂತಹ ಸಂದರ್ಭದಲ್ಲಿ ಮನೆಯೊಳಗೆ ಬಟ್ಟೆ ಒಣ ಹಾಕುತ್ತೇವೆ.

Advertisement

ಆದರೆ ಕೆಲವರು ಯಾವುದೇ ಕಾಲದಲ್ಲಾಗಲಿ ಬಟ್ಟೆಯನ್ನು ಮನೆಯೊಳಗೆ ಒಣಹಾಕುತ್ತಾರೆ. ಬಹುಶಃ ಹೊರಗಡೆ ಬಟ್ಟೆ ಒಣಹಾಕಲು ಜಾಗ ಇಲ್ಲದೇ ಇರಬಹುದು. ಆದರೆ ಇನ್ನೂ ಕೆಲವರು ಹೊರಗಡೆ ಜಾಗವಿದ್ದರೂ ಮನೆಯೊಳಗೆ ಬಟ್ಟೆ ಒಣ ಹಾಕುವ ಅಭ್ಯಾಸವನ್ನು ಹೊಂದಿದ್ದಾರೆ.

ಮಳೆಗಾಲ, ಚಳಿಗಾಲದಲ್ಲಿ ಮನೆಯೊಳಗೆ ಫ್ಯಾನ್ ಆನ್ ಮಾಡಿ ಬಟ್ಟೆಗಳನ್ನು ಒಣಗಿಸುವ ಅಭ್ಯಾಸವನ್ನು ಸಾಕಷ್ಟು ಜನರು ಹೊಂದಿರುತ್ತಾರೆ. ಮನೆಯೊಳಗೆ ಬಟ್ಟೆಗಳನ್ನು ಒಣಗಿಸುವುದರಿಂದ ಹೊರಗಡೆಗಿಂತ ವೇಗವಾಗಿ ಒಣಗುತ್ತವೆ ಎಂಬ ನಂಬಿಕೆ. ಆದರೆ ಈ ಅಭ್ಯಾಸ ನಿಮ್ಮ ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದು ನಿಮಗೆ ತಿಳಿದಿದೆಯೇ? ಮನೆಯೊಳಗೆ ಒದ್ದೆ ಬಟ್ಟೆಯನ್ನು ಒಣಗಿಸುವ ಅಭ್ಯಾಸ ಫಂಗಸ್ ಸೇರಿದಂತೆ ಹಲವು ರೀತಿಯ ಸೋಂಕುಗಳು ಕಾಣಿಸಿಕೊಳ್ಳಲು ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಸುತ್ತಾರೆ.

ಮನೆಯೊಳಗೆ ಒದ್ದೆ ಬಟ್ಟೆಯನ್ನು ಒಣಗಿಸುವ ಅಭ್ಯಾಸ ಸೈನಸ್ ಮತ್ತು ಅಲರ್ಜಿಗಳು ಮಕ್ಕಳಲ್ಲಿ ನ್ಯುಮೋನಿಯಾವನ್ನು ಉಂಟುಮಾಡಬಹುದು. ಇದಲ್ಲದೇ ಶ್ವಾಸಕೋಶದ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ’ ಎಂದು ಅಧ್ಯಯನ ಒಂದು ತಿಳಿಸಿದೆ.

ಮನೆಯಲ್ಲಿ ಬಟ್ಟೆಗಳನ್ನು ಒಣಗಿಸುವುದು ಕೋಣೆಯಲ್ಲಿ ತೇವಾಂಶವನ್ನು 30 ಪ್ರತಿಶತದಷ್ಟು ಹೆಚ್ಚಿಸುತ್ತದೆ ಎಂದು ಅಧ್ಯಯನವು ಕಂಡುಹಿಡಿದಿದೆ, ಇದು ಆರ್ಸ್ಪೆಜಿಲ್ಲಸ್ ಫ್ಯೂಮಿಗೇಟಸ್ ಎಂಬ ಶಿಲೀಂಧ್ರದ ಬೀಜಕಗಳ ಬೆಳವಣಿಗೆಗೆ ಕಾರಣವಾಗುತ್ತದೆ. ಇದು ಉಸಿರಾಟದ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ತಜ್ಞರು ಹೇಳುತ್ತಾರೆ.

ನಿಮ್ಮ ಒದ್ದೆಯಾದ ಬಟ್ಟೆಗಳನ್ನು ಮನೆಯಲ್ಲಿಯೇ ಒಣಗಿಸಬೇಕಾದರೆ, ಕೆಲವು ಸಲಹೆಗಳನ್ನು ಅನುಸರಿಸಬೇಕು. ನೀರನ್ನು ಸಂಪೂರ್ಣವಾಗಿ ಹಿಂಡಿದ ನಂತರವೇ ಒಣಗಿಸಬೇಕು. ಇದಲ್ಲದೇ ಬಟ್ಟೆ ಒದ್ದೆಯಾಗಿರುವಾಗ ಅವುಗಳ ತೇವಾಂಶವನ್ನು ಕಡಿಮೆ ಮಾಡಲು ಉಪ್ಪು ಉತ್ತಮ ಮಾರ್ಗವಾಗಿದೆ. ಉಪ್ಪು ತೇವಾಂಶವನ್ನು ಹೀರಿಕೊಳ್ಳುತ್ತದೆ. ಇದು ಶಿಲೀಂಧ್ರವನ್ನು ನಿಯಂತ್ರಿಸುತ್ತದೆ. ಮನೆಯಲ್ಲಿ ಬಟ್ಟೆ ಒಣಗಿಸಿದಾಗ ದುರ್ವಾಸನೆ ಬರದಿರಲು, ಬಟ್ಟೆ ತೊಳೆಯುವಾಗ ನೀರಿನಲ್ಲಿ 2 ಚಮಚ ವಿನೆಗರ್ ಸೇರಿಸಿ. ಇದರಿಂದ ಮನೆ ಕೆಟ್ಟ ವಾಸನೆ ಬರದಂತೆ ನೋಡಿಕೊಳ್ಳುತ್ತದೆ.


Spread the love

LEAVE A REPLY

Please enter your comment!
Please enter your name here