ಟೊಮೆಟೊ ಇಲ್ಲದ ಮನೆಯಿಲ್ಲ ಅಂದ್ರೆ ತಪ್ಪಾಗಲಾರದು. ಟೊಮೆಟೊ ಬಹುಪಯೋಗಿ ತರಕಾರಿ. ಸಾಸ್, ಕೆಚಪ್, ಸೂಪ್, ಸಾಂಬಾರ್ ಸೇರಿದಂತೆ ಚಾಟ್ಸ್ ಗೆ ಕೂಡ ಟೊಮೆಟೊ ಬೇಕೇಬೇಕು. ಟೊಮೆಟೊ ಆಹಾರಕ್ಕೆ ವಿಶೇಷ ರುಚಿ ನೀಡುತ್ತದೆ.
Advertisement
ನಮ್ಮ ದೇಹ ಮತ್ತು ಮನಸ್ಸನ್ನು ಸುಸ್ಥಿರವಾಗಿಡಲು ಪ್ರಕೃತಿಯು ಔಷಧಿ ಗುಣಗಳನ್ನು ಹೊಂದಿರುವ ತರಕಾರಿ, ಹಣ್ಣುಗಳನ್ನು ನಮಗೆ ನೀಡಿದೆ. ಅದ್ರಲ್ಲಿ ಟೊಮೆಟೊ ಕೂಡ ಒಂದು. ಟೊಮೆಟೊ ಆರೋಗ್ಯಕ್ಕೆ ಬಹಳ ಒಳ್ಳೆಯದು. ಆದ್ರೆ ಟೊಮೆಟೊ ಸೇವಿಸುವುದರಿಂದ ಕೆಲ ಜನರ ಆರೋಗ್ಯಕ್ಕೆ ಹಾನಿಯಾಗಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
ಟೊಮೆಟೊ ಸೇವನೆಯ ಕೆಲ ಅಡ್ಡಪರಿಣಾಮಗಳು ಹೀಗಿವೆ
- ಅಜೀರ್ಣ: ಟೊಮೆಟೊದಲ್ಲಿರುವ ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾ ಜೀರ್ಣಕ್ರಿಯೆಗೆ ಹಾನಿಕಾರಕವಾಗಿದೆ. ಇದು ಅತಿಸಾರಕ್ಕೆ ಕಾರಣವಾಗುತ್ತದೆ. ಇದು ಗ್ಯಾಸ್ ಮತ್ತು ಅಸಿಡಿಟಿಗೂ ಕಾರಣವಾಗಬಹುದು. ಇದು ಹೊಟ್ಟೆ ನೋವನ್ನು ಸಹ ಉಂಟುಮಾಡಬಹುದು. ಆದ್ದರಿಂದ, ನಿಮಗೆ ಜೀರ್ಣಕಾರಿ ಸಮಸ್ಯೆ ಇದ್ದರೆ, ನೀವು ಟೊಮೆಟೊ ತಿನ್ನುವುದನ್ನು ನಿಲ್ಲಿಸುವುದು ಒಳ್ಳಯದು.
- ಕಲ್ಲುಗಳಾಗಬಹುದು: ಟೊಮೆಟೊದಲ್ಲಿರುವ ಆಕ್ಸಲೇಟ್ ಮೂಗಿನ ವಸ್ತುವು ಕಲ್ಲುಗಳಿಗೆ ಕಾರಣವಾಗಬಹುದು. ಅತಿಯಾಗಿ ಟೊಮ್ಯಾಟೊ ತಿನ್ನುವುದರಿಂದ ಕಿಡ್ನಿ ಸಮಸ್ಯೆ ಉಂಟಾಗುತ್ತದೆ. ಕಡಿಮೆ ನೀರು ಕುಡಿಯುವವರಲ್ಲಿ ಇಂತಹ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಕಿಡ್ನಿಯಲ್ಲಿ ಕಲ್ಲುಗಳಿದ್ದರೆ ಟೊಮೆಟೊ ತಿನ್ನುವುದನ್ನು ತಪ್ಪಿಸಿ.
- ತ್ವಚೆಗೆ ಹಾನಿಕಾರಕ: ತ್ವಚೆಯ ಸಮಸ್ಯೆಗಳನ್ನು ನಿವಾರಿಸಲು ಟೊಮೆಟೊವನ್ನು ಬಳಸಲಾಗುತ್ತದೆ. ಇದು ಮುಖವನ್ನು ಹೊಳೆಯುವಂತೆ ಮಾಡುತ್ತದೆ. ಆದರೆ ಇದರಲ್ಲಿರುವ ಲೈಕೋಪೀನ್ ಚರ್ಮದ ಬಣ್ಣಕ್ಕೆ ಕಾರಣವಾಗಬಹುದು. ಇದು ಚರ್ಮದ ಅಲರ್ಜಿಯನ್ನು ಸಹ ಉಂಟುಮಾಡಬಹುದು. ಅದಕ್ಕಾಗಿ ಅಲರ್ಜಿ ಸಮಸ್ಯೆಯಿಂದ ಬಳಲುತ್ತಿರುವವರು ವೈದ್ಯರನ್ನು ಸಂಪರ್ಕಿಸಬೇಕು.
- ಸಂಧಿವಾತ: ಟೊಮೆಟೊ ತಿನ್ನುವುದರಿಂದ ಕೀಲು ನೋವು ಉಂಟಾಗುತ್ತದೆ. ಇದು ಸೋಲನೈನ್ನ್ನು ಹೊಂದಿರುತ್ತದೆ. ಇದು ಕೀಲು ನೋವು ಮತ್ತು ಊತವನ್ನು ಹೆಚ್ಚಿಸುತ್ತದೆ. ನಿಮಗೆ ಕೀಲು ನೋವು ಇದ್ದರೆ ಟೊಮೆಟೊ ತಿನ್ನುವುದನ್ನು ತಪ್ಪಿಸಿ. ಇಲ್ಲದಿದ್ದರೆ, ವೈದ್ಯರನ್ನು ಸಂಪರ್ಕಿಸಿದ ನಂತರ ತಿನ್ನಲು ಸೂಚಿಸಲಾಗುತ್ತದೆ.