HomeBengaluru Newsಬಾಯಿ ವಾಸನೆ ಬರುತ್ತಿದೆಯೇ? ಹಾಗಾದರೆ ಈ ಸರಳ ಮನೆಮದ್ದುಗಳನ್ನು ಪ್ರಯತ್ನಿಸಿ ನೋಡಿ

ಬಾಯಿ ವಾಸನೆ ಬರುತ್ತಿದೆಯೇ? ಹಾಗಾದರೆ ಈ ಸರಳ ಮನೆಮದ್ದುಗಳನ್ನು ಪ್ರಯತ್ನಿಸಿ ನೋಡಿ

For Dai;y Updates Join Our whatsapp Group

Spread the love

ಕೆಲವರು ಬಾಯಿ ತೆರೆದರೆ ಕೆಟ್ಟ ವಾಸನೆ ಬರುತ್ತದೆ. ಇದು ಅನೇಕರನ್ನು ಕಾಡುವ ಸಮಸ್ಯೆ. ಇದು ಅವರಿಗಷ್ಟೇ ಅಲ್ಲ, ಇತರರಿಗೂ ಕಿರಿಕಿರಿಯನ್ನುಂಟು ಮಾಡುತ್ತದೆ. ಹೀಗಾಗಿ ಬಾಯಿ ತೆರೆದು ಮಾತನಾಡಲು ಸಹ ಅವರು ಹಿಂಜರಿಯುತ್ತಾರೆ. ಅಷ್ಟೇ ಅಲ್ಲ ಮುಜುಗರಕ್ಕೊಳಗಾಗುವುದು ಬೇಡವೆಂದು ಜನರ ಮಧ್ಯದಿಂದ ದೂರವಿರಲು ಬಯಸುತ್ತಾರೆ.

ಆದರೆ ಹೆಚ್ಚಿನವರಿಗೆ ತಮ್ಮ ಬಾಯಿಂದ ದುರ್ವಾಸನೆ ಬರುವುದೇ ತಿಳಿದಿರುವುದಿಲ್ಲ.

ಇದಕ್ಕೆ ದಂತಕುಳಿ, ಒಣಬಾಯಿ, ಒಸಡಿನ ಸಮಸ್ಯೆ, ಈರುಳ್ಳಿ-ಬೆಳ್ಳುಳ್ಳಿ ಸೇವನೆ, ಆಹಾರ ಅಜೀರ್ಣವಾಗಿ ಹುಳಿತೇಗು ಬರುವುದು ಇತ್ಯಾದಿಗಳು ಇದಕ್ಕೆ ಕಾರಣವಿರಬಹುದು. ಅಷ್ಟೇ ಅಲ್ಲ ನೀರನ್ನು ಕಡಿಮೆ ಕುಡಿಯುವುದು ಸಹ ಬಾಯಿ ವಾಸನೆಗೆ ಕಾರಣವಾಗಬಹುದು. ಅನೇಕರಿಗೆ ತಮ್ಮ ಬಾಯಿಯ ದುರ್ವಾಸನೆ ಗೊತ್ತೇ ಆಗುವುದಿಲ್ಲ. ಇದಕ್ಕೆ ತಮ್ಮ ಕೈಯನ್ನೇ ನೆಕ್ಕಿ ಒಂದೆರಡು ನಿಮಿಷ ಬಿಟ್ಟು ವಾಸನೆ ನೋಡಿಕೊಂಡು ಪರೀಕ್ಷಿಸಬಹುದು.

ನಿವಾರಣೆ
ದಿನಕ್ಕೆರಡು ಬಾರಿ ಹಲ್ಲುಜ್ಜುವುದು, ನಾಲಿಗೆಯನ್ನೂ ಸ್ವಚ್ಛಗೊಳಿಸುವುದು, ಮೌತ್‌ವಾಶ್‌ಗಳನ್ನು ಬಳಸಿ ಬಾಯಿ ಮುಕ್ಕಳಿಸುವುದರ ಮೂಲಕ ಇದನ್ನು ನಿವಾರಿಸಿಕೊಳ್ಳಬಹುದು. ಇದಲ್ಲದೆ ದಂತವೈದ್ಯರ ಬಳಿ ಹೋಗಿ ದಂತಕುಳಿ ನಿವಾರಿಸಿಕೊಳ್ಳಿ.

ಹೆಚ್ಚು ನೀರು ಕುಡಿಯಿರಿ. ಏಲಕ್ಕಿ ಜಗಿಯುವುದರಿಂದ ಬಾಯಿಯ ದುರ್ವಾಸನೆ ಹೋಗಬಹುದು.
ಹೊಟ್ಟೆತುಂಬ ಆಹಾರ ಸೇವಿಸಿದ ತಕ್ಷಣ ಮಲಗಬಾರದು, ಇದರಿಂದ ಅಸಿಡಿಟಿ ಉಂಟಾಗುತ್ತದೆ. ಪ್ರತಿದಿನ ನಾಲಗೆಯನ್ನು ಸಹ ಸ್ವಚ್ಛಗೊಳಿಸಿ. ಮೂರು ತಿಂಗಳಿಗೊಮ್ಮೆ ನಿಮ್ಮ ಟೂಥ್ ಬ್ರಷ್ ಬದಲಿಸಿ.

ಮದ್ಯಸಾರ ಮುಕ್ತ ಮೌತ್ ವಾಶ್ ಬಳಸಿ
ಪ್ರತಿ ಬಾರಿ ಆಹಾರ ಸೇವನೆ, ಅದರಲ್ಲೂ ಸಿಹಿ ತಿಂದ ಬಳಿಕ ಬಾಯಿ ಮುಕ್ಕಳಿಸಿ
ವರ್ಷಕ್ಕೊಮ್ಮೆ ದಂತವೈದ್ಯರನ್ನು ಭೇಟಿಯಾಗಿ

ಚೆನ್ನಾಗಿ ನೀರು ಕುಡಿಯಿರಿ
ನಿತ್ಯವೂ ಬಾಯಿಯ ಸಹಿತ ದೇಹದ ನೈರ್ಮಲ್ಯವನ್ನೂ ಕಾಪಾಡಬೇಕು. ದಿನವಿಡೀ ಸಾಕಷ್ಟು ನೀರನ್ನು ಕುಡಿಯುತ್ತಿರ ಬೇಕು. ಕಾಫಿ ಹಾಗೂ ಇತರ ಕೆಫೀನ್ ಯುಕ್ತ ಪೇಯಗಳ ಸೇವನೆಯನ್ನು ಮಿತಗೊಳಿಸಬೇಕು. ನಿಮ್ಮ ಆಹಾರದಲ್ಲಿ ಸಾಕಷ್ಟು ನಾರಿನಂಶವಿರುವಂತೆ ನೋಡಿಕೊಳ್ಳಬೇಕು.

ರಾತ್ರಿ ಮಲಗುವ ಮುನ್ನ ಹಲ್ಲುಜ್ಜಿ ಮಲಗಿ

ಉಸಿರಿನ ದುರ್ವಾಸನೆ ನಿವಾರಿಸಲು ನಿಮ್ಮ ವೈದ್ಯರು ಮೌಥ್ ವಾಶ್ ಎಂಬ ದ್ರಾವಣವನ್ನು ಉಪಯೋಗಿಸಲು ಸಲಹೆ ಮಾಡಬಹುದು. ಇದನ್ನು ಸರಿಯಾದ ಕ್ರಮದಲ್ಲಿ ಬಳಸಬೇಕು. ರಾತ್ರಿ ಮಲಗುವ ಮುನ್ನ ಈ ದ್ರಾವಣದಿಂದ ಗಳಗಳ ಮಾಡಿ ಮಲಗಬೇಕು. ಹಲ್ಲುಜ್ಜುವ ಜೊತೆಗೇ ಫ್ಲೂರೈಡ್ ಯುಕ್ತ ಮೌತ್ ರಿನ್ಸ್ ಎಂಬ ದ್ರಾವಣ ಬಳಸಿ ತೊಳೆದುಕೊಳ್ಳುವ ಮೂಲಕ ಹಲ್ಲುಗಳಲ್ಲಿ ಆಹಾರಕಣಗಳು ಇಲ್ಲವಾಗದಂತೆ ನೋಡಿಕೊಳ್ಳಬಹುದು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!