ಕಾಳು ಮೆಣಸು ನಿಮ್ಮ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿಯಾಗಿದೆ ಗೊತ್ತಾ?

0
Spread the love

ಅದ್ಬುತ ಆರೋಗ್ಯ ಪ್ರಯೋಜನ ಹೊಂದಿರುವ ಹಿನ್ನೆಲೆ ಬಹುತೇಕರು ಕಾಳು ಅಥವಾ ಕರಿ ಮೆಣಸನ್ನು ಆಹಾರ ಪದ್ಧತಿಯಲ್ಲಿ ಬಳಕೆ ಮಾಡುತ್ತಾರೆ. ಇದು ಆರೋಗ್ಯದ ಜೊತೆ ರುಚಿ, ಸ್ವಾದವನ್ನು ಕೂಡ ಹೆಚ್ಚಿಸುತ್ತದೆ. ಕಾಳು ಮೆಣಸಿನಲ್ಲಿ ಅನೇಕ ರಾಸಾಯನಿಕ ಅಂಶಗಳಿದ್ದು, ಇದು ಆರೋಗ್ಯಕ್ಕೆ ಬಲು ಉಪಯೋಗವಾಗಿದೆ.

Advertisement

ಓಲಿಯೊರೆಸಿನ್‌ಗಳು ಮತ್ತು ಆಲ್ಕಲಾಯ್ಡ್‌ಗಳು ಪೈಪೆರಿನ್ ಮತ್ತು ಚಾವಿಸಿನ್ ಇದರಲ್ಲಿ ಇದ್ದು, ಇದು ಹೆಚ್ಚು ಆಂಟಿ ಆಕ್ಸಿಡೆಂಟ್​ ಗುಣಗಳನ್ನು ಹೊಂದಿದೆ. ಈ ಅಂಶಗಳು ದೀರ್ಘಕಾಲದ ಅನಾರೋಗ್ಯದ ಅಪಾಯ ಕಡಿಮೆ ಮಾಡುತ್ತದೆ. ಹಾಗಾದರೆ ಕಾಳು ಮೆಣಸು ಯಾವ ರೀತಿ ಆರೋಗ್ಯ ಪ್ರಯೋಜನ ಹೊಂದಿದೆ ಎಂಬ ಪ್ರಮುಖ ಅಂಶಗಳು ಇಲ್ಲಿದೆ.

ಕಾಳುಮೆಣಸಿನ ಉಪಯೋಗ

  • ಕೆಮ್ಮು – ದಮ್ಮು, ನೆಗಡಿ, ಸೀನು ಇದ್ದಲ್ಲಿ ಇದರ ಚೂರ್ಣವನ್ನು ಕಲ್ಲುಸಕ್ಕರೆ, ಜೇನುತುಪ್ಪದೊಂದಿದೆ ಅರ್ಧ ಚಮಚ ದಿನಕ್ಕೆ ಎರಡು ಬಾರಿ ಸೇವಿಸಬೇಕು.
  • ಜೀರ್ಣಶಕ್ತಿ ಹಾಗೂ ಹಸಿವು ಹೆಚ್ಚಿಸಲು ಇದರ ಚೂರ್ಣವನ್ನು ಮಜ್ಜಿಗೆಯೊಂದಿಗೆ ಬಳಸಬೇಕು.
  • ಚೂರ್ಣವನ್ನು ಹಣೆಗೆ ಲೇಪಿಸುವುದರಿಂದ ನೆಗಡಿ ಸಂಬಂಧಿತ ತಲೆನೋವು ಶಮನವಾಗುತ್ತದೆ.
  • ಇದರ ಚೂರ್ಣವನ್ನು ನಸ್ಯರೂಪದಲ್ಲಿ ಪ್ರಯೋಗಿಸುವುದರಿಂದ ಕಟ್ಟಿದ ಮೂಗು ತೆರೆದುಕೊಳ್ಳುತ್ತದೆ.
  • ಇದರ ತೈಲವು ದದ್ರು ಮುಂತಾದ ಚರ್ಮರೋಗಕ್ಕೆ ಹಚ್ಚಲು ಬಳಸಲಾಗುತ್ತದೆ
  • ಆರ್ಧ ಚಮಕ ಕಾಳುಮೆಣಸಿನ ಪುಡಿಯನ್ನು ವಿಳ್ಯದೆಲೆಯೊಂದಿಗೆ ಸೇವಿಸುತ್ತಾ ಬಂದರೆ ಬೊಜ್ಜು ಕರಗುತ್ತದೆ.
  • ನೆಗಡಿಯಲ್ಲಿ ಕಾಳುಮೆಣಸಿನ ಚೂರ್ಣವನ್ನು  ಬೆಲ್ಲದ ಜೊತೆ ಸೇರಿಸಿ ಸೇವಿಸುವುದರಿಂದ ಉತ್ತಮ
  • ಮೊಡವೆಗೆ ಕಾಳುಮೆಣಸಿನ ಚೂರ್ಣವನ್ನು ವೀಳ್ಯದೆಲೆ ರಸದೊಂದಿಗೆ ಹಚ್ಚಬೇಕು.
  • ಕಾಳುಮೆಣಸು ಶ್ರೇಷ್ಠ ಕಫಹರವೂ ಕೂಡ ಆಗಿದೆ.

 


Spread the love

LEAVE A REPLY

Please enter your comment!
Please enter your name here