ಆರೋಗ್ಯಕರವಾದ ಆಹಾರ ಪದ್ಧತಿಗಳನ್ನು ಸೇವನೆ ಮಾಡುವ ಕಡೆಗೆ, ಹೆಚ್ಚಿವರು ಗಮನ ಹರಿಸಬೇಕಾಗಿದೆ. ಮುಖ್ಯವಾಗಿ ಕೆಲವೊಂದು ಹಣ್ಣುಗಳನ್ನು ತಮ್ಮ ಆಹಾರಪದ್ಧತಿಯಲ್ಲಿ ಸೇರಿಸಿ ಕೊಳ್ಳುವುದನ್ನು ಮುಂದಾದರೆ ಒಳ್ಳೆಯ ಆರೋಗ್ಯ ನಮ್ಮದಾಗುತ್ತದೆ. ಬನ್ನಿ ಇಂದಿನ ಲೇಖನದಲ್ಲಿ ನೀರಿನಾಂಶ ಅಧಿಕ ಇರುವ ಮೂಸಂಬಿ ಹಣ್ಣಿನಲ್ಲಿ ಯಾವೆಲ್ಲಾ ಆರೋಗ್ಯಕಾರಿ ಪ್ರಯೋಜನಗಳನ್ನು ನಿರೀಕ್ಷೆ ಮಾಡಬಹುದು ಗೊತ್ತಾ..?
ಜೀರ್ಣ ಶಕ್ತಿ ಹೆಚ್ಚಿಸುತ್ತದೆ
ಮೋಸಂಬಿ ಹಣ್ಣಿನಲ್ಲಿ ಅಪಾರ ಪ್ರಮಾಣದ ಫ್ಲೆವೊನೈಡ್ ಇರುವುದರಿಂದ ನಾವು ಸೇವಿಸಿದ ಆಹಾರ ಚೆನ್ನಾಗಿ ಜೀರ್ಣವಾಗಲು ಅನುಕೂಲವಾಗುವಂತೆ ವಿವಿಧ ಜೀರ್ಣ ರಸಗಳನ್ನು ಉತ್ಪತ್ತಿ ಮಾಡಲು ಇದು ನೆರವಾಗುತ್ತದೆ. ಇದರಿಂದ ನಮ್ಮ ದೇಹದಲ್ಲಿರುವ ವಿಷಕಾರಿ ಅಂಶಗಳು ಸುಲಭವಾಗಿ ಹೊರ ಹೋಗಿ ನಮ್ಮ ಜೀರ್ಣ ಶಕ್ತಿ ಹೆಚ್ಚಾಗುತ್ತದೆ.
ಕ್ಯಾನ್ಸರ್ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ
ದೇಹದಲ್ಲಿ ಜೀವಕೋಶಗಳು ಒಟ್ಟಾಗಿ ಕ್ಯಾನ್ಸರ್ ಸಮಸ್ಯೆ ಕಂಡು ಬರುವಂತೆ ಗಡ್ಡೆ ಆಕಾರದಲ್ಲಿ ಅನಿಯಮಿತ ಬೆಳವಣಿಗೆಯೊಂದಿಗೆ ತೊಂದರೆಗೆ ಕಾರಣವಾಗುತ್ತದೆ. ಆದರೆ ಇಂತಹ ಒಂದು ಸಮಸ್ಯೆ ಯನ್ನು ಮೂಸಂಬಿ ಹಣ್ಣು ತನ್ನಲ್ಲಿ ಇರುವಂತಹ ಲೆಮೋನೈಡ್ ಪ್ರಮಾಣದಿಂದ ಕಡಿಮೆ ಮಾಡಬಲ್ಲ ಸಾಮರ್ಥ್ಯ ಹೊಂದಿದೆ. ಇದರಿಂದ ಮನುಷ್ಯರ ದೇಹವನ್ನು ಕ್ಯಾನ್ಸರ್ ಸಮಸ್ಯೆಯಿಂದ ಪಾರು ಮಾಡುತ್ತದೆ.
ಕಾಂತಿಯುಕ್ತ ತ್ವಚೆಗಾಗಿ
ಮೋಸಂಬಿ ಹಣ್ಣಿನಲ್ಲಿ ವಿಟಮಿನ್ ಸಿ ಹೆಚ್ಚು ಸಿಗಲಿದೆ. ಇದು ಕೊಲ್ಯಾಜನ್ ಎಂಬ ಪ್ರೋಟಿನ್ ಉತ್ಪತ್ತಿ ಯಲ್ಲಿ ನೆರವಾಗುತ್ತದೆ. ಇದರಿಂದ ನಮ್ಮ ತ್ವಚೆಯ ಸೌಂದರ್ಯ ಅಭಿವೃದ್ಧಿ ಯಾಗುತ್ತದೆ ಜೊತೆಗೆ ಚರ್ಮ ಕೂಡ ಸದೃಢವಾಗುತ್ತದೆ. ಆಂಟಿ ಆಕ್ಸಿಡೆಂಟ್ ಪ್ರಮಾಣ ಹೆಚ್ಚಾಗಿ ಸಿಗುವುದರಿಂದ ವಯಸ್ಸಾದಂತೆ ತ್ವಚೆ ಮೇಲೆ ಕಂಡುಬರುವ ಸಣ್ಣ ಸಣ್ಣ ಗೆರೆಗಳು, ಸುಕ್ಕುಗಳು ಮಾಯವಾಗುತ್ತವೆ.
ಸಂಧಿವಾತದಂತಹ ಸಮಸ್ಯೆಗೆ ಒಳ್ಳೆಯದು
ಸಿಟ್ರಸ್ ಜಾತಿಗೆ ಸೇರಿರುವ ಮೂಸಂಬಿ ಹಣ್ಣಿನಲ್ಲಿ ಹೇರಳವಾಗಿ ವಿಟಮಿನ್ ಸಿ ಅಂಶ ಕಂಡು ಬರುತ್ತದೆ. ಇವು ಉರಿಯೂತ ಹಾಗೂ ಊತವನ್ನು ಕಡಿಮೆ ಮಾಡಿ, ಸಂಧಿವಾತದಂತಹ ಸಮಸ್ಯೆಯನ್ನು ನಿವಾರಣೆ ಮಾಡಲು ಸಹಾಯ ಮಾಡುತ್ತದೆ. ಹೀಗಾಗಿ ಈ ಹಣ್ಣಿನ ಪೂರ್ಣ ಪ್ರಯೋಜನಗಳನ್ನು ಪಡೆಯಲು, ದಿನಕ್ಕೊಂದು ಮೂಸಂಬಿ ಸೇವಿಸಿ, ಇಲ್ಲಾಂದ್ರೆ ಇದರಿಂದ ಮಾಡಿದ ಜ್ಯೂಸ್‌ನ್ನು ಸೇವನೆ ಮಾಡಿ.
ವಿಟಮಿನ್ಸ್ ಹಾಗೂ ಖನಿಜಾಂಶಗಳ ಆಗರ
ಮನುಷ್ಯನ ಆರೋಗ್ಯಕ್ಕೆ ಬೇಕಾಗುವ ಎಲ್ಲಾ ಬಗೆಯ ವಿಟಮಿನ್‍ಗಳು, ಖನಿಜಾಂಶಗಳು, ಪೌಷ್ಟಿಕ ಸತ್ವಗಳು ಅಗಾಧ ಪ್ರಮಾಣದಲ್ಲಿ ಕಂಡುಬರುವುದರಿಂದ, ಮನುಷ್ಯನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸು ವುದರ ಜೊತೆಗೆ, ದೀರ್ಘಕಾಲದ ಕಾಯಿಲೆಗಳಾದ ಹೃದಯದ ಸಮಸ್ಯೆಗಳು, ಪಾರ್ಶ್ವವಾಯು, ಮೂಳೆಗಳ ಆರೋಗ್ಯವನ್ನು ಕಾಪಾಡುವ ಎಲ್ಲಾ ಆರೋಗ್ಯಕಾರಿ ಗುಣ ಲಕ್ಷಣಗಳು ಈ ಹಣ್ಣಿನಲ್ಲಿ ಕಂಡು ಬರುತ್ತದೆ.