ನೆನೆಸಿದ ಒಣದ್ರಾಕ್ಷಿ ನೀರು ಕುಡಿದ್ರೆ ದೇಹಕ್ಕೆ ಸಿಗುವ ಬೆನಿಫಿಟ್ ಎಷ್ಟು ಗೊತ್ತಾ!?

0
Spread the love

ನೀವು ಡ್ರೈ ಫ್ರೂಟ್‌ಗಳನ್ನು ತಿನ್ನಲು ಇಷ್ಟಪಡುತ್ತಿದ್ದರೆ, ಒಣದ್ರಾಕ್ಷಿ ಅತ್ಯುತ್ತಮ ಡ್ರೈ ಫ್ರೂಟ್‌ ಆಗಿದೆ. ಒಣದ್ರಾಕ್ಷಿ ಜೀರ್ಣಕ್ರಿಯೆಯ ಪ್ರಕ್ರಿಯೆಗೆ ತುಂಬಾ ಪರಿಣಾಮಕಾರಿ. ಒಣದ್ರಾಕ್ಷಿಗಳು ವಿಟಮಿನ್, ಫೈಬರ್, ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಇತರ ಅನೇಕ ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವ ಡ್ರೈ ಫ್ರೂಟ್‌ಗಳಾಗಿವೆ. ಇದು ಆರೋಗ್ಯಕ್ಕೆ ವಿಶೇಷವೆಂದು ಪರಿಗಣಿಸಲಾಗಿದೆ. ಈ ಕಾರಣಕ್ಕಾಗಿ, ನಮ್ಮ ಆರೋಗ್ಯ ತಜ್ಞರು ಪ್ರತಿದಿನ ಒಣದ್ರಾಕ್ಷಿಗಳ ಸೇವನೆಯನ್ನು ಶಿಫಾರಸು ಮಾಡುತ್ತಾರೆ.

Advertisement

ಇನ್ನೂ ಒಣದ್ರಾಕ್ಷಿ ಅತ್ಯಂತ ಪೌಷ್ಟಿಕ ಹಣ್ಣುಗಳಲ್ಲಿ ಒಂದಾಗಿದೆ. ಒಣದ್ರಾಕ್ಷಿ ಮತ್ತು ಗೋಡಂಬಿ ಸೇರಿದಂತೆ ಕೆಲವು ಪದಾರ್ಥಗಳನ್ನು ಡ್ರೈ ಫ್ರೂಟ್ಸ್ ಎಂದು ಕರೆಯಲಾಗುತ್ತದೆ. ನಾವು ಇವುಗಳನ್ನು ಹೆಚ್ಚಾಗಿ ಪೊಂಗಲ್, ಪಾಯಸಕ್ಕೆ ಬಳಸುತ್ತೇವೆ. ಒಣದ್ರಾಕ್ಷಿ ಸೇವನೆಯಿಂದ ನಮ್ಮ ದೇಹಕ್ಕೆ ಹಲವಾರು ರೀತಿ ಪ್ರಯೋಜನಕಾರಿಯಾಗಿದೆ. ಎಷ್ಟೋ ಜನ ಇದನ್ನು ನೀರಿನಲ್ಲಿ ನೆನೆಸಿ ತಿನ್ನುತ್ತಾರೆ.

ನೆನೆಸಿದ ಒಣದ್ರಾಕ್ಷಿಯು ವಿಟಮಿನ್ಗಳು, ಖನಿಜಗಳು ಮತ್ತು ಫೈಬರ್ನಂತಹ ಅನೇಕ ರೀತಿಯ ಪೋಷಕಾಂಶಗಳನ್ನು ಹೊಂದಿದ್ದು, ಇದು ನಮ್ಮ ದೇಹಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿ ಆಗಿದೆ. ನೀವು ಈ ಮುನ್ನ ಒಣದ್ರಾಕ್ಷಿಯನ್ನು ಹಾಗೆಯೇ ಸೇವಿಸುತ್ತಿದ್ದರೆ, ಇನ್ಮುಂದೆ ಇವುಗಳನ್ನು ನೀರಿನಲ್ಲಿ ನೆನೆಸಿ ತಿಂದು, ಆ ನೀರನ್ನು ಪ್ರತಿದಿನ ಕುಡಿಯಿರಿ. ಅಷ್ಟಕ್ಕೂ ಒಣದ್ರಾಕ್ಷಿ ತಿಂದರೆ ಆರೋಗ್ಯಕ್ಕೆ ಒಳ್ಳೆಯದು, ಆದರೆ ಒಣದ್ರಾಕ್ಷಿ ನೆನೆಸಿದ ನೀರು ಕುಡಿದ್ರೆ ಏನೆಲ್ಲಾ ಪ್ರಯೋಜನ ಸಿಗುತ್ತದೆ ಎಂದು ಯೋಚಿಸುತ್ತಿದ್ದೀರಾ? ಹಾಗಾದ್ರೆ ಈ ಸ್ಟೋರಿ ಓದಿ.

ಬೆಲ್ಚಿಂಗ್ ಮತ್ತು ಇತರ ಹೊಟ್ಟೆಯ ಸಮಸ್ಯೆಗಳನ್ನು ತಡೆಯುತ್ತದೆ : ದ್ರಾಕ್ಷಿಯನ್ನು ನೆನೆಸಿದ ನೀರನ್ನು ಕುಡಿಯುವುದರಿಂದ ಹೊಟ್ಟೆಯ ಅನೇಕ ಸಮಸ್ಯೆಗಳನ್ನು ಗುಣಪಡಿಸಬಹುದು. ಇದರ ಉರಿಯೂತ ನಿವಾರಕ ಗುಣಲಕ್ಷಣಗಳು ನಮ್ಮ ಕರುಳಿನ ಕಾರ್ಯನಿರ್ವಹಣೆಯನ್ನು ಸುಧಾರಿಸುತ್ತದೆ ಮತ್ತು ಕರುಳಿನಲ್ಲಿರುವ ಬ್ಯಾಕ್ಟೀರಿಯಾವನ್ನು ನಿಯಂತ್ರಿಸುತ್ತದೆ. ಆದ್ದರಿಂದ ಪ್ರತಿದಿನ ನೀರಿನಲ್ಲಿ ನೆನೆಸಿದ ಒಣದ್ರಾಕ್ಷಿಯನ್ನು ತಿನ್ನಿ, ಜೊತೆಗೆ ನೀರನ್ನು ಕುಡಿಯಿರಿ. ಇದು ನಿಮ್ಮ ಜೀರ್ಣಾಂಗ ವ್ಯವಸ್ಥೆಗೆ ತುಂಬಾ ಒಳ್ಳೆಯದು.

ದೇಹದಲ್ಲಿರುವ ವಿಷವನ್ನು ತೆಗೆದುಹಾಕುತ್ತದೆ: ಒಣ ದ್ರಾಕ್ಷಿಯನ್ನು ನೆನೆಸಿದ ನೀರನ್ನು ಕುಡಿಯುವುದರಿಂದ ನಮ್ಮ ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ತೆಗೆದುಹಾಕುತ್ತದೆ ಮತ್ತು ರಕ್ತವನ್ನು ಶುದ್ಧೀಕರಿಸುತ್ತದೆ. ಕನಿಷ್ಠ ಒಂದು ವಾರದವರೆಗೆ ಈ ನೀರನ್ನು ಕುಡಿಯುವುದರಿಂದ ಹೃದ್ರೋಗದ ಅಪಾಯವನ್ನು ಕಡಿಮೆ ಆಗಬಹುದು. ಇದು ನಿಮ್ಮ ಯಕೃತ್ತನ್ನು ಸ್ವಚ್ಛಗೊಳಿಸುತ್ತದೆ ಮತ್ತು ಅದರ ಕಾರ್ಯವನ್ನು ಹೆಚ್ಚಿಸುತ್ತದೆ.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ: ಒಣಗಿದ ದ್ರಾಕ್ಷಿಯನ್ನು ನೆನೆಸಿದ ನೀರಿನಲ್ಲಿ ಹೆಚ್ಚಿನ ಉತ್ಕರ್ಷಣ ನಿರೋಧಕ ಅಂಶದಿಂದಾಗಿ, ಇದು ನಿಮ್ಮ ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ ಮತ್ತು ಅನೇಕ ರೋಗಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಇದು ನಿಮ್ಮ ಜೀರ್ಣಕಾರಿ ಆರೋಗ್ಯವನ್ನು ಸಹ ಬಲಪಡಿಸುತ್ತದೆ.

ಕೂದಲು ಉದುರುವುದನ್ನು ತಡೆಯುತ್ತದೆ: ಕೂದಲು ಉದುರುವುದನ್ನು ತಡೆಯುವುದು ಹೇಗೆ ಎಂದು ಹಲವರು ಚಿಂತೆಗೊಳಗಾಗಿರುತ್ತಾರೆ. ಆದರೆ ಇನ್ಮುಂದೆ ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ. ಏಕೆಂದರೆ ಒಣ ದ್ರಾಕ್ಷಿಯನ್ನು ನೆನೆಸಿದ ನೀರನ್ನು ಕುಡಿಯುವುದರಿಂದ ನಮ್ಮ ದೇಹದಲ್ಲಿ ರಕ್ತದ ಹರಿವು ಹೆಚ್ಚಾಗುತ್ತದೆ. ಇದರಿಂದಾಗಿ ಕೂದಲು ಉದುರುವುದನ್ನು ತಡೆಯಲಾಗುತ್ತದೆ.

ನಿದ್ರಾಹೀನತೆಯ ಸಮಸ್ಯೆಯನ್ನು ನಿವಾರಿಸುತ್ತದೆ: ಇತ್ತೀಚಿನ ದಿನಗಳಲ್ಲಿ ಅನೇಕ ಮಂದಿ ನಿದ್ರಾಹೀನತೆಯಿಂದ ಬಳಲುತ್ತಿದ್ದಾರೆ. ಒಣ ದ್ರಾಕ್ಷಿಯನ್ನು ನೆನೆಸಿದ ನೀರನ್ನು ಪ್ರತಿದಿನ ಕುಡಿಯುವುದರಿಂದ ಅದರಲ್ಲಿರುವ ಮೆಲಟೋನಿನ್ ಎಂಬ ಹಾರ್ಮೋನ್ ನಿದ್ರೆ ಗೆಡಿಸುವುದರಿಂದ ನಿದ್ರಾಹೀನತೆಯನ್ನು ತಡೆಯುತ್ತದೆ ಮತ್ತು ರಾತ್ರಿಯ ನಿದ್ರೆ ಮಾಡಲು ಸಹಾಯಕವಾಗಿದೆ.


Spread the love

LEAVE A REPLY

Please enter your comment!
Please enter your name here