ಬರೋಬ್ಬರಿ ೯ ತಿಂಗಳ ಕಾಲ ಬಾಹ್ಯಾಕಾಶ ನೌಕೆಯಲ್ಲಿದ್ದ NASA ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಕೊನೆಗೂ ಸುರಕ್ಷಿತವಾಗಿ ಭೂಮಿಗೆ ಲ್ಯಾಂಡ್ ಆಗಿದ್ದಾರೆ. 2024, ಜುಲೈ 5 ರಂದು ಬೋಯಿಂಗ್ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯಲ್ಲಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ 8 ದಿನಗಳ ಅಧ್ಯಯನಕ್ಕಾಗಿ ಹೋಗಿದ್ದವರು ತಾಂತ್ರಿಕ ದೋಷದಿಂದ ಅಲ್ಲಿಯೇ ಸಿಲುಕಿಕೊಂಡಿದ್ದರು. ಇದೀಗ ಕೊನೆಗೂ ಭೂಮಿಗೆ ಮರಳಿದ್ದು ಕೋಟ್ಯಾಂತರ ಜನರ ಹಾರೈಕೆ ಫಲಿಸಿದೆ.
ಅಂದುಕೊಂಡಂತೆ ಆಗಿದ್ದರೆ ಕಳೆದ ಸೆಪ್ಟೆಂಬರ್‌ನಲ್ಲಿಯೇ ಸುನಿತಾ ವಿಲಿಯಮ್ಸ್ ಭೂಮಿಗೆ ಮರಳ ಬೇಕಿತ್ತು. ಆದ್ರೆ ಇದೀಗ ೯ ತಿಂಗಳ ಬಳಿಕ ಸುರಕ್ಷಿತವಾಗಿ ಭೂಮಿಗೆ ವಾಪಸ್ ಆಗಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಸ್ಪೇಸ್‌ಎಕ್ಸ್ ಸಿಇಒ ಎಲಾನ್ ಮಸ್ಕ್ ನಾಸಾ ಜೊತೆ ಕೈಜೋಡಿಸಿ ಇಬ್ಬರನ್ನು ಸುರಕ್ಷಿತವಾಗಿ ಕರೆತಂದಿದ್ದಾರೆ.
ಸ್ಪೇಸ್‌ಎಕ್ಸ್ ಮತ್ತು ನಾಸಾ ಒಟ್ಟಾಗಿ ಗಗನಯಾನಿಗಳನ್ನು ಕರೆತರಲು ಪ್ರಯತ್ನಿಸಿದವು. ಅದರಂತೆ ಸ್ಪೇಸ್ನ ಎಕ್ಸ್ನ ಡ್ರ್ಯಾಗನ್ ಕ್ರೂ ಕ್ಯಾಪ್ಸುಲ್ ಎಂಬ ಬಾಹ್ಯಾಕಾಶ ನೌಕೆಯನ್ನು ಕಕ್ಷೆಗೆ ಕಳುಹಿಸಿದ್ದವು. ಕೊನೆಗೂ ಆ ನೌಕೆ ಯಶಸ್ವಿಯಾಗಿ ಸುನಿತಾ ವಿಲಿಯಮ್ಸ್ ಅವರನ್ನು ಭೂಮಿಗೆ ಕರೆದುಕೊಂಡು ಬಂದಿದೆ.
ಕ್ರೂ ಡ್ರ್ಯಾಗನ್ ಕ್ಯಾಪ್ಸುಲ್ ಅನ್ನು ಕಕ್ಷೆಗೆ ಕಳುಹಿಸಲು ಮತ್ತು ಗಗನಯಾತ್ರಿಗಳನ್ನು ಮರಳಿ ತರಲು ಒಟ್ಟು 140 ಅಮೆರಿಕನ್ ಮಿಲಿಯನ್ ಡಾಲರ್ ಖರ್ಚು ಮಾಡಲಾಗಿದೆ. ಭಾರತೀಯ ಕರೆನ್ಸಿಯಲ್ಲಿ ಸುಮಾರು 1,200 ಕೋಟಿ ರೂಪಾಯಿ.
ಬಾಹ್ಯಾಕಾಶ ನೌಕೆಯಲ್ಲಿ ಅಳವಡಿಸಲಾದ ಹಲವು ಸಾಧನಗಳು ಇದರಲ್ಲಿ ಸೇರಿದ್ದು ಇದಕ್ಕೆ ದುಬಾರಿ ವೆಚ್ಚ ಖರ್ಚು ಮಾಡಲಾಗಿದೆ. ಕ್ರೂ ಡ್ರ್ಯಾಗನ್ ಕ್ಯಾಪ್ಸುಲ್, ಕಕ್ಷೆಗೆ ಉಡಾಯಿಸುವ ಸ್ಪೇಸ್‌ಎಕ್ಸ್ ಫಾಲ್ಕನ್ 9 ರಾಕೆಟ್ಗೆ ಹೆಚಿಚನ ಹಣ ವೆಚ್ಚ ಮಾಡಲಾಗಿದೆ. ಬಾಹ್ಯಾಕಾಶ ಪ್ರಯಾಣಕ್ಕೆ ಅಗತ್ಯವಾದ ಹೆಚ್ಚುವರಿ ತೂಕ, ಲೈಫ್ ಸಪೋರ್ಟಿಂಗ್ ಸಿಸ್ಟಮ್ ಸೇರಿದಂತೆ ಎಲ್ಲಾ ವ್ಯವಸ್ಥಗಳಿಗೆ ಒಟ್ಟು 1,200 ಕೋಟಿ ರೂಪಾಯಿ ಹಣ ಖರ್ಚು ಮಾಡಲಾಗಿದೆ.