HomeLife Styleಮಾವಿನ ಎಲೆಗಳಲ್ಲಿಯೂ ಎಷ್ಟೊಂದು ಔಷಧೀಯ ಗುಣಗಳಿವೆ ಗೊತ್ತಾ..? ಇಲ್ಲಿದೆ ನೋಡಿ

ಮಾವಿನ ಎಲೆಗಳಲ್ಲಿಯೂ ಎಷ್ಟೊಂದು ಔಷಧೀಯ ಗುಣಗಳಿವೆ ಗೊತ್ತಾ..? ಇಲ್ಲಿದೆ ನೋಡಿ

For Dai;y Updates Join Our whatsapp Group

Spread the love

ಸಾಮಾನ್ಯವಾಗಿ ಹಬ್ಬ ಹರಿದಿನಗಳಲ್ಲಿ ಮನೆಯ ಮುಂದೆ ತೋರಣ ಕಟ್ಟಲು ಭಾರತೀಯರು ಮಾವಿನ ಎಲೆಗಳನ್ನು ಬಳಸುವುದನ್ನು ನೋಡಿರುತ್ತೇವೆ. ಆದರೆ ಆಯುರ್ವೆದದಲ್ಲಿಯೂ ಮಾವಿನ ಎಲೆಗಳನ್ನು ಔಷಧೀಯ ಎಲೆಗಳಾಗಿ ಬಳಸುತ್ತಾರೆ ಎನ್ನುವುದು ನಿಮಗೆ ತಿಳಿದಿರಲಿ. ಅರೇ ಹಾಗಾದರೆ ಯಾವೆಲ್ಲಾ ಕಾರಣಕ್ಕೆ ಮಾವಿನ ಎಲೆಗಳನ್ನು ಬಳಸುತ್ತಾರೆ. ಆರೋಗ್ಯ ಸುಧಾರಿಸಲು ಯಾವೆಲ್ಲ ರೀತಿಯಲ್ಲಿ ಸಹಾಯ ಮಾಡುತ್ತದೆ ಎನ್ನುವ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.

  1. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಮಾವಿನ ಎಲೆಯಲ್ಲಿ ವಿಟಮಿನ್ ಸಿ ಹಾಗೂ ರೋಗ ನಿರೋಧ ಶಕ್ತಿ ಹೇರಳವಾಗಿವೆ. ಇವು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಇದರಿಂದಾಗಿ ಶೀತ, ಕೆಮ್ಮು, ಜ್ವರ ಮುಂತಾದ ಸಾಂಕ್ರಾಮಿಕ ರೋಗಗಳು ನಮ್ಮನ್ನು ಬಾಧಿಸುವುದಿಲ್ಲ.

  1. ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ

ಮಾವಿನ ಎಲೆಯಲ್ಲಿ ನಾರಿನಂಶ ಹೆಚ್ಚಾಗಿರುವುದರಿಂದ ಅವು ಜೀರ್ಣಕ್ರಿಯೆಯ ಆರೋಗ್ಯವನ್ನು ಸುಧಾರಿಸುತ್ತವೆ. ಇದರಿಂದಾಗಿ ಕರುಳಿನ ಚಲನೆ ಸುಗಮವಾಗುತ್ತದೆ, ಮಲಬದ್ಧತೆ ಮತ್ತು ಅಜೀರ್ಣ ಸಮಸ್ಯೆಗಳು ನಿವಾರಣೆಯಾಗುತ್ತವೆ.

  1. ಮಧುಮೇಹ ರೋಗಿಗಳಿಗೆ ಒಳ್ಳೆಯದು

ಮಧುಮೇಹ ರೋಗಿಗಳಿಗೆ ಮಾವಿನ ಎಲೆ ವರದಾನ. ಹೌದು, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಮಾವಿನ ಎಲೆ ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ ಮಾವಿನ ಎಲೆ ಪುಡಿಯನ್ನು ಬಿಸಿ ನೀರಿನಲ್ಲಿ ಬೆರೆಸಿ ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿರುತ್ತದೆ.

  1. ಮೂತ್ರಪಿಂಡದ ಕಲ್ಲುಗಳನ್ನು ಕರಗಿಸುತ್ತದೆ

ಮಾವಿನ ಎಲೆಯಲ್ಲಿ ಪೊಟ್ಯಾಸಿಯಮ್ ಹೆಚ್ಚಾಗಿರುತ್ತದೆ. ಮತ್ತು ಇದರಲ್ಲಿ ಆಕ್ಸಲೇಟ್‌ಗಳೂ ಇವೆ. ಇವೆರಡೂ ಮೂತ್ರಪಿಂಡದ ಕಲ್ಲುಗಳನ್ನು ಕರಗಿಸಿ ಹೊರಹಾಕಲು ಸಹಾಯ ಮಾಡುತ್ತವೆ.

  1. ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ

ದೇಹದಲ್ಲಿ ರಕ್ತದೊತ್ತಡ ಸರಿಯಾಗಿಲ್ಲದಿದ್ದರೆ ಹೃದಯಾಘಾತ, ಪಾರ್ಶ್ವವಾಯು ಮುಂತಾದ ಅಪಾಯಕಾರಿ ರೋಗಗಳು ಬರುತ್ತವೆ. ಆದ್ದರಿಂದ ಇವುಗಳನ್ನು ತಡೆಯಲು ರಕ್ತದೊತ್ತಡವನ್ನು ನಿಯಂತ್ರಿಸಲು ಮಾವಿನ ಎಲೆ ಪ್ರಮುಖ ಪಾತ್ರ ವಹಿಸುತ್ತದೆ. ಏಕೆಂದರೆ ಮಾವಿನ ಎಲೆಯಲ್ಲಿ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುವ ಗುಣಗಳಿವೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!