ರಾತ್ರಿ ಊಟದ ಬಳಿಕ ಬೆಲ್ಲ ತಿಂದ್ರೆ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ!? ಈ ಬಗ್ಗೆ ನೀವು ತಿಳಿಯಲೇಬೇಕು!

0
Spread the love

ನಮ್ಮ ಭಾರತ ದೇಶದಲ್ಲಿ ಬೆಲ್ಲವನ್ನು ಸಾಮಾನ್ಯವಾಗಿ ಊಟದ ನಂತರ ತಿನ್ನಲಾಗುತ್ತದೆ. ನಿಮ್ಮ ಹಸಿವನ್ನು ನೀಗಿಸಲು ಇದನ್ನು ಸಿಹಿಯಾಗಿ ಸೇವಿಸಬಹುದು. ನೀವು ಅದನ್ನು ಮಧ್ಯಾಹ್ನವೂ ತಿನ್ನಬಹುದು. ಬೆಲ್ಲವನ್ನು ತಿನ್ನಲು ಉತ್ತಮ ಸಮಯವೆಂದರೆ ರಾತ್ರಿ ಊಟದ ನಂತರ. ಇದು ಜೀರ್ಣಕ್ರಿಯೆಗೆ ತುಂಬಾ ಸಹಾಯ ಮಾಡುತ್ತದೆ. ಇದಲ್ಲದೆ ಊಟದ ಬಳಿಕ ಬೆಲ್ಲದ ಸೇವನೆಯಿಂದ ಹಲವು ಪ್ರಯೋಜನಗಳಿವೆ. ಅವುಗಳನ್ನು ಈ ಕೆಳಗೆ ತಿಳಿಸಲಾಗಿದೆ.

Advertisement

ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು:-

ಊಟದ ನಂತರ ಬೆಲ್ಲ ತಿನ್ನುವುದರಿಂದ ಜೀರ್ಣಕಾರಿ ಕಿಣ್ವಗಳು ಉತ್ತೇಜಿತವಾಗುತ್ತವೆ. ಇದರಿಂದಾಗಿ, ಆಹಾರ ಸುಲಭವಾಗಿ ಬೇಗನೆ ಜೀರ್ಣವಾಗುತ್ತದೆ. ಬೆಲ್ಲ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಬೆಲ್ಲದಲ್ಲಿ Anti ಆಕ್ಸಿಡೆಂಟ್‌ಗಳು ಹೇರಳವಾಗಿರುತ್ತವೆ. ಇದು ದೇಹದಲ್ಲಿನ ಫ್ರೀ ರಾಡಿಕಲ್ಸ್‌ಗಳನ್ನು ನಿಯಂತ್ರಿಸುತ್ತದೆ. ಊಟದ ಬಳಿಕ ಬೆಲ್ಲ ಸೇವನೆ ಮಾಡೋದರಿಂದ ಒತ್ತಡ ಕಡಿಮೆಯಾಗುತ್ತದೆ. ಇದರ ಜೊತೆಗೆ ದೀರ್ಘಕಾಲದ ಕಾಯಿಲೆಗಳ ಅಪಾಯಮಟ್ಟವನ್ನು ಬೆಲ್ಲ ಕಡಿಮೆ ಮಾಡುತ್ತದೆ.

ಯಕೃತ್ ಶುದ್ಧೀಕರಣ:-

ಊಟದ ನಂತರ ಬೆಲ್ಲ ತಿನ್ನುವುದರಿಂದ ದೇಹದಲ್ಲಿನ ಜೀವರಾಸಾಯನಿಕ ಕ್ರಿಯೆ ವೇಗವಾಗಿ, ಬಲವಾಗಿ ಬದಲಾಗುತ್ತದೆ. ಇದು ತೂಕ ನಿಯಂತ್ರಣವನ್ನು ಸುಲಭಗೊಳಿಸುತ್ತದೆ. ಬೆಲ್ಲದಲ್ಲಿ ನೈಸರ್ಗಿಕವಾದ ನಿರ್ವಿಶೀಕರಣ ಗುಣಗಳಿವೆ. ಇದು ನಮ್ಮ ದೇಹದಲ್ಲಿನ ವಿಷವನ್ನು ತೆಗೆದುಹಾಕಿ ಯಕೃತ್ತನ್ನು ಶುದ್ಧೀಕರಿಸುತ್ತದೆ. ಇನ್ನೂ ಬೆಲ್ಲದಲ್ಲಿ ಕಬ್ಬಿಣಾಂಶ ಹೇರಳವಾಗಿರುತ್ತದೆ. ಬೆಲ್ಲ ಸೇವನೆ ಮಾಡೋದರಿಂದ ದೇಹದಲ್ಲಿ ಹಿಮೋಗ್ಲೋಬಿನ್ ಮಟ್ಟ ಏರಿಕೆಯಾಗುತ್ತದೆ. ಮುಖ್ಯವಾಗಿ ಮಹಿಳೆಯರು , ಮಕ್ಕಳಿಗೆ ಇದು ಒಳ್ಳೆಯದು. ದೀರ್ಘಕಾಲದ ಮಲಬದ್ಧತೆಯ ಸಮಸ್ಯೆಗಳಿಂದ ಬಳಲುತ್ತಿದ್ದರೆ, ನಿಯಮಿತವಾಗಿ ಬೆಲ್ಲವನ್ನು ಸೇವಿಸಬೇಕು ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ: ಬೆಲ್ಲದಲ್ಲಿ ಜೀವಸತ್ವಗಳು, ಖನಿಜಗಳು ಮತ್ತು ಯಾಂಟಿಆಕ್ಸಿಡೆಂಟ್‌ಗಳು ಹೇರಳವಾಗಿರುವುದರಿಂದ, ಇದು ನಮ್ಮ ದೇಹದಲ್ಲಿನ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.

ಬೆಲ್ಲದ ಟೀ:-
ಸಕ್ಕರೆ ಬದಲಾಗಿ ಬೆಲ್ಲದ ಟೀ ಕುಡಿಯಲು ವೈದ್ಯರು ಸಲಹೆ ನೀಡುತ್ತಾರೆ.


Spread the love

LEAVE A REPLY

Please enter your comment!
Please enter your name here