ಪ್ರತಿದಿನ ಪುದೀನಾ ಎಲೆಗಳನ್ನು ಸೇವಿಸುವುದರಿಂದ ಸಿಗುವ ಪ್ರಯೋಜನಗಳೇನು ಗೊತ್ತಾ..?

0
Spread the love

ಈಗ ವಾತಾವರಣ ಬದಲಾವಣೆಯ ಸಮಯ ಆಗಿರುವುದರಿಂದ ಬಿಸಿಲು ಮತ್ತು ಆಗಾಗ ಮಳೆಯ ಸಿಂಚನ ಇದ್ದೇ ಇರುತ್ತದೆ. ಇಂತಹ ಸಮಯದಲ್ಲಿ ಬಹಳಷ್ಟು ಜನರು ಹುಷಾರು ತಪ್ಪುತ್ತಾರೆ. ಸೂಕ್ಷ್ಮ ಆರೋಗ್ಯ ಹೊಂದಿರುವವರು ಬಹಳ ಬೇಗನೆ ಶೀತ, ನೆಗಡಿ, ಕೆಮ್ಮು ಇತ್ಯಾದಿ ಸಮಸ್ಯೆಗಳಿಗೆ ಗುರಿಯಾಗುತ್ತಾರೆ.

Advertisement

ಕೆಲವರಿಗೆ ಎದೆಯಲ್ಲಿ ಮತ್ತು ಮೂಗಿನಲ್ಲಿ ಕಪ ಕಟ್ಟಿದ ಅನುಭವ ಉಂಟಾಗುತ್ತದೆ. ದೀರ್ಘಕಾಲದಲ್ಲಿ ಇದು ಅಸ್ತಮಾ ಸಮಸ್ಯೆಗೆ ಕಾರಣವಾಗುತ್ತದೆ. ಇಂತಹ ಸಂದರ್ಭದಲ್ಲಿ ವ್ಯಕ್ತಿಗೆ ಉಸಿರಾಡಲು ಮತ್ತಷ್ಟು ಕಷ್ಟವಾಗುತ್ತದೆ. ಆದರೆ ಕಷ್ಟಕರವಾದ ಉಸಿರಾಟದ ಅವಸ್ಥೆಯನ್ನು ಸರಿ ಪಡಿಸಿಕೊಳ್ಳಲು ಮನೆ ಮದ್ದಿನ ರೂಪದಲ್ಲಿ ಬಹಳ ಸುಲಭದ ಮಾರ್ಗಗಳು ಇವೆ. ಪುದೀನಾಎಲೆಗಳು ಇದರಲ್ಲಿ ನಿಮಗೆ ಸಹಾಯಕ ಎಂದು ಹೇಳಬಹುದು.

ಪ್ರತಿದಿನ ಪುದೀನಾ ಎಲೆಗಳನ್ನು ಸೇವಿಸುವುದರಿಂದ ಸಿಗುವ ಪ್ರಯೋಜನಗಳೇನು?

  • ಈ ಎಲೆಗಳಲ್ಲಿ ವಿಟಮಿನ್ ಎ, ಸಿ, ಬಿ 6 ಕಬ್ಬಿಣ, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಫೋಲೇಟ್ ಇತ್ಯಾದಿ ಅಂಶಗಳು ಸಮೃದ್ಧವಾಗಿವೆ.
  • ಪ್ರತಿನಿತ್ಯವೂ ಪುದೀನಾ ಎಲೆಗಳನ್ನು ಜಗಿದು ತಿಂದರೆ ಬಾಯಿಯಿಂದ ಕೆಟ್ಟ ದುರ್ವಾಸನೆ ಬರುವುದಿಲ್ಲ. ಜೊತೆಗೆ ಬಾಯಿಯ ಆರೋಗ್ಯವೂ ಚೆನ್ನಾಗಿದ್ದು, ಒಸಡುಗಳು ಮತ್ತು ಹಲ್ಲುಗಳಲ್ಲಿ ಯಾವುದೇ ರೀತಿಯ ಸಮಸ್ಯೆ ಕಂಡುಬರುವುದಿಲ್ಲ.
  • ಪುದೀನಾ ಎಲೆಗಳಲ್ಲಿರುವ ಔಷಧೀಯ ಗುಣಗಳು ದೇಹದ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತವೆ. ಇದು ಹೊಟ್ಟೆ ಉಬ್ಬರ, ಗ್ಯಾಸ್ ಮತ್ತು ಇತರ ಅನೇಕ ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ.
  • ಈ ಎಲೆಗಳು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಜೊತೆಗೆ ಅಲರ್ಜಿ ಮತ್ತು ಅಸ್ತಮಾದಂತಹ ಉಸಿರಾಟದ ಸಮಸ್ಯೆಗಳಿಂದ ಮುಕ್ತಿ ನೀಡುತ್ತದೆ. ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ನಿಮ್ಮ ಚರ್ಮವನ್ನು ಕೂಡ ರಕ್ಷಣೆ ಮಾಡುತ್ತದೆ.
  • ಪ್ರತಿನಿತ್ಯ ಈ ಎಲೆಗಳ ಸೇವನೆ ಮಾಡುವ ಮೊದಲು ನಿಮ್ಮ ವೈದ್ಯರ ಸಲಹೆ ಪಡೆದು ಬಳಿಕ ಸೇವನೆ ಮಾಡಿ. ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳಿಲ್ಲದಿದ್ದರೆ ಇದರ ಸೇವನೆಯನ್ನು ಆರಂಭಿಸಬಹುದು.

 


Spread the love

LEAVE A REPLY

Please enter your comment!
Please enter your name here