Health Tips: ಮೂಲಂಗಿ ಸೇವನೆಯಿಂದ ಸಿಗುವ ಲಾಭಗಳೇನು ಗೊತ್ತಾ?

0
Spread the love

ಮೂಲಂಗಿಯಲ್ಲಿ ಸಾಕಷ್ಟು ಪ್ರಮಾಣದ ವಿಟಮಿನ್ ಅಂಶಗಳು, ಸಿಟ್ರಸ್ ಹಣ್ಣು ಗಳಲ್ಲಿ ಕಂಡು ಬರುವಂತಹ ಆಂಟಿ ಆಕ್ಸಿಡೆಂಟ್ ಅಂಶಗಳು, ಅಧಿಕ ಪ್ರಮಾಣದಲ್ಲಿ ನಾರಿನಾಂಶ ಗಳು, ಮನುಷ್ಯನ ಆರೋಗ್ಯಕ್ಕೆ ಬೇಕಾಗುವಷ್ಟು ಕಬ್ಬಿಣಾಂಶಗಳು, ಪೊಟ್ಯಾಶಿಯಂ, ರಂಜಕ, ಮ್ಯಾಂಗನೀಸ್ ಹಾಗೂ ಫೋಲಿಕ್ ಆಮ್ಲದ ಪ್ರಮಾಣ ಹೆಚ್ಚಾಗಿ ಕಂಡುಬರುವುದರಿಂದ ದೇಹದ ಆರೋಗ್ಯ ವೃದ್ಧಿಸುವಲ್ಲಿ ಈ ತರಕಾರಿಯ ಪ್ರಯೋಜನಗಳನ್ನು ಮರೆಯುವ ಹಾಗಿಲ್ಲ

Advertisement

 ಮೂಲಂಗಿಯನ್ನು ಏಕೆ ಸೇವಿಸಬೇಕು ಎಂಬುದನ್ನು ತಿಳಿಯೋಣ

ರೋಗ ನಿರೋಧಕ ಶಕ್ತಿ ಮೂಲಂಗಿಯಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ ಸಿ ಇದೆ. ಇದು ಚಳಿಗಾಲದ ಸಮಯದಲ್ಲಿ ಕಫ, ಶೀತದಿಂದ ನಿಮ್ಮನ್ನು ರಕ್ಷಿಸುತ್ತದೆ. ಮೂಲಂಗಿ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ. ದೇಹದಲ್ಲಿನ ಉರಿಯೂತ ಮತ್ತು ಕಿರಿಕಿರಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ರಕ್ತದೊತ್ತಡ ನಿಯಂತ್ರಣ ಮೂಲಂಗಿ ದೇಹಕ್ಕೆ ಪೊಟ್ಯಾಸಿಯಮ್ ನೀಡುತ್ತದೆ. ಇದರಿಂದಾಗಿ ರಕ್ತದೊತ್ತಡವನ್ನು ನಿಯಂತ್ರಣಕ್ಕೆ ತರುವ ಶಕ್ತಿಯಿದೆ. ನೀವು ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದರೆ ಮೂಲಂಗಿ ಸೇವನೆ ಒಳ್ಳೆಯದು.

ಹೃದ್ರೋಗ ಮೂಲಂಗಿಯನ್ನು ಆಂಥೋಸಯಾನಿನ್​ಗಳ ಉತ್ತಮ ಮೂಲವೆಂದು ಪರಿಗಣಿಸಲಾಗುತ್ತದೆ. ಇದರಿಂದಾಗಿ ನಮ್ಮ ಹೃದಯವು ಸರಿಯಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ಮೂಲಂಗಿಯನ್ನು ಸೇವಿಸುವುದರಿಂದ ಹೃದ್ರೋಗ ಸಮಸ್ಯೆ ಕಡಿಮೆಯಾಗುತ್ತದೆ. ಮೂಲಂಗಿಯಲ್ಲಿ ಫೋಲಿಕ್ ಆಮ್ಲ ಮತ್ತು ಫ್ಲೇವನಾಯ್ಡ್​ಗಳು ಸಮೃದ್ಧವಾಗಿರುತ್ತವೆ. ಮೂಲಂಗಿಯು ರಕ್ತದಲ್ಲಿ ಆಮ್ಲಜನಕದ ಪೂರೈಕೆಯನ್ನು ಹೆಚ್ಚಿಸುತ್ತದೆ.

ಫೈಬರ್ ಮೂಲಂಗಿ ಉತ್ತಮ ಪ್ರಮಾಣದ ಫೈಬರ್​ಅನ್ನು ಹೊಂದಿರುತ್ತದೆ. ಪ್ರತಿದಿನ ಸಲಾಡ್ ತಯಾರಿಸಿ ಮೂಲಂಗಿಯನ್ನು ನೀವು ಸೇವಿಸಬಹುದು. ಇದರಲ್ಲಿರುವ ಫೈಬರ್ ಅಂಶದಿಂದಾಗಿ ಜೀರ್ಣಾಂಗ ವ್ಯವಸ್ಥೆ ಸರಿಯಾಗಿ ಕಾರ್ಯನಿರ್ವಹಿಸುತ್ತದೆ. ಇದರ ಹೊರತಾಗಿ ಮೂಲಂಗಿ ಯಕೃತ್ತು ಮತ್ತು ಮೂತ್ರಕೋಶದ ಆರೋಗ್ಯವನ್ನು ಸುಧಾರಿಸುತ್ತದೆ.

ಹೊಳೆಯುವ ತ್ವಚೆ ಹೊಳೆಯುವ ತ್ವಚೆ ಪಡೆಯಬೇಕೆಂದರೆ ನೀವು ಮೂಲಂಗಿ ಸೇವನೆಯನ್ನು ಹೆಚ್ಚಿಸಬೇಕು. ಜ್ಯೂಸ್ ಮಾಡಿಯೂ ನೀವು ಮೂಲಂಗಿಯನ್ನು ಸೇವಸಬಹುದಾಗಿದೆ. ಇದು ಒಣ ಚರ್ಮ ಮತ್ತು ಮೊಡವೆಗಳನ್ನು ತೆಗೆದು ಹಾಕುತ್ತದೆ. ಕೂದಲಿಗೆ ಹಚ್ಚುವುದರಿಂದ ಡ್ಯಾಂಡ್ರಫ್ ಸಮಸ್ಯೆ ದೂರವಾಗುತ್ತದೆ. ಕೂದಲು ಚೆನ್ನಾಗಿ ಬೆಳೆಯಲು ಸಹಾಯ ಮಾಡುತ್ತದೆ.

ಉತ್ತಮ ಪೋಷಕಾಂಶಗಳು ಕೆಂಪು ಮೂಲಂಗಿಯಲ್ಲಿ ವಿಟಮಿನ್ ಇ, ಎ, ಸಿ, ಬಿ6 ಮತ್ತು ಕೆ ಸಮೃದ್ಧವಾಗಿರುತ್ತದೆ. ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು, ಫೈಬರ್, ಸತು, ಪಟ್ಯಾಸಿಯಮ್, ರಂಜಕ, ಮೆಗ್ನೀಶಿಯಮ್, ಕ್ಯಾಲ್ಸಿಯಮ್, ಕಬ್ಬಿಣ ಮತ್ತು ಮ್ಯಾಂಗನೀಸ್ ಸಮೃದ್ಧವಾಗಿರುತ್ತದೆ. ಈ ಎಲ್ಲಾ ಪೋಷಕಾಂಶಗಳು ಒಟ್ಟಾರೆ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.


Spread the love

LEAVE A REPLY

Please enter your comment!
Please enter your name here