HomeLife Styleಪ್ರತಿದಿನ ಬೆಳಿಗ್ಗೆ ಮಜ್ಜಿಗೆ ಕುಡಿಯುವುದರಿಂದ ಏನೆಲ್ಲ ಪ್ರಯೋಜನವಿದೆ ಗೊತ್ತಾ..?

ಪ್ರತಿದಿನ ಬೆಳಿಗ್ಗೆ ಮಜ್ಜಿಗೆ ಕುಡಿಯುವುದರಿಂದ ಏನೆಲ್ಲ ಪ್ರಯೋಜನವಿದೆ ಗೊತ್ತಾ..?

For Dai;y Updates Join Our whatsapp Group

Spread the love

ಸಾಮಾನ್ಯವಾಗಿ ಹೆಚ್ಚಿನ ಜನರು ಎದ್ದ ನಂತರ ಕಾಫಿ ಮತ್ತು ಟೀ ಕುಡಿಯುವ ಅಭ್ಯಾಸವನ್ನು ಹೊಂದಿರುತ್ತಾರೆ. ಆದರೆ, ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಮಜ್ಜಿಗೆ ಕುಡಿದರೆ ಏನಾಗುತ್ತೆ ಅಂತ ಗೊತ್ತಾದ್ರೆ ಇನ್ಮುಂದೆ ಅದನ್ನೇ ಅಭ್ಯಾಸ ಮಾಡಿಕೊಳ್ಳುತ್ತೀರಿ.. ಯಾಕೆಂದರೆ ಮಜ್ಜಿಗೆಯಿಂದ ಹಲವಾರು ಲಾಭಗಳಿವೆ. ಮಜ್ಜಿಗೆ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಕ್ಯಾಲೊರಿಗಳನ್ನು ಕಡಿಮೆ ಮಾಡುತ್ತದೆ. ಪ್ರತಿದಿನ ಬೆಳಿಗ್ಗೆ ಮಜ್ಜಿಗೆ ಕುಡಿಯುವುದರಿಂದ ಇನ್ನೂ ಕೆಲವು ಪ್ರಯೋಜನಗಳನ್ನು ತಿಳಿಯೋಣ.

ಬೆಳಿಗ್ಗೆ ಮಜ್ಜಿಗೆ ಕುಡಿಯುವುದರಿಂದ ಸಿಗುವ ಪ್ರಯೋಜನಗಳೇನು?

  • ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಇರುವವರು ಬೆಳಗಿನ ಉಪಾಹಾರವನ್ನು ಸೇವನೆ ಮಾಡುವ ಮೊದಲು ಒಂದು ಲೋಟ ಮಜ್ಜಿಗೆಯನ್ನು ಕುಡಿಯಬಹುದು. ಈ ರೀತಿ ಮಾಡುವುದರಿಂದ ಮಲಬದ್ಧತೆ, ಅಜೀರ್ಣ ಮತ್ತು ಗ್ಯಾಸ್ ನಂತಹ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು.
  • ಮಜ್ಜಿಗೆ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಏಕೆಂದರೆ ಇದರಲ್ಲಿ ಪ್ರೋಬಯಾಟಿಕ್ ಗಳು ಸಮೃದ್ಧವಾಗಿವೆ. ಇದು ದೇಹದಲ್ಲಿ ಕರುಳಿನ ಬೆಳವಣಿಗೆಯನ್ನು ಉತ್ತೇಜಿಸಿ, ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯವಾಗಿರಿಸುತ್ತದೆ.
  • ಬೇಸಿಗೆಯಲ್ಲಿ ಅನೇಕರು ಆಮ್ಲೀಯತೆ ಅಥವಾ ಅಸಿಡಿಟಿ ಸಮಸ್ಯೆಯಿಂದ ಬಳಲುತ್ತಾರೆ. ಅಂತವರು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮಜ್ಜಿಗೆ ಕುಡಿಯುವುದರಿಂದ ಈ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಬಹುದು.
  • ಮಜ್ಜಿಗೆಯ ನಿಯಮಿತ ಸೇವನೆಯು, ಮೂಳೆಗಳ ಆರೋಗ್ಯವನ್ನು ಹೆಚ್ಚಿಸುಸುತ್ತದೆ. ಏಕೆಂದರೆ ಇದರಲ್ಲಿ ಪೋಷಕಾಂಶಗಳು, ಕ್ಯಾಲ್ಸಿಯಂ, ವಿಟಮಿನ್ ಬಿ 12, ಸತು, ರೈಬೋಫ್ಲೇವಿನ್, ಪ್ರೋಟೀನ್ಗಳು ಸಮೃದ್ಧವಾಗಿದ್ದು ಮೂಳೆಗಳು ಬಲಗೊಳ್ಳುತ್ತವೆ. ಇನ್ನು ಆಯುರ್ವೇದದ ಪ್ರಕಾರ ಮಜ್ಜಿಗೆಯನ್ನು ಹಗಲಿನಲ್ಲಿ ಮಾತ್ರ ಸೇವಿಸಬೇಕು.
  • ಬೇಸಿಗೆಯಲ್ಲಿ ಅತಿಯಾಗಿ ಬೆವರುವುದರಿಂದ ದೇಹದಲ್ಲಿ ನಿರ್ಜಲೀಕರಣ ಸಮಸ್ಯೆ ಉಂಟಾಗಬಹುದು.ಇದರಿಂದ ದೇಹದಲ್ಲಿ ನೀರಿನ ಕೊರತೆ ಉಂಟಾಗುತ್ತದೆ. ಆ ಸಮಯದಲ್ಲಿ ಮಜ್ಜಿಗೆ ಕುಡಿಯುವುದು ನೀರಿನ ಕೊರತೆಯನ್ನು ಸರಿದೂಗಿಸಬಹುದು. ಏಕೆಂದರೆ ಮಜ್ಜಿಗೆ ಕುಡಿಯುವುದರಿಂದ ದೇಹ ತಂಪಾಗಿ, ಹೈಡ್ರೇಟ್ ಆಗಿರುತ್ತದೆ. ಹೆಚ್ಚು ಹೆಚ್ಚು ನೀರು ಕುಡಿಯಲು ಇಷ್ಟಪಡದವರು ಮಜ್ಜಿಗೆ ಟ್ರೈ ಮಾಡಬಹುದು.

Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!