ಖಾಲಿ ಹೊಟ್ಟೆಯಲ್ಲಿ ಕರಿಬೇವಿನ ಎಲೆ ತಿನ್ನುವುದರ ಪ್ರಯೋಜನಗಳು ಎಷ್ಟಿದೆ ಗೊತ್ತಾ..?

0
Spread the love

ಕರಿಬೇವಿನ ಎಲೆಗಳನ್ನು ಪಾಕ ಪದ್ಧತಿಯಲ್ಲಿ ಅದರಲ್ಲೂ ಭಾರತದಲ್ಲಿ ಯಥೇಚ್ಛವಾಗಿ ಬಳಸುತ್ತೇವೆ. ಕರಿಬೇವು ಇಲ್ಲದೇ ಒಗ್ಗರಣೆ ಪೂರ್ಣವಾಗುವುದಿಲ್ಲ. ದಾಲ್ ಕರಿ, ಚಟ್ನಿ, ರಸಂ ಮಸಾಲ ಮಜ್ಜಿಗೆಯಂತಹ ಅಡುಗೆಗೆ ಎರಡು ಕರಿಬೇವಿನ ಎಲೆಗಳನ್ನು ಉದರಿಸಲೇ ಬೇಕು. ಎಣ್ಣೆಗೆ ಬಿದ್ದೊಡನೆ ಪಟ ಪಟ ಶಬ್ದ ಮಾಡುವ ಕರಿಬೇವನ್ನು ಹಾಗೇ ಹಸಿ ಹೊಟ್ಟೆಗೆ ಸೇವಿಸಿದರೇ ಸಿಗುವ ಉಪಯೋಗ ನಿಮಗೆ ಗೊತ್ತಾ . ಹೌದು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕರಿಬೇವಿನ ಸೊಪ್ಪು ಜಗಿದು ತಿನ್ನುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ ಎಂದು ತಜ್ಞರು ತಿಳಿಸಿದ್ದಾರೆ.

Advertisement

ಕರಿಬೇವಿನ ಎಲೆಗಳಲ್ಲಿರುವ ಅಂಶಗಳು.

ತಜ್ಞರ ಪ್ರಕಾರ, ಕರಿಬೇವಿನ ಎಲೆ ಒಂದು ಸೂಪರ್ ಫುಡ್. ಇದು ರೂಟೇಸಿ ಕುಟುಂಬಕ್ಕೆ ಸೇರಿದೆ. ವಿಶೇಷವಾಗಿ ಭಾರತದಲ್ಲಿ ಹಲವಾರು ಖಾದ್ಯಗಳನ್ನು ಸವಿಯಲು ಮತ್ತು ವಿವಿಧ ಕಾಯಿಲೆಗಳಿಗೆ ಪರಿಹಾರ ಕಂಡುಕೊಳ್ಳಲು ಬಳಸಲಾಗುತ್ತದೆ ಏಕೆಂದರೆ ಇದು ಉತ್ಕರ್ಷಣ ನಿರೋಧಕಗಳು ಮತ್ತು ವಿವಿಧ ಪೋಷಕಾಂಶಗಳ ಸಮೃದ್ಧ ಮೂಲವಾಗಿದೆ.

ಕರಿಬೇವಿನ ಎಲೆಗಳ ಮುಖ್ಯವಾದ ಲಕ್ಷಣವೆಂದರೆ ಇದು ತೂಕ ಇಳಿಸಲು ಸಹಾಯ ಮಾಡುವ ಸಾಮರ್ಥ್ಯ ಹೊಂದಿದೆ. ಆದ್ದರಿಂದ ನಿಮ್ಮ ಊಟದಲ್ಲಿ ಒಣಗಿದ ಅಥವಾ ತಾಜಾ ಕರಿಬೇವಿನ ಎಲೆಗಳನ್ನು ಸೇರಿಸಿಕೊಳ್ಳಬಹುದು. ಜೀರ್ಣಕ್ರಿಯೆ, ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುವ ಸಾಮರ್ಥ್ಯ ಮತ್ತು ಕೊಬ್ಬನ್ನು ಸುಡುವ ಸಾಮರ್ಥ್ಯ ಹೊಂದಿರುವುದರಿಂದ ಕರಿಬೇವು ಜನರ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ​

ತೂಕ ನಷ್ಟಕ್ಕೆ ಕರಿಬೇವಿನ ಎಲೆಗಳನ್ನು ಹೇಗೆ ಬಳಸಬಹುದು? 

ತೂಕವನ್ನು ಕಳೆದುಕೊಳ್ಳಲು ನೀವು ಕರಿಬೇವಿನ ಎಲೆಗಳನ್ನು ಬಹಳ ಪರಿಣಾಮಕಾರಿಯಾಗಿ ಬಳಸಬಹುದು. ತಜ್ಞರು ನಿಮ್ಮ ಆಹಾರದಲ್ಲಿ ಕರಿಬೇವಿನ ಎಲೆಗಳನ್ನು ಹೇಗೆ ಸೇರಿಸಬಹುದು ಮತ್ತು ತೂಕವನ್ನು ನಿರ್ವಹಿಸಬಹುದು ಎಂಬ ವಿಧಾನಗಳನ್ನು ಸೂಚಿಸಿದ್ದಾರೆ. *ನಿಮ್ಮ ಅಡುಗೆಗೆ ಕರಿಬೇವಿನ ಎಲೆಗಳನ್ನು ಸೇರಿಸಿ. ಖಾಲಿ ಹೊಟ್ಟೆಯಲ್ಲಿ ಕರಿಬೇವಿನ ಎಲೆಗಳನ್ನು ಸೇವಿಸಿ ಅಥವಾ ಚೆನ್ನಾಗಿ ಅಗಿಯಿರಿ.

ಈ ಕೆಳಗಿನ ರೀತಿಯಲ್ಲಿ ಕರಿಬೇವಿನ ಎಲೆಗಳಿಂದ ಕೂಡಿದ ನೀರನ್ನು ನೀವು ತಯಾರಿಸಬಹುದು:. ಸುಮಾರು 10-20 ಕರಿಬೇವಿನ ಎಲೆಗಳನ್ನು ತೆಗೆದುಕೊಂಡು ನೀರಿನಲ್ಲಿ ಕುದಿಸಿ. ಕೆಲವು ನಿಮಿಷಗಳ ನಂತರ, ನೀರನ್ನು ಸೋಸಿಕೊಂಡು, ಎಲೆಗಳನ್ನು ತೆಗೆಯಿರಿ. ಇದರ ರುಚಿ ಮತ್ತು ಸುವಾಸನೆಯನ್ನು ಹೆಚ್ಚಿಸಲು ಸ್ವಲ್ಪ ಜೇನುತುಪ್ಪ ಮತ್ತು ನಿಂಬೆ ರಸವನ್ನು ಸೇರಿಸಿ. ಈ ಮಿಶ್ರಣವನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಮೊದಲು ಕುಡಿಯಿರಿ.

 


Spread the love

LEAVE A REPLY

Please enter your comment!
Please enter your name here