ಇಲ್ಲಿ ಕೇಳಿ ಜನರೇ: ಚಳಿಗಾಲದಲ್ಲಿ ತಣ್ಣೀರು ಸ್ನಾನ ಮಾಡೋದ್ರಿಂದ ಎಷ್ಟೊಂದು ಲಾಭ ಗೊತ್ತಾ!?

0
Spread the love

ದೈನಂದಿನ ಸ್ನಾನವು ನಮ್ಮನ್ನು ಅನೇಕ ರೋಗಗಳಿಂದ ದೂರವಿರಿಸಲು ಸಹಾಯ ಮಾಡುತ್ತದೆ. ಆದರೆ ನಮ್ಮಲ್ಲಿ ಹಲವರು ಕಾಲಕ್ಕೆ ತಕ್ಕಂತೆ, ಆರೋಗ್ಯದ ದೃಷ್ಟಿಯಿಂದ ಬಿಸಿ ನೀರು, ತಣ್ಣೀರಿನಿಂದ ಸ್ನಾನ ಮಾಡುತ್ತೇವೆ.

Advertisement

ಕೆಲವರು ಯಾವ ಋತುವಿನಲ್ಲಾದರೂ ಬಿಸಿನೀರಿನಿಂದ ಸ್ನಾನ ಮಾಡಿದರೆ ಮತ್ತೆ ಕೆಲವರು ತಣ್ಣೀರಿನಿಂದ ಸ್ನಾನ ಮಾಡ್ತಾರೆ. ಆದರೆ ಚಳಿಗಾಲದಲ್ಲಿ ತಣ್ಣೀರಿನ ಸ್ನಾನ ಮಾಡುವವರೂ ಇದ್ದಾರೆ.

ಚಳಿಗಾಲದಲ್ಲಿ ಸ್ನಾನ ಅಂದ್ರೆನೇ ಹಲವರಿಗೆ ಭಯ. ಯಾಕಂದ್ರೆ ಚಳಿ ಇರೋ ಸಮಯದಲ್ಲಿ ಸ್ನಾನ ಮಾಡಿದ್ರೆ ಇನ್ನೂ ಚಳಿ ಹೆಚ್ಚಾಗುತ್ತೆ. ಹಾಗಾಗಿ ಹಲವರು ಬಿಸಿ ನೀರಿನಿಂದಲೇ ಸ್ನಾನ ಮಾಡ್ತಾರೆ. ಆದ್ರೆ ಕೆಲವರು ಮಾತ್ರ ಮಳೆಗಾಲ, ಬೇಸಿಗೆ, ಚಳಿಗಾಲ ಎನ್ನದೆ ತಣ್ಣೀರಿನಿಂದಲೇ ಸ್ನಾನ ಮಾಡ್ತಾರೆ. ಚಳಿಗಾಲದಲ್ಲಿ ತಣ್ಣೀರಿನಿಂದ ಸ್ನಾನ ಮಾಡಿದ್ರೆ ಏನಾಗುತ್ತೆ ಅಂತ ಈಗ ನೋಡೋಣ.

ರಕ್ತ ಸಂಚಾರ ಉತ್ತಮಗೊಳ್ಳುತ್ತದೆ:-

ಚಳಿಗಾಲದಲ್ಲಿ ತಣ್ಣೀರಿನಿಂದ ಸ್ನಾನ ಮಾಡಿದ್ರೆ ಒಳ್ಳೆಯದಾಗುತ್ತೆ. ಮುಖ್ಯವಾಗಿ ರಕ್ತ ಸಂಚಾರ ಹೆಚ್ಚಾಗುತ್ತೆ. ತಣ್ಣೀರಿನಿಂದ ಸ್ನಾನ ಮಾಡಿದಾಗ ರಕ್ತನಾಳಗಳು ಸಂಕುಚಿತಗೊಳ್ಳುತ್ತವೆ. ಇದರಿಂದ ಶರೀರಕ್ಕೆ ರಕ್ತ ಸರಬರಾಜು ಚೆನ್ನಾಗಿ ಆಗುತ್ತೆ. ದೇಹದ ಉರಿ ಕಡಿಮೆಯಾಗುತ್ತೆ. ಹೃದಯದ ಆರೋಗ್ಯ ಉತ್ತಮಗೊಳ್ಳುತ್ತೆ.

ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ:-

ಚಳಿಗಾಲದಲ್ಲಿ ತಣ್ಣೀರಿನಿಂದ ಸ್ನಾನ ಮಾಡಿದ್ರೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತೆ ಅಂತಾರೆ ಆರೋಗ್ಯ ತಜ್ಞರು. ತಣ್ಣೀರಿನ ಸ್ನಾನ ಬಿಳಿ ರಕ್ತ ಕಣಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ದೇಹದ ನೈಸರ್ಗಿಕ ರಕ್ಷಣೆ ಸಕ್ರಿಯಗೊಳ್ಳುತ್ತದೆ. ಇದರಿಂದ ಜ್ವರ, ಶೀತ ಬರೋ ಸಾಧ್ಯತೆ ಕಡಿಮೆಯಾಗುತ್ತೆ. ನೀವು ಆರೋಗ್ಯವಾಗಿ, ಬಲಿಷ್ಠರಾಗಿ ಇರ್ತೀರಿ.

ಶಕ್ತಿ ಹೆಚ್ಚುತ್ತದೆ:-

ಚಳಿಗಾಲದಲ್ಲಿ ಬೆಳಗ್ಗೆ ತಣ್ಣೀರಿನಿಂದ ಸ್ನಾನ ಮಾಡೋದು ಒಳ್ಳೆಯದು. ಯಾಕಂದ್ರೆ ಇದು ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ. ಮರುದಿನ ಚೈತನ್ಯದಿಂದ ಎದ್ದೇಳಲು ಸಹಾಯ ಮಾಡುತ್ತದೆ ಅಂತಾರೆ ಆರೋಗ್ಯ ತಜ್ಞರು. ತಣ್ಣೀರಿನ ಸ್ನಾನ ದೇಹದ ನೈಸರ್ಗಿಕ ಅಡ್ರಿನಾಲಿನ್ ಪ್ರತಿಕ್ರಿಯೆಯನ್ನು ಸಕ್ರಿಯಗೊಳಿಸುತ್ತದೆ. ಇದರಿಂದ ನೀವು ದಿನವಿಡೀ ಚಟುವಟಿಕೆಯಿಂದ ಇರ್ತೀರಿ.

ಚರ್ಮ ಮತ್ತು ಕೂದಲಿನ ಆರೋಗ್ಯ:

ತಣ್ಣೀರು ಕೂದಲು ಮತ್ತು ಚರ್ಮಕ್ಕೆ ತುಂಬಾ ಒಳ್ಳೆಯದು. ತಣ್ಣೀರು ಚರ್ಮದ ರಂಧ್ರಗಳನ್ನು ಬಿಗಿಗೊಳಿಸಲು, ಚರ್ಮದ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಚರ್ಮದಲ್ಲಿ ರಕ್ತದ ಹರಿವನ್ನು ಉತ್ತಮಗೊಳಿಸುತ್ತದೆ. ಇದರಿಂದ ಚರ್ಮ ಒಳ್ಳೆಯ ಬಣ್ಣದಲ್ಲಿ ಇರುತ್ತದೆ. ತಣ್ಣೀರು ಕೂದಲಿಗೆ ಹೊಳಪನ್ನು ನೀಡುತ್ತದೆ. ಮೃದುವಾಗಿ ಇಡಲು ಸಹಾಯ ಮಾಡುತ್ತದೆ.

ಮನಸ್ಥಿತಿ ಸುಧಾರಣೆ:

ಚಳಿಗಾಲದಲ್ಲಿ ತಣ್ಣೀರಿನಿಂದ ಸ್ನಾನ ಮಾಡಿದ್ರೆ ಮನಸ್ಥಿತಿ ಉತ್ತಮಗೊಳ್ಳುತ್ತದೆ ಅಂತ ಸಂಶೋಧನೆಗಳಿಂದ ತಿಳಿದುಬಂದಿದೆ. ತಣ್ಣೀರಿನ ಆಘಾತ ಎಂಡಾರ್ಫಿನ್‌ಗಳ ಬಿಡುಗಡೆಯನ್ನು ಉತ್ತೇಜಿಸುತ್ತದೆ. ಇದನ್ನು “ಫೀಲ್ ಗುಡ್” ಹಾರ್ಮೋನ್‌ಗಳು ಅಂತ ಕರೀತಾರೆ. ಇದು ಮನಸ್ಥಿತಿಯನ್ನು ಉತ್ತಮಗೊಳಿಸಲು, ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.


Spread the love

LEAVE A REPLY

Please enter your comment!
Please enter your name here