ಮಾನ್ಸೂನ್ ಸಮಯದಲ್ಲಿ ಜೋಳ ತಿನ್ನುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು ಗೊತ್ತಾ..?

0
Spread the love

ನೀವು ಚಾಟ್, ಸೂಪ್​ ನಲ್ಲಿ ಕೂಡ ಕಾರ್ನ್ ಅನ್ನು ಸೇರಿಸಬಹುದು. ಅದೇ ರೀತಿ ಹುರಿದು ತಿನ್ನಬಹುದು. ಇದು ಮ್ಯಾಂಗನೀಸ್, ಸತು, ರಂಜಕ, ವಿಟಮಿನ್ ಬಿ 5 ಅನ್ನು ಹೊಂದಿರುತ್ತದೆ. ವಿಟಮಿನ್ ಬಿ6 ಸಮೃದ್ಧವಾಗಿದೆ. ಈ ಪೋಷಕಾಂಶಗಳು ದೇಹಕ್ಕೆ ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತವೆ.

Advertisement

ಇವು ಕಣ್ಣಿನ ದೃಷ್ಟಿಯನ್ನು ಸುಧಾರಿಸಲು ಸಹಾಯ ಮಾಡುತ್ತವೆ. ದೇಹದಲ್ಲಿನ ರಕ್ತಹೀನತೆಯನ್ನು ಹೋಗಲಾಡಿಸುತ್ತದೆ. ಮಾನ್ಸೂನ್ ಸಮಯದಲ್ಲಿ ಜೋಳ ತಿನ್ನುವುದರಿಂದ ಹೆಚ್ಚಿನ ಆರೋಗ್ಯ ಪ್ರಯೋಜನಗಳನ್ನು ತಿಳಿಯೋಣ.

ತೂಕ ನಷ್ಟ: ಮೊದಲಿಗೆ ಫ್ಯಾಟ್ ಅಥವಾ ಕೊಬ್ಬನ್ನು ಕರಗಿಸಲು ಜೋಳ ಸಹಾಯಕಾರಿಯಾಗಿದೆ. ನಮ್ಮ ದೇಹದಲ್ಲಿ ಇರುವಂತಹ ಅನಗತ್ಯ ಅಥವಾ ಅನಾವಶ್ಯಕ ಕೊಬ್ಬನ್ನು ಕರಗಿಸಲುಜೋಳ ಸಹಾಯಕಾರಿಯಾಗಿದೆ ಪ್ರತಿದಿನ ಜೋಳವನ್ನು ಸೇವನೆ ಮಾಡುವುದರಿಂದ ನಾವು ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು

ಕಾನ್ಸರ್ ವಿರುದ್ಧ ಹೋರಾಟ: ಜೋಳದಲ್ಲಿ ಆಂಟಿ ಆಕ್ಸಿಡೆಂಟ್ ಗುಣವಿದ್ದು ಇದು ನಮ್ಮ ದೇಹದಲ್ಲಿ ಕ್ಯಾನ್ಸರ್ ರೋಗವನ್ನು ಕಡಿಮೆಮಾಡಿಕೊಳ್ಳಲು ಸಹಾಯಕಾರಿಯಾಗಿದೆ.

ಬ್ರೆಸ್ಟ್ ಮತ್ತು ಲಿವರ್ ಟ್ಯೂಮರ್ ಕಡಿಮೆ ಮಾಡಲು: ಜೋಳದಲ್ಲಿ ಇರುವಂತಹ ಪ್ಯಾರಿಯೋಲಿಕ್ ಆಸಿಡ್ ಬ್ರೆಸ್ಟ್ ಮತ್ತು ಲಿವರ್ ನ ಟ್ಯೂಮರ್ ಅನ್ನು ಕಡಿಮೆ ಮಾಡಲು ಸಹಾಯಕಾರಿಯಾಗಿದೆ. ಅಷ್ಟೇ ಅಲ್ಲದೇ ಫ್ರೀ ರಾಡಿಕಲ್ ಇಂದ ಆಗುವಂತಹ ತೊಂದರೆಯಿಂದಲೂ ಸಹ ನಮ್ಮನ್ನು ರಕ್ಷಿಸುತ್ತದೆ.

ಕೊಲೆಸ್ಟ್ರಾಲ್ ಕಡಿಮೆ ಮಾಡಲು: ಜೋಳದಲ್ಲಿ ವಿಟಮಿನ್ ಸಿ ಬಯೋ ಫ್ಲೇವೊನೈಡ್ಸ್, ಫೈಬರ್ ಅಂಶ ಹೇರಳವಾಗಿದ್ದು ಇದು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಿ, ನರಗಳಲ್ಲಿ ಬ್ಲಾಕೆಜ್ ಆಗುವುದನ್ನು ತಡೆಗಟ್ಟುತ್ತದೆ.

ಮೂಳೆಗಳನ್ನು ಬಲಪಡಿಸಲು: ಜೋಳವು ಮೂಳೆಗಳನ್ನು ಬಲಗೊಳಿಸುತ್ತದೆ ಹಾಗೂ ಇದರಲ್ಲಿ ಇರುವಂತಹ ಐರನ್, ಜಿಂಕ್ , ಫಾಸ್ಪರಸ್ , ಮೆಗ್ನೀಷಿಯಂ ಅಂಶಗಳು ಮೂಳೆಗಳ ಸಮಸ್ಯೆಯಿಂದ ದೂರವಿಡುತ್ತದೆ

ಕಣ್ಣಿನ ದೃಷ್ಟಿ ಹೆಚ್ಚಳ: ಜೋಳದಲ್ಲಿ ವಿಟಾ ಕೆರೋಟಿನ್ ಹಾಗೂ ವಿಟಮಿನ್ ಇ ಇದ್ದು ಕಣ್ಣಿನ ದೃಷ್ಟಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.ಕ್ಯಾರೋಟಿನಾಯ್ಡ್ ಅಂಶಗಳು ಕಣ್ಣುಗಳ ಮಧ್ಯ ಭಾಗದ ಕಪ್ಪು ಬಣ್ಣದ ಆಕಾರದಲ್ಲಿ ಪೊರೆ ಉಂಟಾಗದಂತೆ ಎಚ್ಚರ ವಹಿಸುತ್ತವೆ. ಹಾಗಾಗಿ ಕಣ್ಣುಗಳ ದೃಷ್ಟಿ ಎಂದಿಗೂ ಚೆನ್ನಾಗಿಯೇ ಇರುತ್ತದೆ.


Spread the love

LEAVE A REPLY

Please enter your comment!
Please enter your name here