ಕಿವಿ ಹಣ್ಣು ತಿನ್ನುವುದರಿಂದಾಗುವ ಆರೋಗ್ಯ ಪ್ರಯೋಜನಗಳೇನು ಗೊತ್ತಾ..?

0
Spread the love

ಕಿವಿ ಹಣ್ಣನ್ನು ‘ಸುಪರ್ ಫುಡ್’ ಎಂದು ಇನ್ನೂ ಕರೆಯಲಾಗಿಲ್ಲದಿದ್ದರೂ ಹೀಗೆ ಕರೆಯಬಹುದಾದ ಎಲ್ಲಾ ಗುಣಗಳನ್ನು ಹೊಂದಿದೆ. ಪ್ರಮುಖ ವಿಟಮಿನ್ನುಗಳು, ಖನಿಜಗಳು ಸಮೃದ್ಧವಾಗಿದ್ದು ಆರೋಗ್ಯವನ್ನು ವೃದ್ದಿಸುತ್ತವೆ. ಬೀಜಗಳು ಅತಿ ಚಿಕ್ಕದಾಗಿದ್ದು ಗಾಢ, ಹೊಳೆಯುವ ಕಪ್ಪು ಬಣ್ಣದಲ್ಲಿದ್ದರೂ ಇವನ್ನು ಸುರಕ್ಷಿತವಾಗಿ ಸೇವಿಸಬಹುದು. ಇದರ ಸಿಪ್ಪೆ ರೋಮಭರಿತವಾಗಿದ್ದರೂ, ಇದನ್ನೂ ಸೇವಿಸಬಹುದು. ಆದರೆ, ಇದು ಕೊಂಚ ಕಹಿ ಹಾಗೂ ನೋಡಲೂ ಅಷ್ಟು ಆಕರ್ಷಕವಾಗಿರದ ಕಾರಣ ಹೆಚ್ಚಿನವರು ಸಿಪ್ಪೆ ಸುಲಿದು ಒಳಗಿನ ತಿರುಳನ್ನು ಮಾತ್ರವೇ ಸೇವಿಸುತ್ತಾರೆ.

Advertisement

ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ

ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆದು ರಕ್ತದ ಒತ್ತಡ ಕಡಿಮೆಯಾಗಿಸುವ ಗುಣವನ್ನು ಆಸ್ಪಿರಿನ್ ಎಂಬ ಔಷಧಿಯೂ ಹೊಂದಿದೆ, ಆದರೆ, ಆಸ್ಪಿರಿನ್ ಜಠರ ಹಾಗೂ ಕರುಳುಗಳಲ್ಲಿ ಉರಿಯೂತ ಉಂಟು ಮಾಡುವ ಹಾಗೂ ತನ್ಮೂಲಕ ಒಳಪದರಗಳಲ್ಲಿ ಹುಣ್ಣು (ಅಲ್ಸರ್) ಉಂಟು ಮಾಡುವ ಗುಣವನ್ನೂ ಹೊಂದಿದೆ. ಸಂಧೋಶನೆಯ ಪ್ರಕಾರ, ನಿತ್ಯವೂ ಎರಡರಿಂದ ಮೂರು ಕಿವಿ ಹಣ್ಣುಗಳನ್ನು ಸೇವಿಸುತ್ತಾ ಬಂದರೆ ರಕ್ತವನ್ನು ತಿಳಿಗೊಳಿಸಲು ಹಾಗೂ ಕ್ರಮೇಣ ಹೃದಯದ ಮೇಲಿನ ಹೊರೆಯನ್ನು ತಗ್ಗಿಸಲು ಸಾಧ್ಯವಾಗುತ್ತದೆ.

ಕಿವಿಹಣ್ಣಿನ ಸೇವನೆಯಿಂದ ಜೀರ್ಣಶಕ್ತಿ ಉತ್ತಮಗೊಳ್ಳುತ್ತದೆ

ಈ ಹಣ್ಣಿನಲ್ಲಿ ಕರಗದ ಹಾಗೂ ಕರಗುವ ನಾರಿನ ಅಂಶ ಸಮೃದ್ಧವಾಗಿದ್ದು ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ. ನಾರಿನಂಶದ ಹೊರತಾಗಿ, ಇದರ ತಿರುಳಿನಲ್ಲಿರುವ ಆಕ್ಟಿನೈಡಿನ್ ಎಂಬ ಕಿಣ್ವ ಜಠರದಲ್ಲಿ ಪ್ರೋಟೀನುಗಳನ್ನು ಸಮರ್ಥವಾಗಿ ಒಡೆದು ಜೀರ್ಣಿಸಿಕೊಳ್ಳಲು ನೆರವಾಗುವ ಗುಣ ಹೊಂದಿದೆ. ಇದೇ ಕಾರಣಕ್ಕೆ, ಒಂದು ವೇಳೆ ಊಟ ಇಷ್ಟವಾಯಿತೆಂದು ಕೊಂಚ ಹೆಚ್ಚೇ ಊಟ ಮಾಡಿದರೆ ಒಂದು ಕಿವಿ ಹಣ್ಣನ್ನು ಸೇವಿಸುವಂತೆ ಸಲಹೆ ಮಾಡಲಾಗುತ್ತದೆ.ಈ ಮೂಲಕ ಮಾಂಸಾಹಾರ, ಮೀನು ಮೊದಲಾದ ಪ್ರೋಟೀನ್ ಭರಿತ ಆಹಾರಗಳನ್ನು ಸುಲಭವಾಗಿ ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತದೆ. ಹೀಗಾಗದೆ ಇದ್ದರೆ ಹೊಟ್ಟೆಯುಬ್ಬರಿಕೆಗೆ ಕಾರಣವಾಗಬಹುದು. ಅಲ್ಲದೇ ಕಿವಿ ಹಣ್ಣು ಸೌಮ್ಯ ವಿರೇಚಕವೂ ಆಗಿದ್ದು ಜೀರ್ಣಾಂಗಗಳಲ್ಲಿ ಜೀರ್ಣಗೊಂಡ ಆಹಾರ ಸುಲಭವಾಗಿ ಚಲಿಸಲು ಮತ್ತು ಮಲವಿಸರ್ಜನೆಗೂ ನೆರವಾಗುತ್ತದೆ.

ದೃಷ್ಟಿ ಮಂದವಾಗುವುದರಿಂದ ರಕ್ಷಿಸುತ್ತದೆ

ವಯಸ್ಸಾದಂತೆ ದೃಷ್ಟಿ ಕುಂದುವ, ಕ್ರಮೇಣ ಕುರುಡುತನಕ್ಕೆ ಕಾರಣವಾಗುವ ಸ್ಥಿತಿಯಾದ ಮ್ಯಾಕ್ಯುಲಾರ್ ಡೀಜನರೇಶನ್ ಎಂಬ ಸ್ಥಿತಿಯನ್ನು ಕಿವಿ ಹಣ್ಣು ಆದಷ್ಟೂ ನಿಧಾನವಾಗಿಸುತ್ತದೆ. ಸಂಶೋಧನೆಯ ಪ್ರಕಾರ, ನಿತ್ಯವೂ ಮೂರು ಪ್ರಮಾಣದಷ್ಟು ಕಿವಿ ಹಣ್ಣುಗಳನ್ನು ಸೇವಿಸುತ್ತಾ ಬಂದರೆ, ಈ ಸ್ಥಿತಿ ಆವರಿಸುವ ಸಾಧ್ಯತೆ 36% ರಷ್ಟು ತಗ್ಗುತ್ತದೆ ಎಂದು ನಂಬಲರ್ಹ ಮೂಲಗಳಿಂದ ತಿಳಿದುಬಂದಿದೆ. ಇದಕ್ಕೆ ಇದರಲ್ಲಿರುವ ಅಧಿಕ ಪ್ರಮಾಣದ ಜಿಯಾಕ್ಸಾಂಥಿನ್ ಮತ್ತು ಲ್ಯೂಟೀನ್ ಎಂಬ ಪೋಷಕಾಂಶಗಳೇ ಕಾರಣ.

ಡಿ ಎನ್ ಎ ಗಳನ್ನು ಸರಿಪಡಿಸುತ್ತದೆ

ನಮ್ಮ ದೇಹದ ಪ್ರತಿ ಜೀವಕೋಶದ ಡಿ ಎನ್ ಎ ರಚನೆ ವಿಶಿಷ್ಟವಾಗಿದ್ದು ನಮ್ಮ ಎಲ್ಲಾ ಗುಣಗಳು ಹಾಗೂ ಲಕ್ಷಣಗಳಿಗೆ ಕಾರಣವಾಗಿವೆ. ಇವು ಸತತ ಸೆಳೆತಕ್ಕೆ ಒಳಪಡುತ್ತಾ ಇರುತ್ತವೆ. ಈ ರಚನೆ ಬದಲಾದಾಗ, ಇದು ಕಡಿಮೆ ಪ್ರಾಬಲ್ಯದ್ದೇ ಆಗಿದ್ದರೂ ಹೆಚ್ಚಿನ ಪ್ರಾಬಲ್ಯದ್ದೇ ಆಗಿದ್ದರೂ ಸರಿ, ಅನಾರೋಗ್ಯ ಕಾಡುತ್ತದೆ. ಈ ಬದಲಾವಣೆಗಳನ್ನು ಸರಿಪಡಿಸಿ ಡಿ ಎನ್ ಎ ರಚನೆಯನ್ನು ಮೂಲ ಸ್ವರೂಪಕ್ಕೆ ಹಿಂದಿರುಗಿಸುವಲ್ಲಿ ಕಿವಿ ಹಣ್ಣು ಬೇರಾವ ಆಹಾರದಲ್ಲಿಯೂ ಇರದ ಗುಣಗಳನ್ನು ಹೊಂದಿದೆ ಎಂದು ತಿಳಿದುಬಂದಿದೆ. ತಜ್ಞರ ಪ್ರಕಾರ, ನಿತ್ಯವೂ ಕಿವಿ ಹಣ್ಣುಗಳನ್ನು ತಿನ್ನುತ್ತಾ ಬಂದರೆ ಕರುಳಿನ ಕ್ಯಾನ್ಸರ್ ಎದುರಾಗುವ ಸಾಧ್ಯತೆಯೂ ಕಡಿಮೆಯಾಗುತ್ತದೆ. ತನ್ಮೂಲಕ ಕ್ಯಾನ್ಸರ್ ನಿರೋಧಕ ಅಹಾರವಾಗಿ ಕಿವಿ ಹಣ್ಣು ಹೆಚ್ಚಿನ ಪ್ರಾಶಸ್ತ್ಯ ಪಡೆದಿದೆ.

ರಕ್ತದ ಒತ್ತಡವನ್ನು ನಿರ್ವಹಿಸುವಲ್ಲಿ ನೆರವಾಗುತ್ತದೆ

ಅಧಿಕ ರಕ್ತದ ಒತ್ತಡವನ್ನು ಕಡಿಮೆಗೊಳಿಸಿ ಹೃದಯ ಮತ್ತು ರಕ್ತನಾಳಗಳ ಮೇಲಿನ ಒತ್ತಡವನ್ನು ತೆರವುಗೊಳಿಸುವ ಮೂಲಕ ಕಿವಿ ಹಣ್ಣು ಆರೋಗ್ಯವನ್ನು ವೃದ್ದಿಸುತ್ತದೆ. 2014 ರಲ್ಲಿ ಈ ಹಣ್ಣಿನ ಬಗ್ಗೆ ನಡೆಸಿದ ಸಂಶೋಧನೆಯಲ್ಲಿ ನಿತ್ಯವೂ ಮೂರು ಕಿವಿ ಹಣ್ಣುಗಳನ್ನು, ಸತತವಾಗಿ ಎಂಟು ವಾರಗಳ ಕಾಲ ಸೇವಿಸುತ್ತಾ ಬಂದ ವ್ಯಕ್ತಿಗಳಲ್ಲಿ ಸಿಸ್ಟೋಲಿಕ್ ಮತ್ತು ಡಯಾಸ್ಟೋಲಿಕ್ ರಕ್ತದ ಒತ್ತಡಗಳನ್ನು ಸಾಕಷ್ಟು ಮಟ್ಟಿಗೆ ತಗ್ಗಿಸಿರುವುದನ್ನು ಗಮನಿಸಲಾಗಿದೆ. ಕಿವಿ ಹಣ್ಣಿನಲ್ಲಿ ಲ್ಯೂಟಿನ್ ಎಂಬ ಆಂಟಿ ಆಕ್ಸಿಡೆಂಟ್ ಇದ್ದು ಇದೇ ರಕ್ತದ ಒತ್ತಡವನ್ನು ಕಡಿಮೆಗೊಳಿಸುತ್ತದೆ ಎಂದು ಭಾವಿಸಲಾಗಿದೆ. ಕಿವಿಯಲ್ಲಿರುವ ವಿಟಮಿನ್ ಸಿ ಸಹಾ ರಕ್ತದ ಒತ್ತಡವನ್ನು ಕಡಿಮೆಗೊಳಿಸಲು ನೆರವಾಗುತ್ತದೆ.


Spread the love

LEAVE A REPLY

Please enter your comment!
Please enter your name here