ನಮ್ಮ ದಿನನಿತ್ಯದ ಜೀವನದಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ಕಡಲೆಕಾಯಿಯನ್ನು ನಾವು ಬಳಸುತ್ತೇವೆ. ಹೆಚ್ಚಿನವರು ಕಡಲೆಕಾಯಿಯ ಮೇಲಿನ ಒಣ ಸಿಪ್ಪೆಯ ಜತೆಗೆ, ಕಂದು ಬಣ್ಣದ ಸಿಪ್ಪೆ ಅಥವಾ ಹೊಟ್ಟನ್ನು ತೆಗೆದು ತಿನ್ನುತ್ತಾರೆ. ಇದು ತಪ್ಪು ಎಂದು ತಜ್ಞರು ಹೇಳುತ್ತಾರೆ.
ಕಡಲೆಕಾಯಿಯ ಮೇಲಿನ ಸಿಪ್ಪೆ ನಮ್ಮ ಬಾಯಿಗೆ ಸ್ವಲ್ಪ ಕಹಿಯಾಗಿರುತ್ತದೆ. ಆದ್ದರಿಂದ ನಾವು ಇದನ್ನು ತಿನ್ನುವುದನ್ನು ತಡೆಯುತ್ತೇವೆ. ಆದರೆ ಕಡಲೆಕಾಯಿ ಸಿಪ್ಪೆ ಬಿಸಾಡುವ ಬದಲು ಹಾಗೆ ತಿನ್ನುವುದರಿಂದ ಸಾಕಷ್ಟು ಉಪಯೋಗಗಳಿವೆ. ಕಡಲೆಕಾಯಿಗಳನ್ನು ಸೇವಿಸುವುದರಿಂದ ನಿಮಗೆ ದೊರೆಯುವ ಆಹಾರ ಆರೋಗ್ಯ ಲಾಭಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ.
ಹುಣ್ಣು ನಿವಾರಕ ಹುರಿದ ಕಡಲೆಕಾಯಿ ಹೊಟ್ಟುಗಳು ಹಣ್ಣುಗಳಷ್ಟೇ ಪೌಷ್ಟಿಕಾಂಶ ನೀಡುತ್ತದೆ. ಹುರಿದ ಹೊಟ್ಟು ಹೆಚ್ಚು ಉಪಯುಕ್ತವಾಗಿದೆ. ಬಾಯಿ ಹುಣ್ಣಿನಿಂದ ಬಳಲುತ್ತಿರುವವರು ಇದನ್ನು ಸೇವಿಸುವುದು ಸೂಕ್ತ. ಹುರಿದ ಕಡಲೆಕಾಯಿಯಲ್ಲಿ ವಿಟಮಿನ್ ಸಿ ಮತ್ತು ಗ್ರೀನ್ ಟೀಗಿಂತ ಹೆಚ್ಚಿನ ಉತ್ಕರ್ಷಣ ನಿರೋಧಕ ಅಂಶವಿದೆ.
ಇನ್ನಿತರ ಪ್ರಯೋಜನಗಳು ಕಡಲೆಕಾಯಿ ತಾಳ್ಮೆ ಹೆಚ್ಚಿಸಲು ಸಹಾಯ ಮಾಡುತ್ತದೆ. ದೇಹದಲ್ಲಿನ ಉರಿಯೂತ ಮತ್ತು ತುರಿಕೆ ಕಡಿಮೆ ಮಾಡಲು ಇದು ಉಪಯುಕ್ತವಾಗಿದೆ. ಸಿಪ್ಪೆ ಸೇರಿದಂತೆ ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ಕಡಲೆಕಾಯಿಗಳನ್ನು ತಿನ್ನುವುದು ನಮ್ಮ ಆರೋಗ್ಯದಲ್ಲಿ ಸಾಕಷ್ಟು ಬದಲಾವಣೆಗಳನ್ನು ಉಂಟುಮಾಡುತ್ತದೆ.
ಚರ್ಮದ ರಕ್ಷಣೆ ಕಡಲೆಕಾಯಿಯ ಸಿಪ್ಪೆಯಲ್ಲಿರುವ ಬಯೋಆಕ್ಟಿವ್ಸ್ ಮತ್ತು ಫೈಬರ್ ರೋಗದಿಂದ ರಕ್ಷಿಸುತ್ತದೆ ಮತ್ತು ಚರ್ಮದಲ್ಲಿನ ಕಾಯಿಲೆಯನ್ನು ದೂರ ಮಾಡಿ ಚರ್ಮವನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಚರ್ಮವು ಒಣಗದಂತೆ ನೋಡಿಕೊಳ್ಳುವುದರ ಜತೆಗೆ ಹೆಚ್ಚು ಕಾಂತಿಯನ್ನು ನೀಡುತ್ತದೆ.
ಹೃದಯಕ್ಕೆ ಒಳ್ಳೆಯದು ಕಡಲೆಕಾಯಿ ಹೃದ್ರೋಗ, ಕ್ಯಾನ್ಸರ್ ಮತ್ತು ಹೃದಯಾಘಾತವನ್ನು ತಡೆಗಟ್ಟುವ ಗುಣಗಳನ್ನು ಹೊಂದಿದೆ. ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳಿಂದ ನೀವು ಬಳಲುತ್ತಿದ್ದರೆ, ಹುರಿದ ಕಡಲೆಕಾಯಿಯ ಕಂದು ಬಣ್ಣದ ಸಿಪ್ಪೆಯೊಂದಿಗೆ ತಿನ್ನಿ. ನೆನಪಿಡಿ ಒಣಗಿದ ಸಿಪ್ಪೆಯನ್ನು ಮೊದಲೇ ತೆಗೆಯಿರಿ.
ತೂಕ ಇಳಿಕೆಗೆ ಸಹಾಯಕ ಕಡಲೆಕಾಯಿ ಹೆಚ್ಚುವರಿ ತೂಕವನ್ನು ಕಡಿಮೆ ಮಾಡಲು ತುಂಬಾ ಉಪಯುಕ್ತವಾಗಿದೆ. ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ. ಅದಕ್ಕಾಗಿಯೇ ಸಿಪ್ಪೆಯೊಂದಿಗೆ ಕಡಲೆಕಾಯಿ ತಿನ್ನಲು ವೈದ್ಯರು ಸೂಚಿಸುತ್ತಾರೆ.