ಈವರೆಗೆ ದರ್ಶನ್ ನೋಡಲು ಬಂದವರ ಒಟ್ಟು ಸಂಖ್ಯೆ ಎಷ್ಟು ಗೊತ್ತಾ.? ಕೇಳಿದ್ರೆ ಶಾಕ್ ಆಗ್ತೀರಾ.?

0
Spread the love

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ ಒಟ್ಟು 17 ಮಂದಿ ಬಂಧಿತರಾಗಿದ್ದಾರೆ. ಪ್ರಕರಣದಲ್ಲಿ ದರ್ಶನ್ ಎರಡನೇ ಆರೋಪಿ ಆಗಿದ್ದು, ಪವಿತ್ರಾ ಗೌಡ ಮೊದಲ ಆರೋಪಿ ಆಗಿದ್ದಾರೆ. ಪ್ರಕರಣದಲ್ಲಿ ಮೂರು ಜನ ಸಾಕ್ಷಿಗಳಿದ್ದು ಅವರನ್ನು ತುಮಕೂರಿನ ಜೈಲಿಗೆ ವರ್ಗಾವಣೆ ಮಾಡಲಾಗಿದೆ. ಪ್ರಸ್ತುತ ಆರೋಪಿಗಳೆಲ್ಲ ನ್ಯಾಯಾಂಗ ಬಂಧನದಲ್ಲಿದ್ದು, ಆಗಸ್ಟ್ 18ರ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Advertisement

ಇದೀಗ  ದರ್ಶನ್ ಭೇಟಿಗೆ ಜೈಲು ಅಧಿಕಾರಿಗಳಿಂದ ಬೇಕಾಬಿಟ್ಟಿ ಅವಕಾಶ ಎಂಬ ಆರೋಪವಿದೆ. ಆರ್ ಟಿ ಐ ಅರ್ಜಿಯಲ್ಲಿ ದರ್ಶನ್ ಭೇಟಿ ಮಾಡಿದವರ ಲಿಸ್ಟ್ ಬಹಿರಂಗವಾಗಿದೆ. ಆರೋಪಿಗಳನ್ನು ನೋಡಲು ಹತ್ತಿರದ ಸಂಬಂಧಿಗಳಿಗೆ ಮಾತ್ರ ಅವಕಾಶ ಎಂದು ಕೋರ್ಟ್ ಆದೇಶವಿದೆ. ಆದ್ರೆ, ಜೈಲು ಅಧಿಕಾರಿಗಳು ದರ್ಶನ್ ಭೇಟಿಗೆ ತೆರಳುವ ಸ್ನೇಹಿತರಿಗೂ ಅವಕಾಶ ನೀಡಿದ್ದಾರೆ. ಕೋರ್ಟ್ ಆದೇಶದಲ್ಲಿ ಐವರಿಗೆ ಅವಕಾಶ ನೀಡಿ ಅರ್ಧ ಗಂಟೆ ಸಮಯ ನಿಗಧಿ ಮಾಡಿದೆ.

ದರ್ಶನ್ ಪತ್ನಿ ವಿಜಯಲಕ್ಷ್ಮಿ ನಾಲ್ಕು ಬಾರಿ ಭೇಟಿ ಮಾಡಿದ್ದಾರೆ. ದರ್ಶನದ ತಾಯಿ ಮೀನಾ ಜುಲೈ 1 ರಂದು ಭೇಟಿ ಮಾಡಿದ್ದು, ದರ್ಶನ್ ತಮ್ಮ ದಿನಕರ್ 3 ಸಲ ಭೇಟಿ ಮಾಡಿದ್ದಾರೆ. ಆರ್ ಟಿ ಐ ಅರ್ಜಿಯಲ್ಲಿ ದರ್ಶನ್ ಭೇಟಿ ಮಾಡಿದವರ ಲಿಸ್ಟ್ ಬೆಳಕಿಗೆ ಬಂದಿದ್ದು,  ಜೂನ್ 24 ರಂದು ಪತ್ನಿ ವಿಜಯಲಕ್ಷ್ಮಿ ಭೇಟಿ.ಜೂನ್ 29 ನಟಿ ರಕ್ಷಿತಾ ಭೇಟಿ, ಸ್ನೇಹಿತೆ ಎಂದು ನಮೂದಿಸಿ ಭೇಟಿ.ಜುಲೈ 1ರಂದು ದರ್ಶನ್ ತಾಯಿ ಹಾಗೂ ತಮ್ಮ ದಿನಕರ್ ಭೇಟಿ. ಜುಲೈ 2 ರಂದು ಸಮತಾ ಭೇಟಿ, ಪುಸ್ತಕದಲ್ಲಿ ತಂಗಿ ಎಂದು ನಮೂದಿಸಿ ಭೇಟಿಯಾದ ಸಮತಾ.

ಜುಲೈ 10 ರಂದು ಪತ್ನಿ ವಿಜಯಲಕ್ಷ್ಮಿ, ಮಗ, ಸುಶಾಂತ( co-brother), ಚಂದ್ರಶೇಖರ್ ಅಳಿಯ ಭೇಟಿ.ಜುಲೈ 11 ರಂದು ನಟ ಧನ್ವಿರ್, ಚಂದ್ರಶೇಖರ್, ನಾಗೇಶ್, ಸುನೀಲ್, ಶಿವಕುಮಾರ ಭೇಟಿ.ಜುಲೈ15 ರಂದು ಪತ್ನಿ ವಿಜಯಲಕ್ಷ್ಮಿ, ನಿತೀನ್, ದಿನಕರ್, ಅನುಶ್ ಶೆಟ್ಟಿ.ಜುಲೈ19 ರಂದು ದರ್ಶನ್ ಪುಟ್ಣಣ್ಣಯ್ಯ, ರಾಘವ, ತರುಣ್ ಕಿಶೋರ್, ಹೇಮಂತ, ನವೀನ, ಕಿರ್ತನ್, ಕುಮಾರ್ ಭೇಟಿ. ಜುಲೈ 22 ರಂದು ವಿನೋದ್ ಪ್ರಭಾಕರ್ , ದಿನಕರ್, ಸುಶಾಂತ ನಾಯ್ಡು, ಶ್ರೀನಿವಾಸ್, ವಿಜಯಲಕ್ಷ್ಮಿ ಭೇಟಿ. ಜುಲೈ 25 ರಂದು ಸಾಧುಕೋಕಿಲ, ಸಚ್ಚಿದಾನಂದ, ಹರಿಕೃಷ್ಣ, ರಾಮಮೂರ್ತಿ, ಭೋಜರಾಜ ಭೇಟಿ.

ಒಟ್ಟು 30 ಮಂದಿಯಿಂದ ಜೂನ್ -24 ರಿಂದ ಜುಲೈ 25ರ ಒಂದು ತಿಂಗಳ ಅವಧಿಯಲ್ಲಿ  ದರ್ಶನ್ ಭೇಟಿಯಾಗಿದೆ. ಆರ್ ಟಿಐ ಕಾರ್ಯಕರ್ತ ನರಸಿಂಹಮೂರ್ತಿ ಸಲ್ಲಿಸಿದ ಆರ್ ಟಿಐ ಅರ್ಜಿಗೆ ಜೈಲು ಅಧಿಕಾರಿಗಳು ಉತ್ತರ ನೀಡಿದ್ದಾರೆ.

 

 


Spread the love

LEAVE A REPLY

Please enter your comment!
Please enter your name here