ಆರೋಗ್ಯದ ಬಗ್ಗೆ ಕಾಳಜಿ ಇರುವವರು ತಾಜಾ ಹಣ್ಣು ಮತ್ತು ತರಕಾರಿಗಳ ಸೇವನೆಗೆ ಮುಂದಾಗುತ್ತಾರೆ. ದೇಹದ ತೂಕದ ಬಗ್ಗೆ ಅಪಾರ ಪ್ರೀತಿ ಹೊಂದಿರುವವರು ಡ್ರೈಫ್ರೂಟ್ಸ್ ಸೇವನೆ ಮಾಡುತ್ತಾರೆ. ಸಾಮಾನ್ಯವಾಗಿ ಜನರು ಆರೋಗ್ಯದ ಹಿತದೃಷ್ಟಿಯಿಂದ ಹಸುವಿನ ಹಾಲಿನ ಸೇವನೆ ಮಾಡ್ತಾರೆ. ಕೆಲವು ಔಷಧಗಳ ಸೇವನೆಯು ಹಾಲಿನ ಜೊತೆಗೆ ಇರುತ್ತದೆ. ಹಾಲಿನ ಸೇವನೆಯು ಆರೋಗ್ಯ ವೃದ್ಧಿಸುತ್ತದೆ. ಹಾಗೆಯೇ ಎಂದಾದರೂ ನೀವು ಬಾದಾಮಿ ಹಾಲು ಸೇವಿಸಿದ್ದೀರಾ? ಬಾದಾಮಿ ಹಾಲು ಕೂಡ ಸಾಕಷ್ಟು ಆರೋಗ್ಯ ಲಾಭಗಳನ್ನು ನೀಡುತ್ತದೆ.
Advertisement
- ತೂಕವನ್ನು ಕಡಿಮೆ ಮಾಡುತ್ತದೆ: ಸಾಮಾನ್ಯವಾಗಿ ಜನರು ಬಾದಾಮಿಯಲ್ಲಿ ಹೆಚ್ಚಿನ ಕ್ಯಾಲೋರಿಗಳಿವೆ ಎಂದು ಭಾವಿಸುತ್ತಾರೆ. ಆದರೆ ಬಾದಾಮಿಯನ್ನು ಪಾನೀಯವಾಗಿ ಬಳಸಿದರೆ ಅದು ಕಡಿಮೆ ಕ್ಯಾಲೋರಿ ಪಾನೀಯವಾಗುತ್ತದೆ. ಹಾಗಾಗಿ ಕಡಿಮೆ ಕೊಬ್ಬಿನ ಆಹಾರವನ್ನು ತಿನ್ನಲು ಬಯಸುವವರು ಬಾದಾಮಿ ಹಾಲನ್ನು ಕುಡಿಯುವುದು ಉತ್ತಮ . ಏಕೆಂದರೆ ಇದು ಇತರ ಹಾಲುಗಿಂತ ಶೇ. 80 ರಷ್ಟು ಕಡಿಮೆ ಕ್ಯಾಲೊರಿಗಳನ್ನು ಹೊಂದಿರುತ್ತದೆ.
- ಸಕ್ಕರೆ ಕಡಿಮೆ: ನೀವು ಮಧುಮೇಹದಿಂದ ಬಳಲುತ್ತಿದ್ದರೆ, ಹಾಲಿನ ಬದಲಾಗಿ ನೀವು ಬಾದಾಮಿ ಹಾಲನ್ನು ಸೇವಿಸುವುದು ಉತ್ತಮ. ಏಕೆಂದರೆ ಇದರಲ್ಲಿ ಸಕ್ಕರೆ ಅಂಶ ತುಂಬಾ ಕಡಿಮೆ ಇರುತ್ತದೆ. ಹಾಗೆಯೇ ಫೈಬರ್ ಅಂಶವು ಬಾದಾಮಿ ಹಾಲಿನಲ್ಲಿ ಸಮೃದ್ಧವಾಗಿರುತ್ತದೆ.
- ವಿಟಮಿನ್ ಇ ಸಮೃದ್ಧ: ನೀವು ಪ್ರತಿದಿನ ಒಂದು ಕಪ್ ಬಾದಾಮಿ ಹಾಲನ್ನು ಸೇವಿಸಿದರೆ, ಅದು ದಿನಕ್ಕೆ ದೇಹಕ್ಕೆ ಅಗತ್ಯವಿರುವ ವಿಟಮಿನ್ ಇ ಯ 20 ರಿಂದ 50 ಪ್ರತಿಶತದಷ್ಟು ಪೂರೈಸುತ್ತದೆ. ವಿಟಮಿನ್ ಇ ಸಮೃದ್ಧವಾಗಿರುವುದರಿಂದ ಇದು ಅತ್ಯುತ್ತಮ ಉತ್ಕರ್ಷಣ ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ. ಹಾಗೆಯೇ ಒತ್ತಡ, ಉರಿಯೂತದ ಸಮಸ್ಯೆಗಳನ್ನು ದೂರ ಮಾಡುತ್ತದೆ.
- ಭರಪೂರ ಕ್ಯಾಲ್ಸಿಯಂ: ನೀವು ಪ್ರತಿದಿನ ಒಂದು ಕಪ್ ಬಾದಾಮಿ ಹಾಲನ್ನು ಕುಡಿಯುವುದರಿಂದ ನಿಮ್ಮ ದೇಹಕ್ಕೆ ಬೇಕಾದ ಶೇ. 20 ರಿಂದ 45 ರಷ್ಟು ಕ್ಯಾಲ್ಸಿಯಂ ಪಡೆಯಬಹುದು. ಇದು ನಿಮ್ಮ ಹೃದಯ, ಮೂಳೆಗಳು, ನರಗಳು ಇತ್ಯಾದಿಗಳ ಉತ್ತಮ ಕಾರ್ಯನಿರ್ವಹಣೆಗೆ ಸಹಾಯ ಮಾಡುತ್ತದೆ.
- ವಿಟಮಿನ್ ಡಿ: ಬಾದಾಮಿ ಹಾಲಿನಲ್ಲಿ ವಿಟಮಿನ್ ಡಿ ಸಮೃದ್ಧವಾಗಿದ್ದು, ಇದು ಹೃದಯದ ಕಾರ್ಯ, ಮೂಳೆಯ ಆರೋಗ್ಯ ಮತ್ತು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಹೀಗಾಗಿ ದೇಹದ ಆರೋಗ್ಯಕ್ಕೆ ಬಾದಾಮಿ ಹಾಲು ಅತ್ಯುತ್ತಮ ಆಯ್ಕೆಯಾಗಿದೆ.