ಸೀಬೆಕಾಯಿ ಹಲವಾರು ಔಷಧೀಯ ಗುಣಗಳನ್ನು ಹೊಂದಿರುವ ಒಂದು ಸೂಪರ್ ಫುಡ್ ಆಗಿದೆ. ಇದರ ಸಿಪ್ಪೆ, ತಿರುಳು, ಬೀಜ ಎಲ್ಲವನ್ನು ತಿನ್ನಬಹುದಾಗಿದ್ದು ದಿನಾ ಒಂದು ಸೀಬೆಕಾಯಿ ತಿನ್ನುವುದರಿಂದ ಹಲವಾರು ಆರೋಗ್ಯಕರ ಗುಣಗಳನ್ನು ಪಡೆಯಬಹುದು.
ತುಂಬಾ ಅಗ್ಗ ಹಾಗೂ ಸುಲಭವಾಗಿ ಸಿಗುವಂತಹ ಹಣ್ಣು. ಇದರಲ್ಲಿ ಇರುವಂತಹ ವಿಟಮಿನ್ ಗಳು ಹಾಗೂ ಖನಿಜಾಂಶಗಳು ನಮ್ಮ ಆರೋಗ್ಯಕ್ಕೆ ತುಂಬಾ ಲಾಭಕಾರಿ ಎಂದು ಸಂಶೋಧನೆಗಳಿಂದಲೂ ಸಾಬೀತಾಗಿದೆ. ಹೀಗಾಗಿ ಸಿಬೇಕಾಯಿ ಸೇವನೆಯಿಂದ ಏನೆಲ್ಲ ಉಪಯೋಗ ಇದೆ ಎಂಬ ಸಣ್ಣ ಮಾಹಿತಿ ಇಲ್ಲಿದೆ.
ಕ್ಯಾನ್ಸರ್: ಪೇರಲ ಹಣ್ಣಿನ ಸೇವನೆಯು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್ಗಳು ಸ್ತನ ಕ್ಯಾನ್ಸರ್ ಮತ್ತು ಇತರ ಕ್ಯಾನ್ಸರ್ಗಳನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
ಮುಟ್ಟಿನ ನೋವು: ಅನೇಕ ಮಹಿಳೆಯರು ಮುಟ್ಟಿನ ನೋವನ್ನು ಅನುಭವಿಸುತ್ತಾರೆ. ಈ ಸಮಯದಲ್ಲಿ ನೋವು ನಿವಾರಣೆ ಔಷಧಿಯನ್ನು ತೆಗೆದುಕೊಳ್ಳದೇ ಒಂದು ಪೇರಲವನ್ನು ತಿನ್ನುವುದರಿಂದ ಮುಟ್ಟಿನ ನೋವಿನಿಂದ ತ್ವರಿತ ಪರಿಹಾರವನ್ನು ಪಡೆಯಬಹುದು.
ಚರ್ಮ ಮತ್ತು ಕಣ್ಣಿನ ಆರೋಗ್ಯ: ಪೇರಲದಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ, ಇದು ಉತ್ತಮ ಚರ್ಮ ಮತ್ತು ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಪೇರಲದಲ್ಲಿ ಕೂಡ ನಾರಿನಂಶ ಅಧಿಕವಾಗಿದೆ. ಈ ಅಂಶವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಮಧುಮೇಹ: ಮಧುಮೇಹ ಚಿಕಿತ್ಸೆಯಲ್ಲಿ ಪೇರಲ ರಸದಲ್ಲಿರುವ ಅಂಶಗಳು ತುಂಬಾ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ಮಧುಮೇಹವನ್ನು ತಡೆಗಟ್ಟುವಲ್ಲಿ ಪೇರಲೆ ಬಹಳ ಪರಿಣಾಮಕಾರಿ ಹಣ್ಣಾಗಿದೆ. ಮಧುಮೇಹಿಗಳು ಪ್ರತಿದಿನ ಒಂದು ಪೇರಲ ಹಣ್ಣನ್ನು ತಿನ್ನುವುದರಿಂದ ಸಾಕಷ್ಟು ಪ್ರಯೋಜನ ಪಡೆಯಬಹುದು.
ರೋಗ ನಿರೋಧಕ ಶಕ್ತಿ: ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಪೇರಲ ತುಂಬಾ ಸಹಕಾರಿ ಆಗಿದೆ. ಇದರಲ್ಲಿರುವ ವಿಟಮಿನ್ ಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ದೇಹವನ್ನು ವಿವಿಧ ರೀತಿಯ ಸಾಮಾನ್ಯ ಸೋಂಕುಗಳಿಂದ ರಕ್ಷಿಸುತ್ತದೆ.