ಗೂಲಾಬಿ ಹೂವು ಪ್ರೇಮದ ಸಂಕೇತ. ಹೂವು ಮನಸ್ಸನ್ನು ಪ್ರಶಾಂತಗೊಳಿಸುತ್ತದೆ. ಗುಲಾಬಿ ಹೂವು ಅನೇಕ ರೀತಿಯಲ್ಲಿ ಪ್ರಯೋಜನಕಾರಿ. ಇದು ನಿಮ್ಮ ದೇಹ, ಮನಸ್ಸು ಹಾಗು ಚರ್ಮದ ಮೇಲೆ ಸಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಪ್ರಾಚೀನ ಕಾಲದಿಂದಲೂ ಸುಪ್ರಸಿದ್ಧವಾದ ಸೌಂದರ್ಯ ವರ್ಧಕವಾಗಿದೆ.
ಗುಲಾಬಿ ಹೂವಿನ ದಳಗಳನ್ನು ತಿನ್ನುತ್ತಾ ಹೋದರೆ ಮುಖದ ಮೇಲಿನ ಕಲೆಗಳು ಸಹ ದೂರವಾಗಿ ಒಳಗಿನಿಂದಲೇ ಸೌಂದರ್ಯ ಹೆಚ್ಚುತ್ತದೆ. ಪುರುಷರಿಗೂ ಕೂಡ ಗುಲಾಬಿ ಹೂವಿನ ದಳಗಳಿಂದ ಸಾಕಷ್ಟು ಉಪಯೋಗವಿದೆ. ಈ ಲೇಖನದಲ್ಲಿ ಗುಲಾಬಿ ಹೂವಿನ ಬಳಕೆಯ ಬಗ್ಗೆ ಮತ್ತು ಅವುಗಳ ಪ್ರಯೋಜನಗಳ ಬಗ್ಗೆ ತಿಳಿಸಿಕೊಡಲಾಗಿದೆ.
ಗುಲಾಬಿಯು ದೇಹವನ್ನು ತಂಪುಗೊಳಿಸುವ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ವಾತ, ಪಿತ್ತ ಮತ್ತು ಕಫಗಳಿಗೆ ಗುಲಾಬಿಯಿಂದ ಅನೇಕ ಪ್ರಯೋಜನಗಳಿವೆ. ಬೇಸಿಗೆಯ ತಿಂಗಳುಗಳಲ್ಲಿ ಪಿತ್ತದ ಅಸಮತೋಲನ ಉಂಟಾದರೆ ಇದು ವಿಶೇಷವಾಗಿ ಪ್ರಯೋಜನಕಾರಿಯಾಗಿದೆ.
ಗುಲಾಬಿಯಿಂದ ನಮ್ಮ ಆರೋಗ್ಯಕ್ಕೆ ಆಗುವ ಪ್ರಯೋಜನಗಳು ಹೀಗಿವೆ:
– ಹಾರ್ಮೋನುಗಳನ್ನು ಸಮತೋಲನಗೊಳಿಸುತ್ತದೆ.
– ಕಣ್ಣುಗಳು ಮತ್ತು ಚರ್ಮದ ಉರಿಯೂತವನ್ನು ಕಡಿಮೆ ಮಾಡುತ್ತದೆ.
– ನೋಯುತ್ತಿರುವ ಗಂಟಲು ಮತ್ತು ಕೆಮ್ಮನ್ನು ಶಮನಗೊಳಿಸುತ್ತದೆ.
– ನಿದ್ರಾಹೀನತೆಯನ್ನು ಕಡಿಮೆ ಮಾಡುತ್ತದೆ.
– ಜೀರ್ಣಾಂಗವನ್ನು ಸರಿಯಾಗಿಸುತ್ತದೆ.
– ನರ, ಕೋಪ ಮತ್ತು ದುಃಖದ ಭಾವನೆಗಳನ್ನು ಶಮನಗೊಳಿಸುತ್ತದೆ.
– ಮುಖದ ಸುಕ್ಕುಗಳನ್ನು ಕಡಿಮೆ ಮಾಡುತ್ತದೆ.
– ನೋವು ನಿವಾರಕವಾಗಿದೆ.
– ನಂಜುನಿರೋಧಕ ಗುಣಲಕ್ಷಣಗಳನ್ನು ಹೊಂದಿದೆ.
– ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡುತ್ತದೆ.
– ನ್ಯೂರೋಪ್ರೊಟೆಕ್ಟಿವ್ ಗುಣಲಕ್ಷಣಗಳನ್ನು ಹೊಂದಿದೆ.