ಬೆಳಗ್ಗೆ ಎದ್ದ ತಕ್ಷಣ ಒಂದು ಕಪ್ ಹಾಲಿನಲ್ಲಿ ಟೀ ಅಥವಾ ಸಂಜೆ ಒಂದು ಕಪ್ ಕಾಫಿ ಕುಡಿಯುವುದು ಪ್ರತಿಯೊಬ್ಬ ವ್ಯಕ್ತಿಗೂ ಅಗತ್ಯ. ಕೇವಲ ಸಕ್ಕರೆ ಅಥವಾ ಪೌಷ್ಟಿಕಾಂಶದ ಪೌಡರ್ ಬೆರೆಸಿ ಹಾಲು ಕುಡಿಯುವವರಿದ್ದಾರೆ. ಅದಲ್ಲದೆ ಹಾಲು ಕುಡಿಯುವುದು ಒಳ್ಳೆಯದು ಎಂಬುದು ನಮ್ಮ ತಾತ- ಮುತ್ತಜ್ಜಿ ಕಾಲದಿಂದಲೂ ಹೇಳಿಕೊಂಡು ಬಂದಿರುವ ವಿಚಾರ.
ಹಾಲಿನಲ್ಲಿ ಕ್ಯಾಲ್ಸಿಯಂ ಅಂಶ ಹೆಚ್ಚಾಗಿರುವುದರಿಂದ ಇದು ಮೂಳೆಗಳ ಆರೋಗ್ಯಕ್ಕೆ ಸಹಕಾರಿ. ಹೀಗಾಗಿ, ಮಕ್ಕಳಿಗೆ ಬೆಳಗ್ಗೆ ಮತ್ತು ಸಂಜೆ ದೊಡ್ಡ ಲೋಟದಲ್ಲಿ ಹಾಲು ಕೊಡುವ ಅಭ್ಯಾಸ ಹಲವು ಮನೆಗಳಲ್ಲಿದೆ. ಆದರೆ, ಹಾಲನ್ನು ಅತಿಯಾಗಿ ಸೇವಿಸುವುದು ಕೂಡ ಒಳ್ಳೆಯದಲ್ಲ ಎಂಬುದು ನಿಮಗೆ ಗೊತ್ತಾ? ಈ ಸ್ಟೋರಿ ನೋಡಿ
ಆಯಾಸ: ದಿನನಿತ್ಯ ಮೂರು ಲೋಟಗಳಿಗಿಂತ ಹೆಚ್ಚು ಹಾಲು ಸೇವಿಸುವುದರಿಂದ ಸುಸ್ತು ಉಂಟಾಗುತ್ತದೆ. ಅತಿಯಾಗಿ ಸೇವಿಸುವುದರಿಂದ ಕರುಳಿನ ಆರೋಗ್ಯಕ್ಕೆ ಹಾನಿಯುಂಟಾಗುತ್ತದೆ ಮತ್ತು ನೀವು ಬೇಗನೆ ಆಯಾಸಗೊಳ್ಳಬಹುದು ಎಂದು ಅಧ್ಯಯನವು ಸೂಚಿಸುತ್ತದೆ. ಹಾಲಿನಲ್ಲಿರುವ ಎ1 ಕ್ಯಾಸೀನ್ ಇದಕ್ಕೆ ಕಾರಣ.
ಚರ್ಮದ ಸಮಸ್ಯೆಗಳು: ಹೆಚ್ಚು ಹಾಲು ಕುಡಿಯುವುದರಿಂದ ಚರ್ಮದ ಸಮಸ್ಯೆಗಳು ಉಂಟಾಗಬಹುದು. ಅಲರ್ಜಿ ಮತ್ತು ಮೊಡವೆಯಂತಹ ಚರ್ಮದ ಸಮಸ್ಯೆಗಳು ಬರುತ್ತವೆ. ನೀವು ಹಾಲಿನಲ್ಲಿ ಹೆಚ್ಚು ಸಂರಕ್ಷಕಗಳನ್ನು ಬಳಸಿದರೆ, ಚರ್ಮವು ಕೆಂಪು ಬಣ್ಣಕ್ಕೆ ತಿರುಗುತ್ತದೆ, ಬಿರುಕು ಮತ್ತು ರಾಷಸ್ ಆಗುತ್ತದೆ.
ಬ್ರೈನ್ ಫಾಗ್ಸ್: ಹೆಚ್ಚು ಹಾಲು ಸೇವಿಸುವುದರಿಂದ ಜ್ಞಾಪಕ ಶಕ್ತಿ ನಷ್ಟವಾಗುತ್ತದೆ. ಮೆದುಳು ಮಂಜು ಮಂಜಾಗುತ್ತದೆ. ಹೆಚ್ಚು ಹಾಲು ಕುಡಿದರೆ ಕೆಲಸದತ್ತ ಗಮನ ಹರಿಸದಿರುವುದು, ಏಕಾಗ್ರತೆ ಕಡಿಮೆಯಾಗುವುದು ಮುಂತಾದ ಸಮಸ್ಯೆಗಳು ಎದುರಾಗುತ್ತವೆ. ವಯಸ್ಸಾದವರಲ್ಲಿ ಈ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತವೆ.
ಜೀರ್ಣಕಾರಿ ಸಮಸ್ಯೆಗಳು: ಹೆಚ್ಚು ಹಾಲು ಕುಡಿಯುವುದರಿಂದ ಜೀರ್ಣಕಾರಿ ಸಮಸ್ಯೆಗಳು ಉಂಟಾಗಬಹುದು. ಹೊಟ್ಟೆ ಉಬ್ಬುವುದು ಮತ್ತು ಅತಿಸಾರದ ಅಪಾಯವೂ ಇದೆ. ನಿಮ್ಮ ದೇಹವು ಲ್ಯಾಕ್ಟೋಸ್ ಅನ್ನು ಸರಿಯಾಗಿ ಚಯಾಪಚಯಗೊಳಿಸಲು ಸಾಧ್ಯವಾಗದಿದ್ದರೆ, ಅದು ಜೀರ್ಣಾಂಗ ವ್ಯವಸ್ಥೆಯನ್ನು ಹಾನಿಗೊಳಿಸುತ್ತದೆ.
ಹಾರ್ಮೋನ್ ಸಮಸ್ಯೆಗಳು: ಹಾಲಿನ ಉತ್ಪಾದನೆಯನ್ನು ಹೆಚ್ಚಿಸಲು ಡೈರಿ ಉದ್ಯಮದಲ್ಲಿ ಬೆಳವಣಿಗೆಯ ಹಾರ್ಮೋನುಗಳನ್ನು ಬಳಸಲಾಗುತ್ತದೆ. ಇಂತಹ ಹಾಲು ಕುಡಿಯುವುದರಿಂದ ದೇಹದಲ್ಲಿ ಹಾರ್ಮೋನ್ ಸಮತೋಲನ ತಪ್ಪುತ್ತದೆ.
ಹಾಗಾಗಿ ವೈದ್ಯರ ಸಲಹೆಯಂತೆ ದಿನಕ್ಕೆ ಒಂದು ಲೋಟ ಹಾಲು ಕುಡಿದರೆ ಅದು ನಮ್ಮ ದೇಹಕ್ಕೆ ಅಮೃತದಂತೆ ಕೆಲಸ ಮಾಡುತ್ತದೆ. ನಮಗೆ ಬೇಕಾದ ಪೋಷಕಾಂಶಗಳು ಸರಿಯಾಗಿ ಸಿಗುತ್ತವೆ.