ಸಾವಿರಾರು ವರ್ಷಗಳ ಹಿಂದೆಯೇ ಬಳಕೆಯಲ್ಲಿರುವ ಅಗಸೆ ಬೀಜಗಳು ಆರೋಗ್ಯಕ್ಕೆ ಭರಪೂರ ಉಪಯೋಗಗಳನ್ನು ನೀಡುತ್ತವೆ. ಹೇರಳವಾದ ಪೌಷ್ಟಿಕಾಂಶಗಳನ್ನು ಹೊಂದಿರುವ ಅಗಸೆ ಬೀಜಗಳು ನೋಡಲು ಪುಟ್ಟದಾಗಿದ್ದರೂ ಆರೋಗ್ಯಕ್ಕೆ ಬೆಟ್ಟದಷ್ಟು ಉಪಯೋಗಗಳನ್ನು ನೀಡುತ್ತವೆ. ಹಲವು ಸಮಸ್ಯೆಗಳಿಗೆ ರಾಮಬಾಣವಾಗಿರುವ ಈ ಅಗಸೆ ಬೀಜವನ್ನು ಹೇಗೆ ಸೇವಿಸಬೇಕು? ಇದರಿಂದ ಏನೆಲ್ಲಾ ಪ್ರಯೋಜನಗಳಿವೆ? ಇಲ್ಲಿದೆ ನೋಡಿ
ಅಗಸೆ ಬೀಜದ ಪ್ರಯೋಜನಗಳೇನು?
ಜೀರ್ಣಕ್ರಿಯೆಗೆ ಸಹಕಾರಿ ಅಗಸೆ ಬೀಜವು ಜೀರ್ಣಕ್ರಿಯೆಗೆ ಹೆಚ್ಚು ಸಹಕಾರಿಯಾಗಿದೆ. ಒಮೆಗಾ -3 ಕೊಬ್ಬಿನಾಮ್ಲಗಳು, ಪ್ರೋಟೀನ್ಸ್, ಫೈಬರ್, ಜೀವಸತ್ವಗಳು ಮತ್ತು ಖನಿಜಗಳು ಇದರಲ್ಲಿವೆ. ಅಗಸೆ ಬೀಜಗಳು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ.
ತೂಕ ನಿರ್ವಹಣೆ ಸ್ಥೂಲಕಾಯ ಹೊಂದಿರುವವರಿಗೆ ಅಗಸೆ ಬೀಜ ರಾಮಬಾಣ. ರಕ್ತದಲ್ಲಿನ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುವಲ್ಲಿ ಇದು ಪ್ರಯೋಜನಕಾರಿ. ಪ್ರತಿದಿನ ತಿನ್ನುವುದರಿಂದ ಕೊಲೆಸ್ಟ್ರಾಲ್ ಮಟ್ಟವನ್ನು ಶೇ. 6 ರಿಂದ ಶೇ.11 ರಷ್ಟು ಕಡಿಮೆ ಮಾಡಬಹುದು.
ಮಲಬದ್ಧತೆ ಅಗಸೆ ಬೀಜದಲ್ಲಿ ಸಾಕಷ್ಟು ಪ್ರಮಾಣದ ಫೈಬರ್ ಇದ್ದು, ಇದು ಜೀರ್ಣಕಾರಿ ಶಕ್ತಿಯನ್ನು ಹೆಚ್ಚಿಸುವ ಮೂಲಕ ಮಲಬದ್ಧತೆಯನ್ನು ಹೋಗಲಾಡಿಸುತ್ತದೆ.
ಉರಿಯೂತದ ಕಾಯಿಲೆ, ಹೃದಯ ಕಾಯಿಲೆ, ಹಾರ್ಮೋನುಗಳ ಅಸಮತೋಲನ, ಹೊಟ್ಟೆ ಉಬ್ಬರ ಮತ್ತು ಎಡಿಮಾವನ್ನು ಕಡಿಮೆ ಮಾಡುತ್ತದೆ. ಆಗಸೆ ಬೀಜಗಳು ಟೈಪ್ 2 ಡಯಾಬಿಟಿಸ್, ಕ್ಯಾನ್ಸರ್ ಮತ್ತು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಬಲ್ಲದು.ಈ ಮೇಲಿನ ಲೇಖನವು ಟಿವಿ9ನ ಅಧಿಕೃತ ಮಾಹಿತಿಯಲ್ಲ, ಕೆಲವು ಅಧ್ಯಯನಗಳ ಮಾಹಿತಿಯನ್ನೊಳಗೊಂಡಿದೆ.
ಅಕಾಲಿಕ ವೃದ್ಧಾಪ್ಯ ನಿಯಂತ್ರಣ ಅಗಸೆಬೀಜದಲ್ಲಿ ಆಂಟಿ-ಆಕ್ಸಿಡೆಂಟ್ಸ್ ಮತ್ತು ಫೈಟೊಕೆಮಿಕಲ್ಸ್ ಗುಣ ಲಕ್ಷಣಗಳಿವೆ, ಇದು ಹೆಚ್ಚುತ್ತಿರುವ ವಯಸ್ಸಿನಲ್ಲಿ ಮುಖದ ಚರ್ಮವನ್ನು ಯುವ್ವನಯುಕ್ತವಾಗಿರಿಸುತ್ತದೆ. ಸುಕ್ಕುಗಳು ಸಮಸ್ಯೆ ದೂರವಾಗಿಸಿ ಮತ್ತು ಚರ್ಮವು ಹೊಳೆಯುವಂತೆ ಮಾಡುತ್ತದೆ.
ಅಗಸೆ ಬೀಜ ಯಾರು ಸೇವಿಸಬಾರದು?ಈಸ್ಟ್ರೊಜೆನ್ ಮಟ್ಟವನ್ನು ಬದಲಾಯಿಸುವ ಔಷಧಿಗಳು ಮಲಬದ್ಧತೆಗಾಗಿ ಔಷಧ ಸೇವಿಸುವವರು ರಕ್ತದೊತ್ತಡವನ್ನು ಕಡಿಮೆ ಮಾಡುವ ಔಷಧಿಗಳು ರಕ್ತ ತೆಳುವಾಗುವುದು ಆಸ್ಪಿರಿನ್ ಔಷಧವನ್ನು ತೆಗೆದುಕೊಳ್ಳುವವರು ನ್ಯಾಪ್ರೋಕ್ಸೆನ್ ನಂತಹ ಉರಿಯುತದ ಔಷಧಗಳು ಇನ್ಸುಲಿನ್ ಗ್ಲೈಬುರೈಡ್