ಹಲ್ಲು ಹುಳುಕಾಗಲು ಕಾರಣ ಏನು ಗೊತ್ತಾ!? ವೈದ್ಯರು ಹೇಳೋದಿಷ್ಟು!?

0
Spread the love

ಇಂದಿನ ದಿನಗಳಲ್ಲಿ ದಂತ ಸಮಸ್ಯೆಗಳು ಬರಲು ವಯಸ್ಸಾಗಬೇಕು ಎನ್ನುವುದಿಲ್ಲ. ಸಣ್ಣ ವಯಸ್ಸಿನಲ್ಲಿಯೇ ಹಲ್ಲಿನ ಸಮಸ್ಯೆಗಳಾದ ದಂತ ಕುಳಿ, ವಸಡಿನ ನೋವುಗಳು ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತದೆ. ಆದರೆ ಈ ಆಹಾರಗಳ ನಿರಂತರ ಸೇವನೆಯಿಂದ ದಂತಕುಳಿ ಅಥವಾ ಹುಳುಕು ಹಲ್ಲಿನ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಎಂದು ತಜ್ಞರು ತಿಳಿಸಿದ್ದಾರೆ.

Advertisement

ತಜ್ಞರ ಪ್ರಕಾರ ಹುಳುಕು ಹಲ್ಲಿನ ಸಮಸ್ಯೆಗೆ ಕಾರಣವಾಗುವ ಆಹಾರಗಳಿವು:
ಜಿಗುಟಾದ ಮಿಠಾಯಿಗಳು : ಈ ಸಿಹಿ ಪದಾರ್ಥಗಳು ಆರೋಗ್ಯಕರ ಹಲ್ಲಿಗೆ ಅಪಾಯಕಾರಿಯಾಗಿದೆ. ಈ ಮಿಠಾಯಿಗಳನ್ನು ನಿಮ್ಮ ಹಲ್ಲುಗಳಿಗೆ ಅಂಟಿಕೊಂಡಿರುತ್ತವೆ. ಹಲ್ಲುಜ್ಜುವ ಮೂಲಕ ತೆಗೆದುಹಾಕುವುದು ಕಷ್ಟಕರವಾಗಿದೆ. ಹೀಗಾಗಿ ಇದು ದಂತಕುಳಿಗಳಿಗೆ ಕಾರಣವಾಗುವ ಬ್ಯಾಕ್ಟೀರಿಯಾದ ಸಂತಾನೋತ್ಪತ್ನಿಗೆ ಕಾರಣವಾಗುತ್ತದೆ.

ಎಣ್ಣೆಯಲ್ಲಿ ಕರಿದ ತಿಂಡಿಗಳು : ಬಾಯಿಗೆ ರುಚಿ ನೀಡುವ ಈ ಕರಿದ ತಿಂಡಿಗಳು ಹಲ್ಲಿನ ಆರೋಗ್ಯಕ್ಕೆ ಹಾನಿಕಾರಕ. ಈ ತಿಂಡಿಗಳನ್ನು ತಯಾರಿಸಲು ಕಡಿಮೆ ಬೆಲೆಯ ಹಾಗೂ ಕಲಬೆರಕೆಯ ಎಣ್ಣೆಯನ್ನು ಬಳಸುವುದರಿಂದ ಹಲ್ಲಿನ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ.

ತಂಪು ಪಾನೀಯ : ಹಣ್ಣಿನ ರಸ ಹಾಗೂ ತಂಪು ಪಾನೀಯಗಳ ಸೇವನೆಯು ಆರೋಗ್ಯಕ್ಕೆ ಒಳ್ಳೆಯದೆಂದು ಭಾವಿಸುತ್ತೇವೆ. ಈ ಪಾನೀಯಗಳಲ್ಲಿ ಕೃತಕ ಸಕ್ಕರೆ ಹಾಗೂ ಆಮ್ಲಗಳಿರುತ್ತದೆ. ಇದು ದಂತಕವಚವನ್ನು ದುರ್ಬಲಗೊಳಿಸಿ, ಹಲ್ಲುಗಳಲ್ಲಿ ಹುಳುಕು ಕಾಣಿಸಿಕೊಳ್ಳುತ್ತವೆ.

ಆರೋಗ್ಯಕರ ಹಲ್ಲುಗಳನ್ನು ಕಾಪಾಡಿಕೊಳ್ಳಲು ಸಲಹೆಗಳು:-
ಫ್ಲೋರೈಡ್ ಟೂತ್ ಪೇಸ್ಟ್ ನಿಂದ ದಿನಕ್ಕೆ ಎರಡು ಬಾರಿ ಹಲ್ಲುಜ್ಜುವುದರಿಂದ ಹಲ್ಲಿನ ಸಂಧಿಯಲ್ಲಿ ಸಿಲುಕಿಕೊಳ್ಳುವ ಆಹಾರಗಳನ್ನು ತೆಗೆದುಹಾಕಬಹುದು.

ಆಹಾರವನ್ನು ಸೇವಿಸಿದ ಬಳಿಕ ನೀರು ಕುಡಿಯುವ ಅಭ್ಯಾಸವನ್ನು ಬೆಳೆಸಿಕೊಳ್ಳಿ, ಇದರಿಂದ ಹಲ್ಲುಗಳ ಸಂಧಿಯಲ್ಲಿ ಸಿಲುಕಿದ ಆಹಾರಗಳು ಹೋಗುತ್ತದೆ.

ಆಹಾರ ಸೇವನೆಯ ಬಳಿಕ ಬಾಯಿ ಮುಕ್ಕಳಿಸುವುದನ್ನು ಮರೆಯದಿರಿ.

ಸಕ್ಕರೆ ಮತ್ತು ಆಮ್ಲೀಯ ಪಾನೀಯಗಳ ಸೇವನೆಯನ್ನು ಆದಷ್ಟು ಕಡಿಮೆ ಮಾಡಿ.

ಸಕ್ಕರೆ ಅಥವಾ ಆಮ್ಲೀಯ ಪಾನೀಯಗಳನ್ನು ಕುಡಿದ ಬಳಿಕ ಬಾಯಿಯನ್ನು ನೀರಿನಿಂದ ಮುಕುಳಿಸುವ ಮೂಲಕ ಸ್ವಚ್ಛಗೊಳಿಸಿ.

ಹಲ್ಲಿನ ಆರೋಗ್ಯ ಹಾಗೂ ನಿಯಮಿತ ತಪಾಸಣೆಗಾಗಿ ದಂತವೈದ್ಯರನ್ನು ಭೇಟಿ ಮಾಡಿ.


Spread the love

LEAVE A REPLY

Please enter your comment!
Please enter your name here