ಪ್ರತಿದಿನ ಮೊಟ್ಟೆ ತಿಂದರೆ ದೇಹದಲ್ಲಿ ಏನೆಲ್ಲಾ ಬದಲಾವಣೆ ಆಗುತ್ತೆ ಗೊತ್ತಾ?

0
Spread the love

ನಮ್ಮಲ್ಲಿ ಬಹುತೇಕ ಜನರಿಗೆ ಬೆಳಗಿನ ಉಪಹಾರದ ಸಮಯದಲ್ಲಿ ಕೋಳಿ ಮೊಟ್ಟೆ ತಿನ್ನುವ ಅಭ್ಯಾಸ ವಿರುತ್ತದೆ. ಇದು ಕೇವಲ ರುಚಿ ನೀಡುತ್ತದೆ ಎನ್ನುವ ಕಾರಣಕ್ಕೆ ಯಾರು ಸಹ ಸೇವನೆ ಮಾಡುವುದಿಲ್ಲ.
ಬದಲಿಗೆ ಇದರಲ್ಲಿರುವ ಪ್ರೊಟೀನ್ ಅಂಶ ಮತ್ತು ಇತರ ಕೆಲವು ಆರೋಗ್ಯಕರ ಪ್ರಯೋಜನಗಳ ಕಾರಣದಿಂದ ಇದನ್ನು ಸೇವನೆ ಮಾಡುತ್ತಾರೆ. ಪ್ರತಿದಿನ ಇದರ ಸೇವನೆಗೆ ಆದ್ಯತೆ ನೀಡಿದರೆ ಉತ್ತಮ ಆರೋಗ್ಯ ನಿಮ್ಮದಾಗುತ್ತದೆ. ಬನ್ನಿ ಇಂದಿನ ಲೇಖನದಲ್ಲಿ ದಿನಕ್ಕೊಂದು ಮೊಟ್ಟೆ ಸೇವಿಸಿದರೆ ಸಿಗುವ ಆರೋಗ್ಯ ಪ್ರಯೋಜನಗಳೇನು ಎಂಬುದನ್ನು ನೊಡೋಣ.

Advertisement

ಸ್ನಾಯುಗಳ ಆರೋಗ್ಯ: ಮೊಟ್ಟೆಯನ್ನು ಪ್ರತಿ ದಿನ ತಿನ್ನುವುದರಿಂದ ತುಂಬಾನೇ ಮುಖ್ಯವಾದ ಪ್ರಯೋಜನ ಎಂದರೆ ಇದರಲ್ಲಿರುವ ಪ್ರೋಟೀನ್ ಅಂಶ ಮೂಳೆಗಳ ಆರೋಗ್ಯವನ್ನು ಸುಧಾರಿಸುತ್ತದೆ ಅಂತ. ಮೊಟ್ಟೆಯಲ್ಲಿರುವ ಪ್ರೋಟೀನ್ ಅಂಶವು ಎಲ್ಲಾ 9 ಅಮೈನೋ ಆಸಿಡ್‌ಗಳನ್ನು ಹೊಂದಿದೆ, ಇದು ಜಿಮ್‌ಗೆ ಹೋಗಿ ತಾಲೀಮು ಮಾಡುವವರಿಗೆ ಸ್ನಾಯುಗಳನ್ನು ಬಲಗೊಳಿಸಲು ಮತ್ತು ಅದರ ಆರೋಗ್ಯವನ್ನು ವೃದ್ಧಿಸಲು ತುಂಬಾನೇ ಸಹಾಯ ಮಾಡುತ್ತದೆ. ಎಲ್ಲಾ ವಯೋಮಾನದವರೂ ಸಹ ಮೊಟ್ಟೆ ತಿನ್ನುವುದರಿಂದ ಅನೇಕ ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು.,

ಮೂಳೆಗಳ ಆರೋಗ್ಯ: ಮೊಟ್ಟೆಗಳು ವಿಟಮಿನ್ ಡಿ ಅನ್ನು ಹೊಂದಿರುತ್ತದೆ, ಇದು ಮೂಳೆಗಳ ಆರೋಗ್ಯವನ್ನು ಸುಧಾರಿಸುತ್ತದೆ. ವಿಟಮಿನ್ ಡಿ ಅಂಶವು ಕ್ಯಾಲ್ಸಿಯಮ್ ಅಂಶವನ್ನು ಹೀರಿಕೊಳ್ಳುತ್ತದೆ ಮತ್ತು ಇದು ಮೂಳೆಗಳ ಸಾಂದ್ರತೆಯನ್ನು ಹೆಚ್ಚಿಸಬಹುದು. ಇದು ಆಸ್ಟಿಯೋಪೊರೋಸಿಸ್ ಮತ್ತು ಮೂಳೆ ಮುರಿತಗಳ ಗಾಯಗಳನ್ನು ವಾಸಿ ಮಾಡುತ್ತದೆ. ಪ್ರತಿ ದಿನ ಮೊಟ್ಟೆ ತಿಂದರೆ ನಿಮ್ಮ ದೇಹದಲ್ಲಿರುವ ಮೂಳೆಗಳು ತುಂಬಾನೇ ಬಲವಾಗುತ್ತವೆ

ಮೆದುಳಿನ ಆರೋಗ್ಯ: ಲುಟೀನ್, ಜಿಯಾಕ್ಸಾಂತಿನ್ ಎಂಬ ಆಂಟಿಆಕ್ಸಿಡೆಂಟ್‌ಗಳನ್ನು ಹೊಂದಿರುತ್ತದೆ ಈ ಮೊಟ್ಟೆಗಳು. ಇದು ಅರಿವಿನ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ. ಮೊಟ್ಟೆಯಲ್ಲಿರುವ ಇನ್ನೊಂದು ಅಂಶವಾದ ಚೋಲೈನ್ ಮಿದುಳಿನ ಆರೋಗ್ಯವನ್ನು ವೃದ್ಧಿಸುತ್ತದೆ. ಅಷ್ಟೇ ಅಲ್ಲದೆ ಪ್ರತಿ ದಿನ ಮೊಟ್ಟೆ ತಿನ್ನುವುದು ನಮ್ಮ ಮನಸ್ಥಿತಿಯನ್ನು ಸಹ ಚೆನ್ನಾಗಿರುಸುತ್ತದೆ ಅಂತ ಹೇಳಲಾಗುತ್ತದೆ.

ದೇಹದ ತೂಕ ನಿರ್ವಹಣೆ: ಮೊಟ್ಟೆಯು ನಿಮ್ಮ ದೇಹದ ತೂಕವನ್ನು ಸಹ ನಿರ್ವಹಿಸಿಕೊಳ್ಳಲು ಸಹಾಯ ಮಾಡುತ್ತದೆ. ಎಂದರೆ ಮೊಟ್ಟೆಯಲ್ಲಿರುವ ಪ್ರೋಟೀನ್ ಅಂಶವು ದೇಹಕ್ಕೆ ಸಾಕಷ್ಟು ಶಕ್ತಿಯನ್ನು ಒದಗಿಸುತ್ತದೆ ಮತ್ತು ಹೊಟ್ಟೆ ತುಂಬಿಸಿದ ಅನುಭವ ಸಹ ಇದು ನೀಡುತ್ತದೆ. ಹಾಗಾಗಿ ಹೊಟ್ಟೆ ಹಸಿವಾಗುವುದಿಲ್ಲ ಮತ್ತು ಏನನ್ನು ಸಹ ಊಟದ ಮಧ್ಯೆ ತಿನ್ನಲು ಹೋಗುವುದಿಲ್ಲ. ಹಾಗಾಗಿ ಇದು ತೂಕ ಕಡಿಮೆ ಮಾಡಿಕೊಳ್ಳುವ ಜನರಿಗೆ ತುಂಬಾನೇ ಪ್ರಯೋಜನಕಾರಿಯಾಗಿದೆ.

ಒಳ್ಳೆಯ ಕೊಲೆಸ್ಟ್ರಾಲ್ ಅನ್ನು ವೃದ್ದಿಸುತ್ತದೆ: ಅನೇಕರು ಮೊಟ್ಟೆ ತಿನ್ನುವುದರಿಂದ ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ ಅಂತ ಅಂದುಕೊಂಡಿರುತ್ತಾರೆ. ಆದರೆ ಹೆಚ್ಚಿನ ಅಧ್ಯಯನಗಳು ಸೂಚಿಸಿದಂತೆ ಮೊಟ್ಟೆಗಳು ಎಚ್‌ಡಿಎಲ್ ಎಂಬ ಲಿಪಿಡ್ ಪ್ರೊಫೈಲ್ ಅನ್ನು ಹೆಚ್ಚಿಸುತ್ತದೆ. ಈ ಒಳ್ಳೆಯ ಕೊಲೆಸ್ಟ್ರಾಲ್ ಹೃದಯ ಸಂಬಂಧಿ ರೋಗಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಮೊಟ್ಟೆಯು ಅನೇಕ ರೀತಿಯ ಆರೋಗ್ಯ ಪ್ರಯೋಜನಗಳನ್ನು ಹೊಂದಿದ್ದರೂ ಸಹ ಕೆಲವರಿಗೆ ಇದು ಪ್ರತಿ ದಿನ ಸೇವಿಸಲು ಯೋಗ್ಯವಾದ ಆಹಾರವಲ್ಲವಂತೆ. ಕೆಲವು ಮಕ್ಕಳಿಗೆ ಮೊಟ್ಟೆ ವಾಸನೆಯಿಂದ ಅಲರ್ಜಿ ಇರಬಹುದು, ಅಲ್ಲದೆ ಕೊಲೆಸ್ಟ್ರಾಲ್ ಹೆಚ್ಚಿರುವ ವಯಸ್ಕರು ವೈದ್ಯರ ಜೊತೆ ಇದನ್ನು ಸಮಾಲೋಚಿಸಿ ಮೊಟ್ಟೆಯನ್ನು ತಮ್ಮ ಡಯಟ್‌ಗೆ ಸೇರಿಸಿಕೊಳ್ಳುವುದು ಮುಖ್ಯವಾಗುತ್ತದೆ.

 


Spread the love

LEAVE A REPLY

Please enter your comment!
Please enter your name here