ಈಗ ವಾತಾವರಣ ಬದಲಾವಣೆಯ ಸಮಯ ಆಗಿರುವುದರಿಂದ ಬಿಸಿಲು ಮತ್ತು ಆಗಾಗ ಮಳೆಯ ಸಿಂಚನ ಇದ್ದೇ ಇರುತ್ತದೆ. ಇಂತಹ ಸಮಯದಲ್ಲಿ ಬಹಳಷ್ಟು ಜನರು ಹುಷಾರು ತಪ್ಪುತ್ತಾರೆ. ಸೂಕ್ಷ್ಮ ಆರೋಗ್ಯ ಹೊಂದಿರುವವರು ಬಹಳ ಬೇಗನೆ ಶೀತ, ನೆಗಡಿ, ಕೆಮ್ಮು ಇತ್ಯಾದಿ ಸಮಸ್ಯೆಗಳಿಗೆ ಗುರಿಯಾಗುತ್ತಾರೆ.
ಕೆಲವರಿಗೆ ಎದೆಯಲ್ಲಿ ಮತ್ತು ಮೂಗಿನಲ್ಲಿ ಕಪ ಕಟ್ಟಿದ ಅನುಭವ ಉಂಟಾಗುತ್ತದೆ.
Advertisement
ದೀರ್ಘಕಾಲದಲ್ಲಿ ಇದು ಅಸ್ತಮಾ ಸಮಸ್ಯೆಗೆ ಕಾರಣವಾಗುತ್ತದೆ. ಇಂತಹ ಸಂದರ್ಭದಲ್ಲಿ ವ್ಯಕ್ತಿಗೆ ಉಸಿರಾಡಲು ಮತ್ತಷ್ಟು ಕಷ್ಟವಾಗುತ್ತದೆ. ಆದರೆ ಕಷ್ಟಕರವಾದ ಉಸಿರಾಟದ ಅವಸ್ಥೆಯನ್ನು ಸರಿ ಪಡಿಸಿಕೊಳ್ಳಲು ಮನೆ ಮದ್ದಿನ ರೂಪದಲ್ಲಿ ಬಹಳ ಸುಲಭದ ಮಾರ್ಗಗಳು ಇವೆ. ಪುದೀನಾಎಲೆಗಳು ಇದರಲ್ಲಿ ನಿಮಗೆ ಸಹಾಯಕ ಎಂದು ಹೇಳಬಹುದು.
- ಪುದೀನಾ ರೋಗನಿರೋಧಕ ಶಕ್ತಿಯಲ್ಲಿ ಸಮೃದ್ಧವಾಗಿದೆ. ಹವಾಮಾನ ಬದಲಾವಣೆಯಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳಿಗೆ ಇದು ಪರಿಹಾರವನ್ನು ನೀಡುತ್ತದೆ. ಅಂದರೆ ಶೀತ, ಕೆಮ್ಮು ಮತ್ತು ಗಂಟಲು ನೋವನ್ನು ಕಡಿಮೆ ಮಾಡಲು ಇದು ಬೆಸ್ಟ್ ಮನೆಮದ್ದು.
- ಪುದೀನಾವನ್ನು ನಿಯಮಿತವಾಗಿ ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆಯು ಸರಿಯಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ಹೊಟ್ಟೆ ನೋವು, ಅಸಿಡಿಟಿ ಮುಂತಾದ ಸಮಸ್ಯೆಗಳನ್ನು ತಡೆಯುತ್ತದೆ.
- ಕೆಲವರಿಗೆ ಬಾಯಿ ದುರ್ವಾಸನೆ ಇರುತ್ತದೆ. ಪ್ರಯತ್ನ, ಪ್ರಯೋಗಗಳ ಹೊರತಾಗಿಯೂ ಎಫೆಕ್ಸ್ ಇರುವುದಿಲ್ಲ. ಹೀಗಿದ್ದಾಗ ಬೆಳಿಗ್ಗೆ ಎರಡು ಪುದೀನ ಎಲೆಗಳನ್ನು ಚೆನ್ನಾಗಿ ಅಗಿಯಿರಿ. ಇದು ಬಾಯಿಯ ದುರ್ವಾಸನೆ ಹೋಗಲಾಡಿಸುವುದು ಮಾತ್ರವಲ್ಲದೆ ಸೂಕ್ಷ್ಮಜೀವಿಗಳು ಮತ್ತು ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ.
- ಪುದೀನಾ ಕೂದಲನ್ನು ಆರೋಗ್ಯವಾಗಿರಿಸುತ್ತದೆ. ಪುದೀನಾದಲ್ಲಿರುವ ಆ್ಯಂಟಿ ಆಕ್ಸಿಡೆಂಟ್ ಮತ್ತು ಕ್ಯಾರೋಟಿನ್ ಕೂದಲಿನ ಬೆಳವಣಿಗೆಗೆ ಸಹಾಯ ಮಾಡುವುದಲ್ಲದೆ ಕೂದಲು ಉದುರುವುದನ್ನು ತಡೆಯುತ್ತದೆ.
- ಪುದೀನಾದಲ್ಲಿರುವ ವಿಟಮಿನ್ ಎ ದೃಷ್ಟಿಯನ್ನು ಸುಧಾರಿಸುತ್ತದೆ. ವಯಸ್ಸಿಗೆ ಸಂಬಂಧಿಸಿದ ಕಣ್ಣಿನ ಸಮಸ್ಯೆಗಳನ್ನು ಸಹ ತಡೆಯುತ್ತದೆ.