ನಮ್ಮ ದೇಹದಲ್ಲಿರುವ ಪ್ರತಿಯೊಂದು ಭಾಗಗಳೂ ಹೇಗೆ ಒಂದಕ್ಕೊಂದು ಸಂಬಂಧ ಹೊಂದಿದೆಯೋ ಹಾಗೆಯೇ, ಜೀವನದಲ್ಲಿ ಉಂಟಾಗುವ ಸಮಸ್ಯೆ ಹಾಗೂ ಜ್ಯೋತಿಷ್ಯ ಸಂಬಂಧ ಹೊಂದಿದೆ. ಹಾಗೆಯೇ ಕಿವಿಯ ಮೇಲೆ ಕೂದಲು ಇರುವುದರ ಹಿಂದೆ ಸಹ ಒಂದು ಕಾರಣವಿರುತ್ತದೆ.
ಎಸ್, ಕೆಲವರಿಗೆ ಕೈ ಮೇಲೆ ಕೂದಲು ಬೆಳೆದರೆ, ಕೆಲ ಪುರುಷರಲ್ಲಿ ಎದೆ ಮೇಲೆ ಸಿಕ್ಕಾಪಟ್ಟೆ ಕೂದಲು ಬೆಳೆಯುತ್ತವೆ. ಇನ್ನೂ ಕೆಲವರ ಕಿವಿಯಲ್ಲೂ ಕೂದಲು ಬೆಳೆಯುತ್ತವೆ. ಹೀಗೆ ಬೆಳೆಯುವ ಕೂದಲುಗಳ ಮೂಲಕ ಸಾಮುದ್ರಿಕ ಶಾಸ್ತ್ರದಲ್ಲಿ ವ್ಯಕ್ತಿಯ ಭವಿಷ್ಯ, ಶುಭ ಮತ್ತು ಅಶುಭಗಳ ಬಗ್ಗೆ ತಿಳಿಸಲಾಗುತ್ತದೆ. ಹಾಗಾದರೆ ಕಿವಿಯಲ್ಲಿ ಕೂದಲಿದ್ದರೆ ಅದು ಶುಭದ ಸಂಕೇತವೋ ಅಥವಾ ಅಶುಭವೋ? ಅದರ್ಥ ಏನು ಎಂಬುದನ್ನು ತಿಳಿಯೋಣ ಬನ್ನಿ.
ಸಮುದ್ರಿಕ ಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿಯ ಕಿವಿಯಲ್ಲಿ ಸ್ವಾಭಾವಿಕವಾಗಿ ಉದ್ದ ಮತ್ತು ದಪ್ಪ ಕೂದಲು ಬೆಳೆದರೆ, ಅದು ತುಂಬಾ ಶುಭದ ಸಂಕೇತವಾಗಿದೆ. ಕಿವಿಯ ಮೇಲೆ ಕೂದಲು ಬೆಳೆದರೆ ಅದು ಆ ವ್ಯಕ್ತಿಗೆ ದೀರ್ಘಯುಷ್ಯವಿರುತ್ತಂತೆ. ಜೊತೆಗೆ ಆರೋಗ್ಯವು ಉತ್ತಮವಾಗಿರುತ್ತದೆ ಎಂದು ಹೇಳಲಾಗುತ್ತದೆ.
ಶಾಂತ ಮತ್ತು ಗಂಭೀರ ಜನರು: ಕಿವಿಯ ಮೇಲೆ ಕೂದಲು ಇರುವ ಜನರು ಸ್ವಭಾವತಃ ಶಾಂತ, ಗಂಭೀರ ಮತ್ತು ಚಿಂತನಶೀಲ ವ್ಯಕ್ತಿಗಳಾಗಿರುತ್ತಾರೆ. ಅವರು ಆತುರದಿಂದ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ. ಅಂತಹ ಜನರ ಆಲೋಚನೆಗಳು ಇತರರಿಗಿಂತ ಭಿನ್ನವಾಗಿರುತ್ತವೆ. ಈ ಜನರು ತಮ್ಮನ್ನು ಮಾತ್ರ ನಂಬುತ್ತಾರೆ ಮತ್ತು ಇವರು ಇತರರಿಗೆ ಸರಿಯಾದ ಮತ್ತು ನಿಖರವಾದ ಸಲಹೆಯನ್ನು ನೀಡುತ್ತಾರೆ.
ಆಧ್ಯಾತ್ಮಿಕ ಒಲವು: ಸಾಮುದ್ರಿಕ ಶಾಸ್ತ್ರದ ಪ್ರಕಾರ, ಕಿವಿಗಳಲ್ಲಿ ಕೂದಲು ಹೊಂದಿರುವ ಜನರು ಆಧ್ಯಾತ್ಮಿಕತೆ, ತತ್ವಶಾಸ್ತ್ರದ ಕಡೆಗೆ ಹೆಚ್ಚು ಒಲವು ತೋರುತ್ತಾರೆ ಮತ್ತು ಇವರು ಒಂಟಿಯಾಗಿರಲು ಇಷ್ಟಪಡುತ್ತಾರೆ. ಮತ್ತು ಆಧ್ಯಾತ್ಮಿಕತೆಯಲ್ಲಿ ಹೆಚ್ಚಿನ ಒಲವು ಹೊಂದಿರುತ್ತಾರೆ.
ಸಂಪತ್ತು ಮತ್ತು ಸಮೃದ್ಧಿ: ಸಾಮುದ್ರಕ ಶಾಸ್ತ್ರದಲ್ಲಿ ಕಿವಿಗಳ ಮೇಲೆ ಕೂದಲು ಬೆಳೆಯುವುದನ್ನು ಸಂಪತ್ತು ಮತ್ತು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಸಮುದ್ರಿಕ ಶಾಸ್ತ್ರದ ಪ್ರಕಾರ, ಕಿವಿಯ ಮೇಲೆ ಕೂದಲು ಇರುವ ಜನರು ಜೀವನದಲ್ಲಿ ಕಠಿಣ ಪರಿಶ್ರಮಿಗಳು ಮತ್ತು ಶ್ರದ್ಧೆಯುಳ್ಳವರಾಗಿರುತ್ತಾರೆ. ಅಂತಹ ಜನರು ಕ್ರಮೇಣ ಆರ್ಥಿಕ ಸ್ಥಿರತೆಯನ್ನು ಪಡೆಯುತ್ತಾರೆ ಮತ್ತು ಕಾಲಾನಂತರದಲ್ಲಿ ಉತ್ತಮ ಸಮೃದ್ಧಿಯನ್ನು ಗಳಿಸುತ್ತಾರೆ.

ಎಚ್ಚರಿಕೆ ಚಿಹ್ನೆಗಳು:
ಕಿವಿಯ ಮೇಲೆ ಕೂದಲು ಇರುವುದು ಸಾಮಾನ್ಯವಾಗಿ ಶುಭವೆಂದು ಪರಿಗಣಿಸಲಾಗಿದ್ದರೂ, ಈ ಕೂದಲು ಅತಿಯಾಗಿ ದಪ್ಪವಾಗಿದ್ದರೆ, ಸಿಕ್ಕು ಬಿದ್ದಿದ್ದರೆ ಅಥವಾ ಅಸಹಜವಾಗಿ ಕಂಡುಬಂದರೆ, ಅದು ಮಾನಸಿಕ ಒತ್ತಡ, ಹಾರ್ಮೋನು ಅಸಮತೋಲನ ಅಥವಾ ಯಾವುದೇ ಆರೋಗ್ಯ ಸಮಸ್ಯೆಯ ಸಂಕೇತವೂ ಆಗಿರಬಹುದು. ಅಂತಹ ಪರಿಸ್ಥಿತಿಯಲ್ಲಿ, ವೈದ್ಯಕೀಯ ಸಲಹೆಯನ್ನು ಪಡೆಯುವುದು ಉತ್ತಮ.