ಕರಾವಳಿಯ ಮುದ್ದಿನ ಮಗಳು ರಕ್ಷಿತಾ ಶೆಟ್ಟಿ ಬಿಗ್ ಬಾಸ್ ಮನೆಯಲ್ಲಿ ತಮ್ಮ ನೈಸರ್ಗಿಕ ನಡಗೆ, ಮುದ್ದಾದ ಮಾತುಗಳು ಹಾಗೂ ಕನ್ನಡ ಮಾತನಾಡುವ ಪ್ರಯತ್ನದಿಂದಲೇ ವೀಕ್ಷಕರ ಹೃದಯ ಗೆದ್ದಿದ್ದಾರೆ. ಈಗಾಗಲೇ ‘ಟಗರು ಪುಟ್ಟಿ’ ಎಂಬ ಖ್ಯಾತಿ ಗಳಿಸಿರುವ ರಕ್ಷಿತಾ, ಯಾರು ಕೈಹಿಡಿಯಬೇಕು ಎಂಬ ವಿಚಾರವನ್ನೂ ಮಜಾದಾಯಕವಾಗಿ ಹಂಚಿಕೊಂಡಿದ್ದಾರೆ.
ಇತ್ತೀಚೆಗೆ ಉಗ್ರಂ ಮಂಜು, ಮೋಕ್ಷಿತಾ ಪೈ, ರಜತ್, ಚೈತ್ರಾ ಕುಂದಾಪುರ, ತ್ರಿವಿಕ್ರಮ್ ಮನೆಗೆ ಅತಿಥಿಗಳಾಗಿ ಬಂದಾಗ ರಕ್ಷಿತಾದ ಮದುವೆ ವಿಚಾರವೂ ಚರ್ಚೆಗೆ ಬಂದಿದೆ. “ನಿನ್ನ ಮದುವೆ ಆಗೋ ಹುಡುಗ ಹೇಗಿರ್ಬೇಕು?” ಎಂದು ರಜತ್ ಕೇಳಿಕೊಂಡಾಗ, ರಕ್ಷಿತಾ ಮುದ್ದಾಗಿ, “ನನಗೆ ಹಳ್ಳಿ ಹುಡುಗ ಬೇಕು, ಅವನಿಗೆ ತೋಟ ಇರಬೇಕು. ಕೃಷಿ ಮಾಡ್ಬೇಕು. ನಾನು ಅವನ ಕೆಲಸದ ವೀಡಿಯೋ ಮಾಡ್ತೀನಿ. ನನ್ನ ಫ್ಯಾಮಿಲಿಯಲ್ಲಿ ಎಲ್ಲರೂ ಸೋಶಿಯಲ್ ಮೀಡಿಯಾದಲ್ಲಿಲ್ಲ, ನನಗೆ ಸಪೋರ್ಟ್ ಮಾಡುವ ಹುಡುಗ ಬೇಕು,” ಎಂದರು.
ರಜತ್ ಕುತೂಹಲವಾಗಿ, “ಮದುವೆ ಆದಮೇಲೆ ನೀನು ಅವರನ್ನು ಬೇಡ ಅಂದರೆ?” ಎಂದು ಕೇಳಿದಾಗ ರಕ್ಷಿತಾ ನಗುತ್ತಾ, “ಬೇಡ ಅಂದ್ರೆ ನಾನು ಮಾಡಿಯೇ ಮಾಡ್ತೀನಿ, ಇದ್ದ್ರೆ ಇರ್ತಾರೆ, ಹೋದ್ರೆ ಹೋಗ್ತಾರೆ,” ಎಂದು ಹೇಳುತ್ತಿದ್ದಂತೆ ಮನೆ ಮಂದಿ ನಗುತುಂಬಿದರು.
ಇದೆ ವೇಳೆ ತ್ರಿವಿಕ್ರಮ್–ರಕ್ಷಿತಾ ನಡುವೆ ನಡೆದ ಮುದ್ದಾದ ಸಂಭಾಷಣೆಯೂ ವೈರಲ್ ಆಗಿದೆ. ತ್ರಿವಿಕ್ರಮ್ ಮಜಾಕಾಗಿ, “ನಾನು ರೈತನಾಗ್ತೀನಿ, ನಿನ್ನ ಯುಟ್ಯೂಬ್ ವ್ಲಾಗ್‌ಗೆ ಬಿಡ್ತೀನಿ, ನನ್ನ ಜೊತೆ ಮದುವೆ ಆಗ್ತೀಯಾ?” ಎಂದರೆ, ರಕ್ಷಿತಾ ಕೇಳದೇ “ಟ್ರೈ ಮಾಡ್ತೀನಿ” ಎಂದು ಉತ್ತರಿಸಿದರು. ಇದಕ್ಕೆ ತ್ರಿವಿಕ್ರಮ್, “ಮದುವೆ ಒಂದು ಸಲ ಆಗೋದು, ಟ್ರೈ ಮಾಡ್ಬೇಕಾಗಿಲ್ಲ,” ಎಂದಾಗ ಎಲ್ಲರೂ ಚಪ್ಪಾಳೆ ಹೊಡೆದರು. ರಕ್ಷಿತಾ ಕೂಡಾ ಕುತೂಹಲದಿಂದ, “ನನ್ನ ಮದುವೆಗೆ ನೀವೇ ಬರಬೇಕು!” ಎಂದರು.
ಕಳೆದ ವಾರ ಮತ್ತೆ ತಮ್ಮ ಹಳೆ ಫಾರ್ಮ್‌ಗೆ ಮರಳಿದ ರಕ್ಷಿತಾ, ಸುದೀಪ್ ಅವರಿಂದ ‘ಕಿಚ್ಚನ ಚಪ್ಪಾಳೆ’ ಪಡೆಯುವಷ್ಟು ಅಚ್ಚುಮೆಚ್ಚಾಗಿದ್ದಾರೆ.



