ನವದೆಹಲಿ: ಏಪ್ರಿಲ್ 22ರಂದು ಪಹಲ್ಗಾಮ್ನಲ್ಲಿ ಉಗ್ರರು ದಾಳಿ ಮಾಡಿದ್ದು, ಇದರಲ್ಲಿ 26 ಪ್ರವಾಸಿಗರು ಸಾವನ್ನಪ್ಪಿದ್ದರು. ಇದಾದ ಬಳಿಕ ಭಾರತೀಯ ಸೇನೆ ಮೇ 7ರಂದು ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿ ಪಾಕಿಸ್ತಾನದಲ್ಲಿದ್ದ ಉಗ್ರರ ನೆಲೆಗಳನ್ನು ಧ್ವಂಸಗೊಳಿಸುವಲ್ಲಿ ಯಶಸ್ವಿಯಾಗಿತ್ತು. ಬಳಿಕ ಪಾಕ್ ಹಾಗೂ ಭಾರತ ನಡುವಿನ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಇದರ ಮಧ್ಯೆ ಇದೀಗ ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಮಾತನಾಡಿದ್ದಾರೆ.
Advertisement
ಪ್ರಧಾನಿ ನರೇಂದ್ರ ಮೋದಿ ಭಾಷಣದ ಹೈಲೈಟ್ಸ್
- ಆಪರೇಷನ್ ಸಿಂದೂರದ ಯಶಸ್ವಿಯು ಭಾರತದ ನಾರಿ ಶಕ್ತಿಗೆ ಮುಡಿಪು
- ಬಹವಾಲಪುರ್ ಮತ್ತು ಮುರಿಡ್ಕೆಯು ಭಯೋತ್ಪಾದನೆಯ ವಿಶ್ವವಿದ್ಯಾಲಯ. ಇಡೀ ಪಾಕಿಸ್ತಾನವು ಉಗ್ರ ಕಾರ್ಯಾಲಯ.
- ಪಾಕಿಸ್ತಾನ ನಮ್ಮ ಹೆಣ್ಮಕ್ಕಳ ಸಿಂದೂರ ಅಳಿಸಲು ಯತ್ನಿಸಿತು. ನಾವು ಅವರ ಭಯೋತ್ಪಾದನಾ ಕೇಂದ್ರಗಳನ್ನೇ ಬುಡಮೇಲು ಮಾಡಿದೆವು.
- ಭಾರತದ ಸೇನಾ ಪಡೆಗಳ ಗುರಿ ಶತಕ ದಾಟಿದೆ. ಪಾಕಿಸ್ತಾನಕ್ಕೆ ಅದಕ್ಕೆ ಅರ್ಥವಾಗುವ ಭಾಷೆಯಲ್ಲಿ ತಿಳಿಸಲಾಗಿದೆ.
- ಪಾಕಿಸ್ತಾನದ ಸೇನೆಯು ಭಾರತದ ಸೇನೆಗೆ ಯಾವ ಸಾಟಿಯೂ ಅಲ್ಲ.
- ಪಾಕಿಸ್ತಾನವು ಬೆಂಬಲಿಸುವ ಉಗ್ರರ ಪ್ರತಿಯೊಂದು ಜಾಗವನ್ನೂ ಭಾರತದ ಸೇನಾ ಪಡೆಗಳು ತಲುಪಬಲ್ಲುವು.
- ಪಾಕಿಸ್ತಾನವು ಭಾರತದ ದಾಳಿ ತಡೆಯಲಾಗದೆ ಶಾಂತಿಗಾಗಿ ಬೇಡುವ ಪರಿಸ್ಥಿತಿ ಬಂತು.
- ಪಾಕಿಸ್ತಾನದ ಪರಮಾಣು ಬೆದರಿಕೆ ನಡೆಯಲ್ಲ. ಭಾರತವು ಉತ್ತರ ಕೊಟ್ಟೇ ಕೊಡುತ್ತದೆ. ಇದು ಹೊಸ ನಿಯಮ.
- ಭಯೋತ್ಪಾದಕರಿಗೂ, ಅವರನ್ನು ಬೆಂಬಲಿಸುವವರಿಗೂ ಯಾವ ವ್ಯತ್ಯಾಸ ಇಲ್ಲ.
- ಭಯೋತ್ಪಾದನೆ ಮತ್ತು ಮಾತುಕತೆ ಒಟ್ಟಿಗೆ ಸಾಧ್ಯವಿಲ್ಲ. ಭಯೋತ್ಪಾದನೆ ಮತ್ತು ವ್ಯಾಪಾರ ಒಟ್ಟಿಗೆ ಸಾಧ್ಯವಿಲ್ಲ.
- ನೀರು ಮತ್ತು ರಕ್ತ ಒಟ್ಟಿಗೆ ಹರಿಯಲು ಸಾಧ್ಯವಿಲ್ಲ.