ಬೆಂಗಳೂರು: ಮೈಸೂರಿನ ಮುಡಾ ಅಕ್ರಮ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಕಾನೂನಿನ ಸಂಕಷ್ಟ ಎದುರಾಗಿದೆ. ಥಾವರ್ ಚಂದ್ ಗೆಹ್ಲೋಟ್ ಅವರು ಇಂದು ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರೋದು ಶಾಕ್ ಆಗುವಂತೆ ಮಾಡಿದೆ.
ಇನ್ನೂ ಸಾಮಾಜಿಕ ಕಾರ್ಯಕರ್ತ ಟಿ.ಜೆ ಅಬ್ರಾಹಂ ಮಾತನಾಡಿದ್ದು, ಸೋಮವಾರ ಕೇವಿಯಟ್ ಹಾಕುತ್ತೇನೆ. ಸಣ್ಣ ಸ್ಪಷ್ಟನೆ, ಕ್ಲಾರಿಟಿ ಬೇಕಿತ್ತು ಅದಕ್ಕೆ ನನ್ನ ನೋಡಬೇಕು ಎಂದು ಗವರ್ನರ್ ಕರೆದಿದ್ದರು. ರಾಜ್ಯಪಾಲರನ್ನು ಭೇಟಿಯಾಗಿ ಆ ಬಗ್ಗೆ ಸ್ಪಷ್ಟನೆ ನೀಡಿದ್ದೇನೆ ಎಂದರು. ಇನ್ನು ಪ್ರಾಸಿಕ್ಯೂಷನ್‌ಗೆ ಗವರ್ನರ್ ಅನುಮತಿ ನೀಡಿದ ಪ್ರತಿಯನ್ನು ಕೋರ್ಟ್ಗೆ ಸಲ್ಲಿಸುತ್ತೇನೆ.
ಆ ಬಳಿಕ ಕೋರ್ಟ್ ನಿರ್ದೇಶನದಂತೆ ಎಫ್ಐಆರ್ ದಾಖಲಾಗಲಿದೆ. ಈಗಾಗಲೆ ಕೋರ್ಟ್ನಲ್ಲಿ ಈ ವಿಚಾರ ಇದೆ. ಲೋಕಾಯುಕ್ತಕ್ಕೆ ಸ್ಯಾಂಕ್ಷನ್ ಕಾಪಿಯನ್ನ ಕಳಿಸಲಾಗುತ್ತದೆ. ಈ ಹಿಂದೆ ಎಸ್ ಎಂ ಕೃಷ್ಣ, ಧರ್ಮಸಿಂಗ್, ಹೆಚ್‌ಡಿಕೆ, ನಿರಾಣಿ, ಜೊಲ್ಲೆ ಮೇಲೂ ಸಹ ದೂರು ನೀಡಿದ್ದೆ. ಆ ಕೇಸ್‌ನಲ್ಲಿ ಅನುಮತಿ ನೀಡದ ವಿಚಾರವಾಗಿ ಮಾತನಾಡಿ, ‘ ಅದು ನನಗೆ ಸಂಬಂಧ ಪಡದ ವಿಚಾರ ಮತ್ತು ರಾಜಕೀಯ ಆರೋಪಗಳಿಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.