ಸೌಂದರ್ಯ ಎನ್ನುವುದು ಮಹಿಳೆ ಅಥವಾ ಪುರುಷರಿಗೆ ಸೀಮಿತವಾದ ವಿಷಯವಲ್ಲ. ಪ್ರತಿಯೊಬ್ಬರೂ ಕೂಡ ತಾವು ಅಂದವಾಗಿ ಚಂದವಾಗಿ ಕಾಣಿಸಿಕೊಳ್ಳಬೇಕೆಂದು ಬಯಸುತ್ತಾರೆ. ಇದಕ್ಕಾಗಿ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡುತ್ತಾರೆ. ಮಹಿಳೆಯರಂತೂ ತಿಂಗಳಿಗೆ ಒಂದು ಬಾರಿ ಒಂದು ಸಂಪೂರ್ಣ ದಿನವನ್ನು ಬ್ಯೂಟಿ ಪಾರ್ಲರ್ ನಲ್ಲಿ ಕಳೆಯುತ್ತಾರೆ ಎಂದು ಹಲವು ಅಧ್ಯಯನಗಳು ಹೇಳುತ್ತವೆ. ತಮ್ಮ ದೇಹದ ಎಲ್ಲಾ ಅಂಗಗಳು ಶುಚಿಯಾಗಿರಬೇಕು ಎಂದು ಮಹಿಳೆಯರು ಬಯಸುತ್ತಾರೆ.
ಇನ್ನೂ ದೇಹದ ಮೇಲೆ ಬೆಳೆಯುವ ಈ ಅನಗತ್ಯ ಕೂದಲು ನಮ್ಮ ಅಂದವನ್ನು ಹಾಳು ಮಾಡುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಪಾರ್ಲರ್ ಹೋಗಿ ವ್ಯಾಕ್ಸಿಂಗ್ ಮಾಡಿಸಿಕೊಂಡರೆ ಯಾವುದೇ ಚಿಂತೆ ಇರುವುದಿಲ್ಲ. ಆದರೆ ಮನೆಯಲ್ಲಿ ವ್ಯಾಕ್ಸಿಂಗ್ ಮಾಡುವಾಗ ಬಹಳ ಎಚ್ಚರಿಕೆಗೆ ಅಗತ್ಯ.
ನೀವು ವ್ಯಾಕ್ಸಿಂಗ್ ಮಾಡುವ ಮೊದಲು ನಿಮ್ಮ ಚರ್ಮವನ್ನು ಅದಕ್ಕೆ ಸಿದ್ಧ ಮಾಡಬೇಕು. ದೇಹದಲ್ಲಿ ಕೊಳಕು, ಬೆವರು ಇದ್ದರೆ ವ್ಯಾಕ್ಸಿಂಗ್ ಮಾಡಬಾರದು ಎನ್ನುತ್ತಾರೆ ತಜ್ಞರು. ಹಾಗಾಗಿ ಚರ್ಮವನ್ನು ಸ್ವಚ್ಛ ಮಾಡುವುದು ಮುಖ್ಯ.
ವ್ಯಾಕ್ಸಿಂಗ್ ಮಾಡುವ ಮೊದಲು ನಿಮ್ಮ ಚರ್ಮವನ್ನು ಬೆಚ್ಚಗಿನ ನೀರಿನಿಂದ ತೊಳೆದು ಒಣಗಿಸಿ, ನಂತರ ಅದಕ್ಕೆ ಪ್ರೀ ವ್ಯಾಕ್ಸಿಂಗ್ ಕ್ರೀಮ್ಗಳನ್ನು ಹಚ್ಚಿ. ಇದು ವ್ಯಾಕ್ಸಿಂಗ್ ನಂತರ ಉಂಟಾಗುವ ಚರ್ಮದ ತುರಿಕೆ ತಡೆಯುತ್ತದೆ.
ಮನೆಯಲ್ಲಿ ವ್ಯಾಕ್ಸಿಂಗ್ ಮಾಡುವಾಗ ನಾವು ಮಾಡುವ ದೊಡ್ಡ ತಪ್ಪು ಎಂದರೆ ಅತಿಯಾದ ವ್ಯಾಕ್ಸ್ ಬಳಕೆ ಮಾಡುವುದು. ನೀವು ಜಾಸ್ತಿ ವ್ಯಾಕ್ಸ್ ಬಳಸಿದರೆ ಕೂದಲು ಸುಲಭವಾಗಿ ಬರುವುದಿಲ್ಲ, ಅಡ್ಡ ದಿಡ್ಡಿ ಕಟ್ ಆಗುತ್ತದೆ.
ವ್ಯಾಕ್ಸಿಂಗ್ ಮಾಡುವಾಗ ನಾವು ಆ ವ್ಯಾಕ್ಸ್ ಅನ್ನು ಸರಿಯಾದ ತಾಪಮಾನದಲ್ಲಿ ಬಿಸಿ ಮಾಡುವುದು ಮುಖ್ಯ. ನೀವು ಮಿಸ್ ಆಗಿ ಸಹ ಜಾಸ್ತಿ ಬಿಸಿ ಮಾಡಿದರೆ ನಿಮ್ಮ ಚರ್ಮಕ್ಕೆ ಹಾನಿ ಮಾತ್ರವಲ್ಲದೇ, ಕೂದಲು ಬೆಳವಣಿಗೆಯ ಮೇಲೆ ಸಹ ಪರಿಣಾಮ ಬೀರುತ್ತದೆ.
ಹಾಗೆಯೇ ಅತಿಯಾಗಿ ತಣ್ಣಗೆ ಸಹ ಇರಬಾರದು. ವ್ಯಾಕ್ಸ್ ತಣ್ಣಗೆ ಇದ್ದರೆ ಕೂದಲು ಸುಲಭವಾಗಿ ಬರುವುದಿಲ್ಲ. ಅರ್ಧಕ್ಕೆ ಕಟ್ ಆಗುತ್ತದೆ. ನೀವು ವ್ಯಾಕ್ಸ್ ಅನ್ನು ಹಚ್ಚುವ ಮೊದಲು ಎಷ್ಟು ಬಿಸಿ ಇದೆ ಎಂದು ನೋಡಿಕೊಂಡು ಬಳಕೆ ಮಾಡಬೇಕು.
ವ್ಯಾಕ್ಸ್ ಮಾಡುವಾಗ ನೋವಾಗುತ್ತದೆ, ಇದು ಸಾಮಾನ್ಯ. ಆದರೆ ಚರ್ಮಕ್ಕೆ ಯಾವುದೇ ರೀತಿಯ ಗಾಯವಾಗಿದ್ದರೆ ವ್ಯಾಕ್ಸ್ ಮಾಡಬಾರದು ಎನ್ನುತ್ತಾರೆ ತಜ್ಞರು. ಇದರಿಂದ ನೋವು ಹೆಚ್ಚಾಗುತ್ತದೆ ಮತ್ತು ಗಾಯ ಬೇಗ ಗುಣವಾಗುವುದಿಲ್ಲ.
ವ್ಯಾಕ್ಸಿಂಗ್ ಸ್ಟ್ರಿಪ್ ಅನ್ನು ಬೇಗ ತೆಗೆಯಬೇಕು. ನಿಧಾನವಾಗಿ ತೆಗೆದರೆ ನೋವು ಕಡಿಮೆ ಆಗುತ್ತದೆ ಎಂದು ಎಲ್ಲರೂ ಭಾವಿಸಿದ್ದಾರೆ, ಆದರೆ ಅದು ತಪ್ಪು. ಬೇಗ ಸ್ಟ್ರಿಪ್ ಅನ್ನು ಎಳೆದರೆ ನೋವು ಕಡಿಮೆ ಇರುತ್ತದೆ ಮತ್ತು ಕೂದಲು ಸಹ ಆಳದಿಂದ ಬರುತ್ತದೆ.