ಕೊರೋನಾದಲ್ಲಿ ಜನ ಸೇವೆ ಮಾಡಿದ್ದ ಖ್ಯಾತ ವೈದ್ಯ ಆತ್ಮಹತ್ಯೆ…
ರೋಣ: ಮರಳು ದಂಧೆಗೆ ವೈದ್ಯನೊಬ್ಬ ಬಲಿಯಾದ ಘಟನೆ ಜರುಗಿದೆ. ಮರಳು ದಂಧೆಯಲ್ಲಿ ಉಂಟಾದ ಹಣಕಾಸಿನ ಒತ್ತಡದಿಂದ ಖ್ಯಾತ ವೈದ್ಯ ಶಶಿಧರ ಹಟ್ಟಿ (46) ಎಂಬುವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರೋಣ ತಾಲೂಕಿನ ಹಿರೇಹಾಳ ಗ್ರಾಮದ ವೈದ್ಯ ಶಶಿಧರ ಹಟ್ಟಿ ಎಂಬುವವರು ಎರಡು ಮೂರು ಪುಟಗಳ ಡೆತ್ ನೋಟ್ ಬರೆದಿಟ್ಟು ಮನೆಯಲ್ಲೇ ಲುಂಗಿಯಿಂದ ನೇಣಿಗೆ ಶರಣಾಗಿದ್ದಾರೆ.
ಕಳೆದ ಮೂರು ತಿಂಗಳ ಹಿಂದೆ ರೋಣ ತಾಲೂಕಿನ ಹೊಳೆಮಣ್ಣೂರು ಬಳಿ ಮರಳಿನ ಪಾಯಿಂಟ್ ಮಾಡಿಕೊಂಡಿದ್ದ ರಾಜು ಶಿರಗುಂಪಿ, ಅಶೋಕ ವಾಸವಿ ಶೆಟ್ಟರ್, ಗಜೇಂದ್ರಗಡ ತಾಲೂಕಿನ ಸರ್ಜಾಪೂರ ಗ್ರಾಮದ ಶರಣಗೌಡ ಎಲ್ ಪಾಟೀಲ ಹಾಗೂ ಇನ್ನೂ ಕೆಲವರ ಜೊತೆ ವೈದ್ಯ ಶಶಿಧರ ಮರಳು ವ್ಯವಹಾರ ಮಾಡುತ್ತಿದ್ದರು.
ಆರೋಪಿ ಶರಣಗೌಡ ಪಾಟೀಲ, ವೈದ್ಯ ಶಶಿಧರಗೆ ನಿತ್ಯವೂ ಮರಳಿನ ವ್ಯವಹಾರದ ಲೆಕ್ಕ ಪತ್ರ, ಹಣ ಕೊಡುವಂತೆ ಒತ್ತಡ ಹಾಕುತ್ತಿದ್ದ ಎಂದು ಆರೋಪಿಸಲಾಗಿದೆ. ಈ ಕುರಿತು ವೈದ್ಯ ಶಶಿಧರ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸುದ್ದಿ ತಿಳಿದು ರೋಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಕುರಿತು ರೋಣ ಪೊಲೀಸ್ ಠಾಣೆಗೆ ವೈದ್ಯ ಶಶಿಧರ ಅವರ ಪತ್ನಿ ದೂರು ನೀಡಿದ್ದು, 24/2024 ಐಪಿಸಿ ಕಲಂ-306 ಅಡಿಯಲ್ಲಿ ಶರಣಗೌಡ ಪಾಟೀಲ ವಿರುದ್ಧ ರೋಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.