ವಿಜಯಸಾಕ್ಷಿ ಸುದ್ದಿ, ಗದಗ :‘A Frame Work for Portability and Interoperability in Heterogeneous Cloud Computing Environments’ ಕಂಪ್ಯೂಟರ್ ಸೈನ್ಸ್ ಹಾಗೂ ಇಂಜೀನಿಯರಿಂಗ್ ವಿಷಯದ ಮೇಲೆ ಮಹಾಪ್ರಬಂಧವನ್ನು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ ಪ್ರಯುಕ್ತ ತೇಜ ಚನ್ನಯ್ಯ ಹಿರೇಮಠ ಇವರಿಗೆ ಡಾಕ್ಟರೇಟ್ ಪದವಿ ಸಂದಿದೆ.
ಇವರು ಮೈಸೂರಿನ ನ್ಯಾಷನಲ್ ಇಸ್ಟಿಟ್ಯೂಟ್ ಆಫ್ ಇಂಜೀನಿಯರಿಂಗ್ ಕಾಲೇಜಿನಲ್ಲಿ ಡಾ. ರೇಖಾ ಕೆ.ಎಸ್. ಇವರ ಮಾರ್ಗದರ್ಶನದಲ್ಲಿ ಸತತ ನಾಲ್ಕು ವರ್ಷ ಅಧ್ಯಯನಗೈದಿದ್ದಾರೆ. ತೇಜ ಅವರ ತಂದೆ ಚನ್ನಯ್ಯ ಹಿರೇಮಠ ಇವರು ಶ್ರೀ ತೋಂಟದಾರ್ಯ ಮಠದಲ್ಲಿ ಮ್ಯಾನೇಜರ ಆಗಿ, ಕಾರ್ಯಕರ್ತರಾಗಿ ಸುಮಾರು ಆರು ದಶಕಗಳಿಂದ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಘನತೆವೆತ್ತ ರಾಜ್ಯಪಾಲರಾದ ಥಾವರಚಂದ ಗೆಹ್ಲೋಟ ಇವರ ಸಮ್ಮುಖದಲ್ಲಿ ವ್ಹಿಟಿಯು ಕುಲಪತಿಗಳು ತೇಜ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.