ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ದರ್ಶನ್ ಹಾಗೂ ಆತನ ಸಹಚರರು ಜೈಲು ಸೇರಿದ್ದಾರೆ. ಹೈಕೋರ್ಟ್ ನಲ್ಲಿ ಜಾಮೀನು ಪಡೆದರು ಸುಪ್ರೀಂ ಕೋರ್ಟ್ ನಲ್ಲಿ ಜಾಮೀನು ನಿರಾಕರಣೆಯಾಗಿ ಮತ್ತೆ ಜೈಲು ಸೇರುವಂತಾಗಿದೆ. ಈ ಹಿಂದೆ ಬೆನ್ನು ನೋವಿನ ಕಾರಣ ಹೇಳಿ ಹೈಕೋರ್ಟ್ ನಲ್ಲಿ ದರ್ಶನ್ ಜಾಮೀನು ಪಡೆದಿದ್ದರು. ಆದರೆ ಇದೀಗ ದಾಸನಿಗೆ ಮತ್ತೆ ಜೈಲಿನಲ್ಲಿ ಬೆನ್ನು ನೋವು ಕಾಡುತ್ತಿದೆಯಂತೆ. ಹೀಗಾಗಿ ಜೈಲು ಆಸ್ಪತ್ರೆಯ ವೈದ್ಯರು ಹಾಗೂ ಬೆಂಗಳೂರಿನ ಸಿ.ವಿ.ರಾಮನ್ ಆಸ್ಪತ್ರೆಯ ವೈದ್ಯರು ನಟ ದರ್ಶನ್ ರನ್ನು ತಪಾಸಣೆ ಮಾಡಿ, ಫಿಸಿಯೋ ಥೆರಪಿಗೆ ಸಲಹೆಯನ್ನು ನೀಡಿದ್ದಾರೆ. ಫಿಸಿಯೋ ಥೆರಪಿ ಜೊತೆಗೆ ಹೀಟಿಂಗ್ ಬೆಲ್ಟ್ ನೀಡಲು ವೈದ್ಯರು ಜೈಲು ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ.
ಈ ಹಿಂದೆ ಜೈಲಿನಲ್ಲಿದ್ದ ವೇಳೆ ದರ್ಶನ್ ಗೆ ವಿಪರೀತ ಬೆನ್ನು ನೋವು ಕಾಣಿಸಿಕೊಂಡಿತ್ತು. ಈ ವೇಳೆ ವೈದ್ಯರು ಆಪರೇಷನ್ ಮಾಡಿಸಿಕೊಳ್ಳುವಂತೆ ಸೂಚಿಸಿದ್ದರು. ಆದ್ರೆ ಜೈಲಿನಿಂದ ಹೊರ ಬಂದ ಬಳಿಕ ಅಪರೇಷನ್ ಮಾಡಿಸಿಕೊಂಡಿರಲಿಲ್ಲ. ಇದೀಗ ಮತ್ತೆ ದರ್ಶನ್ ಜೈಲು ಸೇರಿದ್ದು ಬೆನ್ನು ನೋವು ಮತ್ತೆ ಕಾಣಿಸಿಕೊಂಡಿದೆ. ಹೀಗಾಗಿ ವೈದ್ಯರು ದರ್ಶನ್ ಗೆ ನೆಲದ ಮೇಲೆ ಕೂರದಂತೆ ಜೊತೆಗೆ ವಾರಕ್ಕೆ 2 ಬಾರಿ ಫಿಸಿಯೋಥೆರಫಿ ನೀಡುವಂತೆ ಸೂಚಿಸಿದ್ದಾರೆ.
ಇದರ ಜೊತೆಗೆ ದರ್ಶನ್ ಗೆ ಬಲಗೈ ಶಸ್ತ್ರಚಿಕಿತ್ಸೆ ಆಗಿದೆ. ಹೀಗಾಗಿ ಹೀಟಿಂಗ್ ಬೆಲ್ಟ್ ನೀಡಲು ವೈದ್ಯರ ಸಲಹೆ ನೀಡಿದ್ದಾರೆ. ಈ ಹಿಂದೆ ಆಪರೇಷನ್ ಮಾಡಿ ಕೈಗೆ ರಾಡ್ ಅನ್ನು ವೈದ್ಯರು ಹಾಕಿದ್ದಾರೆ.
ಕೈ ಒಳಗೆ ರಾಡ್ ಇರುವುದರಿಂದ ಕೋಲ್ಡ್ ಆಗಿ ಮತ್ತೆ ನೋವಾಗುವ ಸಾಧ್ಯತೆ ಇದೆ. ಹೀಗಾಗಿ ಆಪರೇಷನ್ ಆಗಿರುವ ಭಾಗಕ್ಕೆ ಹೀಟಿಂಗ್ ಬೆಲ್ಟ್ ನೀಡುವಂತೆ ವೈದ್ಯರ ಸೂಚನೆ ನೀಡಿದ್ದಾರೆ. ಜೈಲಿನಲ್ಲಿರುವ ದರ್ಶನ್ ಓಡದಂತೆ, ನೆಗೆಯದಂತೆ, ನೆಲದ ಮೇಲೆ ಕೂರದಂತೆ ಸಲಹೆ ನೀಡಲಾಗಿದೆ.
ಜೈಲಿನಲ್ಲಿ ಬೆನ್ನುನೋವಿನಿಂದ ಬಳಲುತ್ತಿರೋ ದರ್ಶನ್ ಗೆ ಒಂದು ಚೇರ್ ನೀಡಲು ಸಹ ಸಲಹೆ ನೀಡಲಾಗಿದೆ. … ಅಕ್ಟೋಬರ್ 10 ರಂದು ಚೇರ್ ಮತ್ತು ಹೀಟಿಂಗ್ ಬೆಲ್ಟ್ ಒದಗಿಸಲು ವೈದ್ಯರು ಸಲಹೆ ನೀಡಿದ್ದರು. ಸಲಹೆ ನೀಡಿ 9 ದಿನ ಕಳೆದರೂ ದರ್ಶನ್ ಗೆ ಇನ್ನೂ ಚೇರ್ ಮತ್ತು ಹೀಟಿಂಗ್ ಬೆಲ್ಟ್ ನೀಡಿಲ್ಲ. ಮತ್ತೊಂದೆಡೆ ನಟ ದರ್ಶನ್‌ಗೆ ಜೈಲಿನಲ್ಲಿ ಒದಗಿಸಿರುವ ಸೌಲಭ್ಯಗಳ ಬಗ್ಗೆ ಬೆಂಗಳೂರಿನ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜಡ್ಜ್ ವರದರಾಜ್ ಅವರು ಜೈಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜೈಲು ಮ್ಯಾನ್ಯುಯಲ್ ಪ್ರಕಾರ ನಟ ದರ್ಶನ್‌ಗೆ ಸೌಲಭ್ಯ ನೀಡಲಾಗಿದೆ. ನಟ ದರ್ಶನ್ ಇನ್ನೂ ವಿಚಾರಣಾಧೀನ ಖೈದಿ ಆಗಿರುವುದರಿಂದ ಹೆಚ್ಚಿನ ಸೌಲಭ್ಯ ನೀಡಲು ಜೈಲು ಮ್ಯಾನ್ಯುಯಲ್ ನಲ್ಲಿ ಅವಕಾಶ ಇಲ್ಲ. ಆದರೆ, ಕೆಲವೊಂದು ಸೌಲಭ್ಯ ನೀಡಬೇಕೆಂದು ಶಿಫಾರಸ್ಸು ಮಾಡಲಾಗಿದೆ.
ಈ ವರದಿಯನ್ನು ಬೆಂಗಳೂರಿನ 64ನೇ ಸೆಷನ್ಸ್ ಕೋರ್ಟ್ ಗೆ ಸಲ್ಲಿಸಲಾಗಿದೆ. ಈ ವರದಿಯ ಮಾಹಿತಿ ತಿಳಿದ ಬಳಿಕ ನಟ ದರ್ಶನ್ ಜೈಲಿನಲ್ಲಿ ಕೂಗಾಡಿದ್ದಾರೆ. ನಾನು ಜೈಲಿನಲ್ಲಿ ಹೀಗೆ ಇರಬೇಕಾ, ನನಗೇನೂ ಸೌಲಭ್ಯ ಕೊಡಲ್ವಾ ಎಂದೆಲ್ಲಾ ಕೂಗಾಡಿದ್ದಾರಂತೆ. ದರ್ಶನ್ ಸಹಚರ ನಾಗರಾಜ್ ದರ್ಶನ್ ರನ್ನು ಸಮಾಧಾನ ಮಾಡಿದ್ದಾರೆ. ಆದ್ರೆ ಉಳಿದ ಸಹ ಖೈದಿಗಳ ದರ್ಶನ್ ಸಹವಾಸವೇ ಬೇಡ ಎಂದು ದೂರವೇ ಉಳಿದಿದ್ದಾರೆ.