ಕ್ಯಾನ್ಸರ್ ನಿಂದ ಬಳಲುತ್ತಿದ್ದ ನಟ ಶಿವರಾಜ್ ಕುಮಾರ್ ಅಮೆರಿಕದ ಮಿಯಾಮಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ. ಸರ್ಜರಿ ಬಳಿಕ ಮಾತನಾಡಿದ ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್ ಅಭಿಮಾನಿಗಳು ನಮಗೆ ದೇವರ ರೀತಿ. ಅದೇ ರೀತಿ ಇದೀಗ ಡಾಕ್ಟರ್ ಕೂಡ ನಮ್ಮ ಪಾಲಿಗೆ ದೇವರಾಗಿದ್ದಾರೆ ಎಂದಿದ್ದಾರೆ.
ಶಿವರಾಜ್‌ಕುಮಾರ್ ಸರ್ಜರಿ ಯಶಸ್ವಿಯಾದ ಬಳಿಕ ವೀಡಿಯೋ ಮೂಲಕ ಮಾತನಾಡಿದ ಅವರು, ಶಿವಣ್ಣ ಆಪರೇಷನ್ ಯಶಸ್ವಿಯಾಗಿದೆ. ಈಗ ಶಿವಣ್ಣ ಅವರನ್ನು ಐಸಿಯುಗೆ ಶಿಫ್ಟ್ ಮಾಡಿದ್ದಾರೆ. ಶಿವರಾಜ್‌ಕುಮಾರ್‌ಗಾಗಿ ನೀವೆಲ್ಲರೂ ಪೂಜೆಗಳನ್ನು ಮಾಡಿ ಅವರಿಗೆ ಒಳ್ಳೆಯದಾಗಲಿ ಎಂದು ಬಯಸಿದ್ದೀರಿ, ಆಶೀರ್ವಾದ ಕೂಡ ಮಾಡಿದ್ದೀರಿ. ಇವತ್ತು ಶಿವಣ್ಣ ಅವರ ಆಪರೇಷನ್ ಯಶಸ್ವಿಯಾಗಲು ಡಾ. ಮನೋಹರನ್ ಅವರೇ ಕಾರಣ ಎಂದು ಹೇಳಿದ್ದಾರೆ.
ಸದ್ಯದಲ್ಲೇ ಶಿವರಾಜ್‌ಕುಮಾರ್ ಅವರು ನಿಮ್ಮ ಜೊತೆ ಮಾಡನಾಡಲಿದ್ದಾರೆ. ಆಪರೇಷನ್‌ನಿಂದಾಗಿ ಸುಸ್ತಾಗಿರುವುದರಿಂದ ಇನ್ನು 3-4 ದಿನಗಳಲ್ಲಿ ನಿಮ್ಮ ಜೊತೆ ಮಾತನಾಡಲಿದ್ದಾರೆ. ನಿಮ್ಮ ಪ್ರೀತಿ ವಿಶ್ವಾಸಕ್ಕೆ ನಾನು ಯಾವಾಗಲು ಚಿರಋಣಿ. ಇದನ್ನು ನಾನು ಜನ್ಮದಲ್ಲಿ ಮರೆಯಲ್ಲ ಎಂದು ಗೀತಕ್ಕ ಧನ್ಯವಾದ ತಿಳಿಸಿದ್ದಾರೆ.