ವಿಜಯಸಾಕ್ಷಿ ಸುದ್ದಿ, ಗದಗ : ನಗರದ ಕೆಎಲ್‌ಇ ಸಂಸ್ಥೆಯ ಸಿಬಿಎಸ್‌ಇ ಶಾಲೆಯಲ್ಲಿ ವೈದ್ಯರ ದಿನಾಚರಣೆ ಕಾರ್ಯಕ್ರಮವನ್ನು ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಡಾ. ಬಾಳೇಶ ಸಿರಗುಂಪಿ ಮಾತನಾಡಿ, ಜೀವನದಲ್ಲಿ ಉತ್ತಮವಾದ ಅರೋಗ್ಯವನ್ನು ಕಾಪಾಡಿಕೊಳ್ಳಬೇಕು. ಉತ್ತಮವಾದ ಆಹಾರ ಪದಾರ್ಥಗಳನ್ನು ಸೇವಿಸಬೇಕು ಎಂದು ನುಡಿದರು.
ಅಧ್ಯಕ್ಷತೆ ವಹಿಸಿದ್ದ ಶಾಲೆಯ ಪ್ರಾಂಶುಪಾಲೆ ಕಲ್ಪನಾ ಚಚಡಿ ಮಾತನಾಡಿ, ಸುಂದರ ಪರಿಸರ, ಒಳ್ಳೇಯ ಆಹಾರ ಸೇವನೆ ಮತ್ತು ನಿತ್ಯ ವ್ಯಾಯಾಮದಿಂದ ಆರೋಗ್ಯಪೂರ್ಣವಾಗಿ ಬದುಕಬಹುದು ಎಂದರು. ಡಾ. ಬಾಳೇಶ ಸಿರಗುಂಪಿ ಅವರ ಸೇವಾ ಮನೋಭಾವನೆಯನ್ನು ಮೆಚ್ಚಿ ಸತ್ಕರಿಸಲಾಯಿತು.
ಸಾಚಿ ಕುಡತರಕರ ಅತಿಥಿಗಳನ್ನು ಸ್ವಾಗತಿಸಿದರು. ವಿಶ್ವಾಸ ಅತಿಥಿಗಳನ್ನು ಪರಿಚಯಿಸಿದರು. ಶ್ರಿಯಾ ಜೋಶಿ, ಸೀಯಾ ಪುಂಗಾಲಿಯಾ ಕಾರ್ಯಕ್ರಮ ನಿರೂಪಿಸಿದರು. ಸ್ವಾತಿ ಹುಬ್ಬಳ್ಳಿ ವಂದಿಸಿದರು. ಸುರೇಖಾ ಕದಂ ಹಾಗೂ ವಿಜ್ಞಾನ ವಿಭಾಗದ ಶಿಕ್ಷಕರು ಕಾರ್ಯಕ್ರಮ ಆಯೋಜಿಸಿದ್ದರು.