ವೈದ್ಯರ ಪ್ರತಿಭಟನೆ: ಒಪಿಡಿ ಸೇವೆ ಇಲ್ಲದೆ ಹಾವೇರಿ ಆಸ್ಪತ್ರೆಗಳಲ್ಲಿ ರೋಗಿಗಳ ಪರದಾಟ

0
Spread the love

ಹಾವೇರಿ: ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯೆ ವಿಧ್ಯಾರ್ಥಿಯ ಅತ್ಯಾಚಾರ-ಕೊಲೆಯನ್ನು ವಿರೋಧಿಸಿ ಹಾವೇರಿಯಲ್ಲಿ ಖಾಸಗಿ, ಸರ್ಕಾರಿ ಆಸ್ಪತ್ರಗಳ ಓಪಿಡಿ ಬಂದ್ ಮಾಡಲಾಗಿದೆ. ವೈಧ್ಯಕೀಯ ವಿಧ್ಯಾರ್ಥಿನಿ ಮೌಮಿತಾ ಕೊಲೆಗೆ ವ್ಯಾಪಕ ‌ಖಂಡನೆ ವ್ಯಕ್ತವಾಗಿದ್ದು, ಹಾವೇರಿ ಜಿಲ್ಲಾಸ್ಪತ್ರೆಯ ಮುಂಭಾಗದಲ್ಲಿ ಬಿತ್ತಿಪತ್ರ ಹಿಡಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಐಎಂಎ ಸೇರಿದಂತೆ ಹಲವು ಸಂಘಟನೆಗಳು ಸೇರಿದಂತೆ ವೈದ್ಯರು ಒಪಿಡಿ ಬಂದ್ ಮಾಡುವ ಮೂಲಕ ಮುಷ್ಕರ ಮಾಡುತ್ತಿದ್ದಾರೆ. ಇನ್ನೂ ಕೇವಲ ತುರ್ತುಸೇವೆ ಮತ್ತು ಎಮರ್ಜೆನ್ಸಿ ಆಪರೇಷನ್ ಮಾತ್ರ ಮಾಡಲಾಗುತ್ತದೆ. ಆದ್ದರಿಂದ ಜಿಲ್ಲಾಸ್ಪತ್ರೆ ಮುಂದೆ ಮಕ್ಕಳು, ಪೋಷಕರು ಪರದಾಟ ನಡೆಸುವಂತ ಪರಿಸ್ಥಿತಿ ಏರ್ಪಟ್ಟಿದೆ.


Spread the love

LEAVE A REPLY

Please enter your comment!
Please enter your name here