ದೊಡ್ಡಬಳ್ಳಾಪುರ: ಕಾಶ್ಮೀರ ಪ್ರವಾಸ ಕೈಗೊಂಡಿದ್ದ 90 ಮಂದಿ ರೈತರು ಸೇಫ್..!

0
Spread the love

ದೊಡ್ಡಬಳ್ಳಾಪುರ: ಜಮ್ಮು ಕಾಶ್ಮೀರದ ಅನಂತ್​ನಾಗ್​ ಜಿಲ್ಲೆಯ ಪಹಲ್ಗಾಮ್​ ನಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ 26 ಮಂದಿ ಪ್ರಾಣ ಕಳೆದುಕೊಂಡಿದ್ದು, 10ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಇದರ ಬೆನ್ನಲ್ಲೇ ಕಾಶ್ಮೀರ ಪ್ರವಾಸ ಕೈಗೊಂಡಿದ್ದ 90 ಮಂದಿ ಪ್ರವಾಸಿಗರು ಸುರಕ್ಷಿತವಾಗಿದ್ದಾರೆ ಎಂದು ತಿಳಿದು ಬಂದಿದೆ..

Advertisement

ತಾಲೂಕಿನ ಸುತ್ತಾಮುತ್ತಲಿನ ತಿರುಮಗೊಂಡನಹಳ್ಳಿ ಹಾಡೋನಹಳ್ಳಿ, ವಡ್ಡರಹಳ್ಳಿ ಲಕ್ಷ್ಮೀದೇವಿಪುರ,  ತಿಮ್ಮೋಜನಹಳ್ಳಿ, ತೂಬಗೆರೆ, ಹೀರೆಮುದ್ದೇನಹಳ್ಳಿ, ನೆಲಗುದಿಗೆ ಗ್ರಾಮಗಳಿಂದ 90 ಮಂದಿ 9 ದಿನಗಳ ಜಮ್ಮು ಕಾಶ್ಮೀರ ಪ್ರವಾಸ ಕೈಗೊಂಡಿದ್ದರು.

ಏ.19 ರಂದು 7 ವಿಮಾನಗಳಲ್ಲಿ  ಟ್ರಾವೆಲ್ ಏಜೆನ್ಸಿ ಮೂಲಕ ಟಿಕೆಟ್ ಬುಕ್ಕಿಂಗ್ ಮಾಡಿಕೊಂಡು ದೇವನಹಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೂಲಕ ದೆಹಲಿಗೆ ತೆರಳಿ ಅಲ್ಲಿಂದ ಅಮೃತಸರದಲ್ಲಿ ಎಲ್ಲರೂ ಒಟ್ಟಾಗಿ ಸೇರಿದ್ದರು.

ಏ.17 ಕ್ಕೆ ಪ್ರವಾಸಿಗರು ಪ್ರವಾಸ ಕಯುಗೊಳ್ಳ ಬೇಕಿತ್ತು.ಕಾರಣಾಂತರದಿಂದ ಎರಡು ದಿನಗಳ ಕಾಲ ಪ್ರವಾಸ ಮುಂದಕ್ಕೆ ಹೋದ ಕಾರಣ ಇವರು ಕಾಶ್ಮೀರಕ್ಕೆ ಹೋಗುವ ಬದಲು ಅಮೃತಸರದಲ್ಲಿ ಪ್ರೇಕ್ಷಣೀಯ ಸ್ಥಳಗಳನ್ನು ನೋಡಿಕೊಂಡು ಬಳಿಕ ಶ್ರೀನಗರಕ್ಕೆ ಪ್ರವಾಸ ತೆರಳಿದ್ದರು.

ಇವರು ಉಳಿದುಕೊಳ್ಳಬೇಕಾದ ಹೋಟೆಲ್ ಉಗ್ರರ ದಾಳಿಗೆ ಒಳಗಾದ ಪಹಲ್ಗಾಮ್‌ನ ಬೈಸರನ್ ಸಮೀಪದಲ್ಲಿಯೇ ಎರಡು ದಿನಗಳ ಕಾಲ ಉಳಿದುಕೊಳ್ಳಲು ಕೊಠಡಿಗಳನ್ನು ಕಾಯ್ದಿರಿಸಿದ್ದರು.  ಆದರೆ, ಆ ರಸ್ತೆಯಲ್ಲಿ ಬೆಟ್ಟ ಕುಸಿದು ಸಂಚಾರ ಸ್ಥಗಿತಗೊಂಡ ಕಾರಣ ಮಾರ್ಗ ಬದಲಿಸಿದ ಬೆಂಗಳೂರಿನ 15 ಜನ ಸೇರಿದಂತೆ 110 ಮಂದಿಯ ಪ್ರವಾಸಿಗರು, ಕಟ್ರಾ ವೈಷ್ಣವಿ ದೇವಿ ದರ್ಶನ ಮುಗಿಸಿ, ಕುನುಮೊನಾಲಿಗೆ ಹಿಂತಿರುಗಿದ್ದಾರೆ.


Spread the love

LEAVE A REPLY

Please enter your comment!
Please enter your name here