ದೊಡ್ಡಬಳ್ಳಾಪುರ: ಕಾಡಂಚಿನ ಗ್ರಾಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಚಿರತೆ ಹಾವಳಿ ಅರಣ್ಯ ಪ್ರದೇಶದಿಂದ ಹೊರತಾದ ಗ್ರಾಮಗಳಲ್ಲಿಯೂ ಹೆಚ್ಚಾಗಿದ್ದು, ಹಸು ಮೇಯಿಸುವವರು, ಕುರಿಗಾಹಿಗಳು ಹೊಲಗಳಲ್ಲಿ ನಿರ್ಭಯವಾಗಿ ಮೇಯಿಸಲು ಆತಂಕಪಡುವ ಸ್ಥಿತಿ ಎದುರಾಗಿದೆ.
Advertisement
ಹೌದು ಕೊಟ್ಟಿಗೆಯಲ್ಲಿದ್ದ ಹಸುವಿನ ಮೇಲೆ ದಾಳಿ ನಡೆಸಿ ತಿಂದು ಎಸ್ಕೆಪ್ ಆಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ತಂಬೆನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಂಜಪ್ಪ ಎಂಬುವವರ ಹಸುವಿನ ಮೇಲೆ ಚಿರತೆ ದಾಳಿ ಮಾಡಲಾಗಿದ್ದು, ಹಸುವನ್ನ ತಿಂದು ಹಾಕಿ ಚಿರತೆ ಎಸ್ಕೆಪ್ ಆಗಿದೆ. ಇದನ್ನು ಜನರು ಕಂಡು ಭಯಬೀತರಾಗಿದ್ದು, ಚಿರತೆ ಸೆರೆಯಿಡಿಯಲು ಅರಣ್ಯ ಇಲಾಖೆ ಬೋನ್ ಅಳವಡಿಸುವಂತೆ ಒತ್ತಾಯ ಮಾಡಿದ್ದಾರೆ.